ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು
ಗಂಡು ಸರಿದಾರಿಯಲಿ ನಡೆವನು ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು; ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು ತಗುಲಿ ಅವನೆದೆಗಾರಿಕೆಯನೇ ಕದಿವ ತನಕ !
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :
ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||
-ಹಂಸಾನಂದಿ
ಕೊ. ಹಿತೋಪದೇಶದಲ್ಲೂ ಇದೇ ಪದ್ಯದ ಪಾಠಾಂತರವೊಂದು ಇರುವಂತೆ ತೋರುತ್ತದೆ.
ಕೊ.ಕೊ: "ಶ್ರವಣಪಥಗತಾ ನೀಲ ಪಕ್ಷ್ಮಾಣ" ಮೊದಲಾದ ಪದಪುಂಜಗಳಿಗೆ ಪ್ರತಿಪದಾರ್ಥವಿಲ್ಲದಿದ್ದರೂ, ನಡಿಗೆ ಸ್ವಲ್ಪ ಎಡವುತ್ತಿದ್ದರೂ, ಪದ್ಯದ ಭಾವವನ್ನು ಹಿಡಿದಿಡುವ ಪ್ರಯತ್ನವಿಲ್ಲಿದೆ.
Rating