ಹುಲಿ ಇದ್ದ ಜಾಗದಲ್ಲಿ ಇಲಿ
ನಾವೆಲ್ಲ ಹೆದರಿ ಹೋಗಿದ್ದೆವು.ಕೆಲವು ಅಧಿಕಾರಿಗಳಿರುತ್ತಾರೆ.ಅವರು ಯಾವ ಇಲಾಖೆಯಲ್ಲಿದ್ದರೂ ಆ ಇಲಾಖೆಗೆ ಒಂದು ಗೌರವ ಒಂದು ಘನತೆ ತಂದು ಕೊಡುತ್ತಾರೆ.ಉದಾಹರಣೆಗೆ ಚುನಾವಣಾ ಆಯೋಗದ ಟಿ.ಎನ್.ಶೇಷನ್,ಕೊಂಕಣ ರೈಲ್ವೆ,ದೆಹಲಿ ಮೆಟ್ರೋ ಖ್ಯಾತಿಯ ಶ್ರಿದರನ್,ಪೋಲಿಸ್ ಇಲಾಖೆಯ ಕಿರಣ್ ಬೇಡಿ,ದಕ್ಶಿಣ ಕನ್ನಡ ಜಿಲ್ಲೆ ಯಲ್ಲಿ ಮತ್ತು ಹಲವಾರು ಕಡೆ ಜಿಲ್ಲಾಧಿಕಾರಿಯಾಗಿದ್ದ ಮತ್ತು ಪ್ರಸ್ತುತ ವಿಧ್ಯುತ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಭರತ್ಲಾಲ್ ಮೀನ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ಮೊದಲಾದವರು.ವೆಂಕಟಾಚಲಯ್ಯನವರನಂತೂ ನಾವೆಲ್ಲ ವೆಂ-'ಕಾಟ'-ಚಲಯ್ಯ ಅಂತಲೇ ಕರೆಯುತಿದ್ದೆವು.ಅವರ ಜಾಗದಲ್ಲಿ ನ್ಯಾ.ಸಂತೋಷ ಹೆಗ್ದೆ ಬಂದಾಗ ಇನ್ನೇನು ಕಾದಿದೆಯೋ ಗ್ರಹಚಾರ ಅಂತ ನಾವೆಲ್ಲ ಮುಖ ಮರೆಸಿಕೊಂದಿದ್ದೆವು.ಅದಕ್ಕೇ ನಾನು ಹೇಳಿದ್ದು ನಾವೆಲ್ಲ ಹೆದರಿ ಹೋಗಿದ್ದೆವು ಅಂತ.
ಆದರೆ ಒಂದೇ ವಾರದಲ್ಲಿ ಬಣ್ಣ ಬಯಲಾಯಿತು.ನಮ್ಮ ಹೆದರಿಕೆಗೆ ತಲೆ ಬುಡವಿಲ್ಲಾ ಎಂದು ಅರ್ಥವಾಯಿತು.ಇವರು ಮೇಲಿನ ಅಧಿಕಾರಿಗಳಂತಲ್ಲ.ಕುರ್ಚಿಯಲ್ಲಿ ಕುಳಿತುಕೊಂಡು ನ್ಯಾಯ ಹೇಳುವುದು ಮಾತ್ರ ಇವರಿಗೆ ಕರಗತ ಅಂತ ತಿಳಿದಾಗ ನಮಗೆ ಬಹಳ ಸಂತೋಷವಾಯಿತು.ನಾನು ಹಿಂದಿನ ಲೋಕಾಯುಕ್ತರಂತೆ ದಾಳಿ ನಡೆಸುವುದಿಲ್ಲ ಎಂದಾಗಲಂತೂ ನಾವೆಲ್ಲ ಹಿರಿಹಿರಿ ಹಿಗ್ಗಿದೆವು. ಮಾಜಿ ಲೋಕಾಯುಕ್ತ ವೆಂಕಟಾಚಲ ದಾಳಿ ಮಾಡಿದ್ದೇ ಕಾನೂನು ಬಾಹಿರ,ಅವರು ಕೇವಲ ಪ್ರಚಾರಕ್ಕಾಗಿ ದಾಳಿ ಮಾಡುತಿದ್ದರು ಎಂದು ಅಪ್ಪಣೆ ಕೊಡಿಸಿದಾಗ ನಮಗೆಲ್ಲ ಸ್ವರ್ಗ ಮೂರೇ ಗೇಣು.
ಸಂತೋಷ ಹೆಗ್ದೆಯವರು ಹೇಳಿದ್ದರಲ್ಲಿ ಏನು ತಪ್ಪಿದೆ ಹೇಳಿ.ವೆಂಕಟಾಚಲಯ್ಯ ನವರಿಂದಾಗಿ ನಮಗೆಲ್ಲ ಎಷ್ಟ್ಟುತೊಂದರೆಯಾಗುತಿತ್ತು.ಸಮಾಜದಲ್ಲಿ ನಮ್ಮ ಮಾನ ಹರಾಜು ಹಾಕುತಿದ್ದರು(ನಮಗೆ ಮಾನ ಇದ್ದರೆ ತಾನೆ).ಬಂಧು ಬಾಂಧವರೆದುರು ತಲೆ ತಗ್ಗಿಸಬೇಕಾದ ಪರಿಸ್ಥಿತಿ ಉಂಟುಮಾಡುತಿದ್ದರು.
ಆದರೆ ಈಗ ಎಲ್ಲಾ ನಿರಾಳ. ಸರಾಗವಾಗಿ ಉಸಿರಾಡಬಹುದು.ಸಂತೋಷ ಹೆಗ್ದೆಯವರು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡುತ್ತಾ ಭ್ರಷ್ಟಾಚಾರಕ್ಕೆ ಚಿಕಿತ್ಸೆ ನೀಡುತಿದ್ದಾರೆ. ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಅದಕ್ಕೆ ಜೆನೆಟಿಕ್ಸ್ ಚಿಕಿತ್ಸೆಯೇ ಬೇಕು ಎಂದು ರಾಗ ಎಳೆಯುತಿದ್ದಾರೆ. ಅವರಿಗೆ ಮಾತ್ರೆ ಕ್ಯಾಪ್ಸುಲ್,ಲೇಸರ್ ಚಿಕಿತ್ಸೆ,ಕೀಮೋ ತೆರಪಿ ಯಾವುದೂ ಬೇಕಿಲ್ಲ.
ಇಂದಿನ ಮುಂದಿನ ಮತ್ತು ಹಿಂದಿನ ಭ್ರಷ್ಟಾಚಾರಿಗಳಿಗೆ ಜಯವಾಗಲಿ.ಸಂತೋಷ ಹೆಗ್ದೆಯವರಂತ ಅಧಿಕಾರಿಗಳ ಸಂತತಿ ಸಾವಿರವಾಗಲಿ.
ಎಲ್ಲಿಯವರೆಗೆ ಸಂತೋಷ ಹೆಗ್ದೆಯವರು ನಮ್ಮ ಗೊಡವೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವೂ ಸಂತೋಷವಾಗಿರುತ್ತೇವೆ.ನೀವೇನಂತೀರಿ???
ನಿಮ್ಮ ನಲ್ಮೆಯ ಭ್ರಷ್ಟಾಚಾರಿ
Comments
ಭ್ರಷ್ಟಾಚಾ
ಇನ್ನೂ ತೊಲಗದ ಸತ್ಯ, ನ್ಯಾಯ, ಧರ್ಮದ ಗುಲಾಮಗಿರಿ!!