ಹುಸಿ ನಿರೀಕ್ಷೆ
ಇಲ್ಲ ಪ್ರಪಂಚ ಮುಳುಗಲೇ ಇಲ್ಲ|
ಸೂರ್ಯ ಎಂದಿನಂತೆ ಬೆಳಕು ಕೊಟ್ಟ|
ಗಾಳಿ ಬೀಸುತ್ತಲೇ ಇತ್ತು|
ಎಲ್ಲಾ ಮಾಮಾಲಂತಿತ್ತು|
ನೀನ್ಯಾಕೆ ಹೀಗಿದ್ದೀಯಾ ಅಂತಾ ಯಾರೂ ಕೇಳಲಿಲ್ಲ|
ಯಾವ ಫೋನ್ ಕರೆಯೂ ಬರಲಿಲ್ಲ|
ಯಾರೂ ಹುಡುಕಿಕೊಂಡೂ ಬರಲಿಲ್ಲ|
ಮಾತನಾಡಿಸುವವರೇ ಇಲ್ಲ|
ಅಂತೂ ಇಂತೂ ಎರಡುದಿನ ನಿನ್ನಬಿಟ್ಟಿರುವುದಕ್ಕೆ ನನಗಾಗಲೇ ಇಲ್ಲ|
ಕದ್ದು ಕದ್ದು ನೋಡುತ್ತಿದ್ದೆ ನನ್ನ ಬಗ್ಗೆ ಯಾರಾದರೂ ಎರಡಕ್ಷರ ಬರೆದಿದ್ದಾರಾ? ಎಂದು|
ಇಲ್ಲ, ಇಲ್ಲವೇ ಇಲ್ಲ |
ಬರೆದಿದ್ದಕ್ಕೆ ಲೈಕ್ ಹಾಕೋ ಜನ
ಬರೆಯದಿದ್ದಾಗ ನನಗಾಗಿ ಪರಿತಪಿಸುತ್ತಾರೆಂಬ ನನ್ನ ನಿರೀಕ್ಷೆಯನ್ನು ಸುಳ್ಳುಮಾಡಿದ್ದರು!!!
Rating
Comments
ಉ: ಹುಸಿ ನಿರೀಕ್ಷೆ
ಅದು ವಾಸ್ತವ.. ಯಾರಿರಲಿ ಬಿಡಲಿ ತನ್ನ ಪಾಡಿಗೆ ತಾನು ನಡೆಯುವ ಜಗ...ಹೋಗಲಿ ಬಿಡೀ, ಈಗ ನಾನು ಕೇಳಿಬಿಡ್ತೀನಿ - "ಹೇಗಿದ್ದೀರಾ? ಯಾಕೆ ಈ ನಡುವೆ ಕಾಣ್ಲಿಲ್ಲಾ?" ಅಂತ :-)
In reply to ಉ: ಹುಸಿ ನಿರೀಕ್ಷೆ by nageshamysore
ಉ: ಹುಸಿ ನಿರೀಕ್ಷೆ
ನಾಗೇಶ್, ಏನೋ ತೋಚದಾಗ ಹೀಗೆ ಗೀಜುವುದು ಒಮ್ಮೊಮ್ಮೆ ನನ್ನ ಹವ್ಯಾಸ. ಅಷ್ಟೆ.ಚೆನ್ನಾಗಿರುವೆ. ಅಂತರ್ಜಾಲದ ಮುಂದೆ ಹೆಚ್ಚು ಕುಳಿತುಕೊಳ್ಳುತ್ತಿಲ್ಲ.
ಉ: ಹುಸಿ ನಿರೀಕ್ಷೆ
ಹರಿಹರಪುರ ಶ್ರೀಧರ ರವರಿಗೆ ವಂದನೆಗಳು
'ಹುಸಿ ನಿರೀಕ್ಷೆ' ಬಹಳ ಅರ್ಥಗರ್ಭಿತ ಮತ್ತು ಜಗದ ವಾಸ್ತವತೆಯನ್ನು ಬಿಂಬಿಸುವ ಕವನ. ಜಗತ್ತು ವಾಸ್ತವ ಅದನ್ನು ವಾಸ್ತವದ ನೆಲೆಗಟ್ಟಿನಲ್ಲಿಯೆ ನೋಡುತ್ತ ಹೋಗಬೇಕು. ಸುಂದರ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಉ: ಹುಸಿ ನಿರೀಕ್ಷೆ by H A Patil
ಉ: ಹುಸಿ ನಿರೀಕ್ಷೆ
ಧನ್ಯವಾದಗಳು ಪಾಟೀಲರೇ, ಏನೋ ಮನದಲ್ಲಿ ಮೂಡಿದ ಭಾವನೆಗೆ ಅಕ್ಷರ ರೂಪ ಕೊಟ್ಟೆ ಅಷ್ಟೆ. ಅದಕ್ಕಾಗಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: ಹುಸಿ ನಿರೀಕ್ಷೆ
:) :) ಸಂಪದಕ್ಕೆ ಬಂದಾಗ ಮೊದಲು ಪರಿಚಯದವರನ್ನೇ ಹುಡುಕುವುದು. ಕಾಣಿಸದಿದ್ದಾಗ ಸ್ವಲ್ಪ ಬೇಸರವಾಗುವುದು. ಉತ್ತಮ ಲೇಖನಗಳು ಬ್ಲಾಗ್‌ಗಳು ಹಾಗೇ ರುಚಿ ಅಡುಗೆಗಳು ಆ ಬೇಸರವನ್ನು ಮರೆಸಿ ಮುದನೀಡುವುದು.
In reply to ಉ: ಹುಸಿ ನಿರೀಕ್ಷೆ by ಗಣೇಶ
ಉ: ಹುಸಿ ನಿರೀಕ್ಷೆ
ಯಾಕೆ ಗಣೇಶರೇ ಕೀಟಲೆ ಮಾಡಿಲ್ಲ?
ಉ: ಹುಸಿ ನಿರೀಕ್ಷೆ
ಶ್ರೀಧರರೆ ನಮಸ್ಕಾರಗಳು. ಇಂದಿನ ಬದುಕಿನ ನಡಾವಳಿಗೆ ಹಿಡಿದ ಕನ್ನಡಿಯಂತಿದೆ ತಾವು ಬರೆದ ಈ ಸಾಲುಗಳು..................ರಮೇಶ ಕಾಮತ್.
In reply to ಉ: ಹುಸಿ ನಿರೀಕ್ಷೆ by swara kamath
ಉ: ಹುಸಿ ನಿರೀಕ್ಷೆ
ನಿಮ್ಮ ಅಭಿಮಾನಕ್ಕೆ ಋಣಿ
ಉ: ಹುಸಿ ನಿರೀಕ್ಷೆ
ಬರೆದಾಗ ಲೈಕೋ, ಬರೆಯೋ, ಹಾಕೋ ಜನ ಬರೆಯದೆ ಇದ್ದಾಗ ಗಮನಿಸುವುದೂ ಇಲ್ಲ, ಮಿಸ್ ಮಾಡಿಕೊಳ್ಳುವುದೂ ಇಲ್ಲ. ಇಲ್ಲದ ನಿರೀಕ್ಷೆ ಇಟ್ಟುಕೊಳ್ಳಬೇಡಿ, ಶ್ರೀಧರ್. -)
ಉ: ಹುಸಿ ನಿರೀಕ್ಷೆ
ಹೊಗೆಯ ಸುಖ ಸವಿಯಬೇಕು
=================
ಮೋಟು ಬೀಡಿಗಳೆ ಹಾಗೆ
'ಉಫ್ ಉಫ್ ' ಅನ್ನುತ್ತಿರುವಷ್ಟು ಕಾಲ
ಬೆಂಕಿ ಬೂದಿ ಎಲ್ಲ
ಕ್ಷಣ ಕಾಲ ಪಕ್ಕಕ್ಕೆ ಎತ್ತಿಟ್ಟರೂ
ಕಿಡಿಯೂ ಇಲ್ಲ ಹೊಗೆಯೂ ಇಲ್ಲ
ಎಲ್ಲವೂ ಶೂನ್ಯ
ಕ್ರಿಯೆಗೆ ಒಂದು ಪ್ರತಿಕ್ರಿಯೆ
ಪ್ರತಿಕ್ರಿಯೆಗೆ ಮತ್ತೆ ಕ್ರಿಯೆಯ ಸರಣಿ
ಮುಖಹೊತ್ತಿಗೆಯ ನೋಟಿಫಿಕೇಶನ್
ಮಿಣ ಮಿಣ
ಜ್ವರಮಾಪಕ ಬಾಯಲ್ಲಿಟ್ಟು
ಕಾಲು ಕೈಗಳನ್ನು ಹೊದಿಕೆಯೊಳಗಿಟ್ಟು
ಮುದುರಿ ಮಲಗಿದರೆ
ಎಲ್ಲವೂ ಶೂನ್ಯ
ಮತ್ತೊಮೆ ಕಡ್ಡಿಗೀರಬೇಕು
ಬೆಂಕಿ ಹಚ್ಚಬೇಕು
ಹೊಗೆಯ ಸುಖ ಸವಿಯಬೇಕು
In reply to ಉ: ಹುಸಿ ನಿರೀಕ್ಷೆ by partha1059
ಉ: ಹುಸಿ ನಿರೀಕ್ಷೆ
ಮಾಸ್ಟರ್ ಹಿರಣಯ್ಯನವರು ಒಮ್ಮೆ ಪಶ್ಚಾತಾಪ ನಾಟಕದಲ್ಲಿ ಹೇಳಿದ್ದರು,
"ಸಿಗರೇಟ್ ಅಂದರೆ ಒಮ್ಮೆ ಹಚ್ಚಿದರೆ ಆಯ್ತು, ಮುಗಿಯುವವರೆಗು ಸೇದಬಹುದು,
ಈ ಬೀಡಿ ಹಂಗಲ ಕಣೊ ಚಿನ್ನ, ಉಫ್ ಉಫ್ ಅಂತ ಉರುವತ್ತಲೆ ಇರಬೇಕು, ಮರೆತರೆ ಆರಿ ಹೋಗಿಬಿಡುತ್ತೆ"
.
ಈ ಫೇಸ್ ಬುಕ್ ಸಂಬಂದ ಸಹ ಒಂದು ರೀತಿ ಬೀಡಿಯ ರೀತಿ ಉಫ್ ಉಫ್ ಅನ್ನುತ್ತ ’ಲೈಕ್ ’ ಕುಟ್ಟುತಲೆ ಇರಬೇಕು, ಅದನ್ನು ಬಿಟ್ಟರೆ ಫೇಸ್ ಬುಕ್ ಪಾಲಿಗೆ ನಾವು ಜೀವಂತವಿರಲ್ಲ. ವಾರಗಟ್ಟಲೆ ’ಲೈಕ್ ’ ಕುಟ್ಟುವುದು ಬಿಟ್ಟರೆ ಆಮೇಲೆ , ನಮ್ಮ ’ಸ್ಟೇಟಸ್ ಅಪ್ ಡೇಟ್ ’ ಗೆ ಯಾವ ಬೆಲೆಯು ಇರಲ್ಲ
In reply to ಉ: ಹುಸಿ ನಿರೀಕ್ಷೆ by partha1059
ಉ: ಹುಸಿ ನಿರೀಕ್ಷೆ
ನನ್ನ ನಿರೀಕ್ಷೆ ಹುಸಿಯಾಗಲಿಲ್ಲ ಪಾರ್ಥರೇ.ಗುಣಶೇಖರ ಮೂರ್ತಿಯವರ ಒಂದು ಚೆಂದದ ಕವನ, ನಿಮ್ಮ ಒಂದು ಕವನದ ಜೊತೆಗೆ ಮಾ|| ಹಿರಣ್ಣಯ್ಯನವರ ಮಾತು,ಅಬ್ದುಲ್ಲರ ಉಪದೇಶ...ಎಲ್ಲವೂ ನನ್ನ ಜೀವನದ ಉತ್ಸಾಹವನ್ನೇ ಹೆಚ್ಚಿಸಿವೆ.ಹತ್ತು ವರ್ಷ ಆಯಸ್ಸೂ ಹೆಚ್ಚಾಗಿರಬಹುದು.....ಘನಂದಾರಿ ಕೆಲಸವನ್ನು ಮಾಡಲು!!! ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು