ಹೂಗಳೆ
ಮುದವ ನೀಡುವ ಹೂಗಳೆ
ಕೋಮಲತೆಯ ಸಾರವೆ
ಮುಂಜಾನೆಯೆ ಅರಳಿ
ನಗುಚಿಮ್ಮುವ ಮೋಡಿಯೆ
ಬಿಸಿಲಿಗೆ ಮೊಗವೊಡ್ಡುವ ಪರಿಯೆ
ಮುಸ್ಸಂಜೆಯಲಿ ಮುಗುಳ್ನಗುತ
ಸುಗಂಧ ಸೂಸುವ
ಪಾರಿಜಾತ ಮಲ್ಲಿಗೆಯೆ
ಕಣ್ತುಂಬುವ ಸೊಬಗೆ
ಸಮಯಪಾಲನೆ ಪಾಠವೆ
ನಟ್ಟಿರುಳಿಗೆ ಕಾದು ಗಮ್ಯವನು
ಸಾರುವೆಯೊ ಬ್ರಹ್ಮಕಮಲವೆ
ಕೆಸರಲಿದ್ದರು ತಲೆಯನೆತ್ತಿ
ಪವಿತ್ರತೆಯ ಸೂಸುವೆಯೊ ಕಮಲವೆ
ಶುಭ್ರಶ್ವೇತದಿ ಬೆಳಗಿ
ರಂಗೇರುವ ಬೆಟ್ಟದಾವರೆಯೆ
ಜೀವನರಂಗಕೆ ಸಂದೇಶವೊ
ವಿವಿಧ ಬಣ್ಣ, ರೂಪದ ಪುಷ್ಪಗಳೆ
ದಟ್ಟಕಾನನದೊಳಗಿದ್ದರು
ಸಿಂಗಾರಗೊಳ್ಳುವ ತವಕವೆ
ಎಂಥಾ ಬದುಕು
ಸಾರ್ಥಕತೆಯ ತುಳುಕು!
Rating