ಹೂವಾಗಿ ಅರಳುವ ಮುನ್ನ

ಹೂವಾಗಿ ಅರಳುವ ಮುನ್ನ

ಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು
ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು
ದಾರದಲಿ ಪೋಣಿಸಿ, ಹಾರವನು ಮಾಡಿಸಿ
ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ.

ಇವು ದುಂಡು ಮಲ್ಲಿಗೆ ಮೊಗ್ಗುಗಳು
ದುಂಡು ಮೊಗದ ಚಲುವೆ ಅವಳು
ಹುಣ್ಣಿಮೆಯಲಿ ಅರಳಿದ ಚೆಂದಿರನ
ಕಾಂತಿಯನು ಕಂಗಳಲಿ ತುಂಬಿಕೊಂಡವಳು.

ಗೆಳತಿ ಬಂದಿರುವಳು ಬಿಸಿಲ ದಿನಗಳಲಿ
ತಂಗಾಳಿ ಸುಳಿಯುತಿರಲಿಲ್ಲ ಆಗ ದಾರಿಯಲಿ
ಒಡೆದ ಕನ್ನಡಿಯನ್ಹೋಲುತಿದ್ದವು ಮನಸುಗಳು
ಅರಳದಲೆ ಬಾಡಿ ಹೊಗಿದ್ದವು ಕನಸುಗಳು

ಒಡೆದ ಮನಸುಗಳನ್ನು ಬೆಸೆದು ಒಂದಾಗಿಸಿ
ಹರಿದ ವೀಣೆಯ ಕಟ್ಟಿ ನುಡಿಯನ್ನು ಹೊಮ್ಮಿಸಿ
ಬಿಸಿಲ ಬೇಗೆಯನು ಮಳೆತರಿಸಿ ಆರಿಸಿ
ನಗುವ ತಂದವಳವಳು ನನ್ನ ಮನದರಸಿ

ಕಡಲ ತಡಿಯ ಮಳಲ ಮೇಲೆ ಕೈ ಯಿಂದ
ಬಾಳ ಕವನವ ಬರೆದು, ಹಾಡಿ ಎದೆಯಿಂದ
ಅಬ್ಬರಿಸಿ ಬಂದಂತ ಅಲೆಗಳನು ತಡೆದು
ಬೆಳಗಿಸಿದಳು ಬದುಕ ಹೆದರಿಕೆಯ ತೊರೆದು

- ಜಯಪ್ರಕಾಶ ನೇ ಶಿವಕವಿ

Rating
No votes yet

Comments