ಹೂವೇ

ಹೂವೇ

ಚಿತ್ರ

ಸುಡುಬಿಸಿಲಿಗೂ
ನಗು ಚೆಲ್ಲುವ
ಗುಟ್ಟನೆನಗೆ
ಬಿಟ್ಟುಕೊಡುವೆಯಾ?

ನಾ ಏನು ಹೇಳಲಿ?
ಹೀರಲಿರಬೇಕು
ನನ್ನೊಳು ನಿತ್ಯ
ಜೀವಜಲವು
ಸುಡುಬಿಸಿಲಿಗೂ
ನಾ ನಗುವ ಚೆಲ್ಲುಲು!

ಹರಿಯುತಿರಬೇಕು
ನಿನ್ನೊಳು ನಿತ್ಯ
ಪ್ರೇಮಜಲವು
ಸುಡದು ಬಿಸಿಲು
ನೀ ನಗುವ ಹಂಚಲು!

Rating
No votes yet

Comments

Submitted by nageshamysore Tue, 04/30/2013 - 16:50

ಪ್ರೇಮಾಶ್ರಿಯವರೆ,
ನಿಮ್ಮಾ ಹಾಗೂ ಹೂವ್ವಿನ ಸರಳ ಸಂಭಾಷಣೆ, ಸಂವಾದ ಸೊಗಸಾಗಿ ಅರ್ಥಗರ್ಭಿತವಾಗಿದೆ!
ನಾಗೇಶ ಮೈಸೂರು, ಸಿಂಗಾಪುರದಿಂದ

Submitted by H A Patil Tue, 04/30/2013 - 21:21

ಮೇಡಂ ವಂದನೆಗಳು
' ಹೂವು ' ಕವನ ಸರಳವಾಗಿ ಸೊಗಸಾಗಿ ಮೂಡಿ ಬಂದಿದೆ. ಚಿತ್ರ ಮತ್ತು ಕಾವ್ಯ ಒಂದಕಗ್ಕೊಂದು ಪೂರಕವಾಗಿವೆ. ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು.