ಹೆಂಗಸರು ಹೆಚ್ಚು ಬುದ್ದಿವಂತರೋ ಅಥವಾ ಗಂಡಸರು...?

ಹೆಂಗಸರು ಹೆಚ್ಚು ಬುದ್ದಿವಂತರೋ ಅಥವಾ ಗಂಡಸರು...?



ತ್ಯಾಂಪಿಗೊಮ್ಮೆ ಇರುಕಲಿನಲ್ಲಿ ಸಿಕ್ಕ  ಕಪ್ಪೆಯೊಂದು ಗೋಚರಿಸಿತು.
"ನನ್ನನ್ನು ಬಿಡಿಸು, ನಿನಗೆ ಮೂರು ವರಕೊಡ್ತೇನೆ" ಎಂದಿತು.
ವರ ಎಂದು ಕೇಳುತ್ತಲೇ ತ್ಯಾಂಪಿ ಅದನ್ನು ಬಿಡಿಸಿದಳು.
ಕಪ್ಪೆ ಹೇಳಿತು, "ನೋಡಮ್ಮ ಒಂದು ಮಾತು, ಅದರಲ್ಲೊಂದು ಕಂಡೀಶನ್ ಇದೆ ಎಂದು ಹೇಳಲು ಮರೆತಿದ್ದೆ. ಅದೆಂದರೆ, ನೀವು ಏನು ಕೇಳಿದರೂ ಅದರ ಹತ್ತು ಪಟ್ಟು ನಿಮ್ಮ ಗಂಡನಿಗೆ ಸಿಗುತ್ತದೆ"
"ಆದೀತು, ನೀನು ವರ ಕೊಡು ಮೊದಲು"ಎಂದಳು ತ್ಯಾಂಪಿ.
ಅವಳ ಮೊದಲ ಆಸೆ ಪ್ರಪಂಚದ ಅತ್ಯಂತ ಸುಂದರ ಹೆಂಗಸಾಗಬೇಕು ಎಂಬುದಾಗಿತ್ತು.
ಕಪ್ಪೆ ಎಚ್ಚರಿಸಿತು " ಈ ನಿನ್ನ ಆಸೆ ನಿನ್ನ ಗಂಡನನ್ನೂ ಕೂಡಾ ಸುಂದರನನ್ನಾಗಿ ಮಾಡುತ್ತದೆ, ಅದೂ ನಿನ್ನ ಹತ್ತು ಪಟ್ಟು ಹೆಚ್ಚು, ಎಲ್ಲಾಹೆಂಗಸರ ನೋಟವೂ ಅವನತ್ತಲೇ ಇರುತ್ತೆ "
"ತೊಂದರೆಯಿಲ್ಲ ನಾನು ಅತ್ಯಂತ ಸುಂದರಿಯಾದುದರಿಂದ ಅವನು ನನ್ನನ್ನೇ ಹೆಚ್ಚು ಇಷ್ಟ ಪಡುತ್ತಾನೆ.’ ಎಂದಳು ತ್ಯಾಂಪಿ.
ತ್ಯಾಂಪಿಯ ಆಸೆ ನೆರವೇರಿತು.
ಎರಡನೇ ಬೇಡಿಕೆ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತೆಯಾಗುವುದು
ಆಗ ಕಪ್ಪೆ ಪುನಹ ಅವಳನ್ನು ಎಚ್ಚರಿಸಿತು "ನಿನಗಿಂತ ನಿನ್ನ ಪತಿ ಹತ್ತು ಪಟ್ಟು ಶ್ರೀಮಂತ ನಾಗುತ್ತಾನೆ ನೋಡಿಕೋ"
"ತೊಂದರೆಯಿಲ್ಲ, ನನ್ನದೆಲ್ಲಾ ಅವನದ್ದೇ ಅವನದ್ದೆಲ್ಲಾ ನನ್ನದೇ ಬಿಡು" ಎಂದಳು ತ್ಯಾಂಪಿ.
ಅವಳ ಈ ಆಸೆಯೂ ನೆರವೇರಿತು.
ಮೂರನೆಯ ಆಸೆ ಯಾವುದೆಂದು ಕೇಳಿತು ಕಪ್ಪೆ
"ನನಗೊಂದು ಚಿಕ್ಕ ಹೃದಯಾಘಾತವಾಗಲಿ" ಎಂದಳು ತ್ಯಾಂಪಿ



ಕಥೆಯ ನೀತಿ: ಹೆಂಗಸರು ಹುಟ್ಟು ಬುದ್ದಿವಂತರು ಅವರನ್ನು ಇದಿರು ಹಾಕಿಕೊಳ್ಳಬೇಡಿ



ಹೆಂಗಸರಿಗೆ: ಇಲ್ಲಿಗೆ ಈ ಜೋಕು ಮುಗಿಯಿತು. ಸಂತಸ ದಿಂದಿರಿ.






ಗಂಡಸರಿಗೆ:  ಇನ್ನೂ ಓದಿ















ತ್ಯಾಂಪನಿಗೆ ತ್ಯಾಂಪಿಯ ಹತ್ತು ಪಟ್ಟು ಸಣ್ಣ ಹೃದಯಾಘಾತವಾಯ್ತು.


ಕಥೆಯ ನೀತಿ: ಸುಂದರಿಯರು ನಿಜವಾಗಿಯೂ ವಿವೇಚನೆಯಿಲ್ಲದವರು, ಆದರೆ ತಾವೇ ಸ್ಮಾರ್ಟ್ ಅಂತ ತಿಳಿದುಕೊಂಡಿರುತ್ತಾರೆ


ಕೊನೆಯ ಕೊಸರು:    ನೀವು ಹೆಂಗಸಾಗಿದ್ದರೆ ಇದನ್ನು ಓದುತ್ತಿರುವಿರಾದರೆ, ನಾನಿಲ್ಲಿ ಹೇಳಬಯಸಿದುದು ಹೆಂಗಸರು ಹಾಗೆ ಯಾರ ಮಾತನ್ನೂ ಕೇಳುವವರಲ್ಲ.

 

 

 

ಮಿಂಚಂಚೆಯಿಂದ

 

Rating
No votes yet

Comments