ಹೆಣ್ಣಿನ ತ್ಯಾಗ

ಹೆಣ್ಣಿನ ತ್ಯಾಗ

 

ಕವನದ ಮೊದಲು ಎಲ್ಲ ಸಂಪದಿಗರಲ್ಲೂ ಕ್ಷಮೆಯಾಚಿಸಲು ಇಚ್ಚಿಸುತ್ತೇನೆ. ಕಾರಣ ಅನಿವಾರ್ಯ ಪರಿಸ್ಥಿತಿಯಿಂದಾಗಿ ನನ್ನ ಮದುವೆಗೆ ಕರೆಯಲಾಗಲಿಲ್ಲ, ದಯವಿಟ್ಟು ನಿಮ್ಮ ಸ್ನೇಹಿತೆಯನ್ನು ಕ್ಷಮಿಸಿ ನಿಮ್ಮ ಹಾರೈಕೆಗಳನ್ನ ಕೊಡಬೇಕೆಂದು ಕೋರಿಕೊಳ್ಳುತ್ತೇನೆ.

 

ಸುಂದರ ಸುಕುಮಾರ

ನನ ಬಾಳ ಬಂಗಾರ

ನನ್ನವನ ಜೀವನಕ

ನಾನ ಸಿಂಗಾರ

 

ನಮ್ಮಿಬ್ಬರ ಜ್ಯೋಡಿ

ಕಣ್ತುಂಬ ನೋಡಿ

ಹರಿಸಿರಿ ನೀವೆಲ್ಲ

ಮನತುಂಬಿ ಹಾಡಿ

 

ತವರೀನ ಋಣ ತೀರಿ

ಗಂಡನ ಮನೆ ಸೇರಿ

ಹಿಡದೇನ ಸ್ವಂತದ

ಸಂಸಾರದ ದಾರಿ

 

ಅತ್ತೆ ಮಾವಗೆ ಮುದ್ದಿನ ಸೊಸೆಯಾಗಬೇಕು

ಪತಿರಾಯಗೆ ಪ್ರೀತಿಯ ಸತಿಯಾಗಬೇಕು

ಕೊಟ್ಟ ಮನೆಗೆ ಮುತ್ತೀನ ಚೆಂಡಾಗಬೇಕು

ಇಷ್ಟೆಲ್ಲಾ ತ್ಯಾಗ ಹೆಣ್ಣಾದ ಮ್ಯಾಗ

ಕಟ್ಟಿಟ್ಟ ಬುತ್ತೆವ್ವಾ ಈ ಸಂಸಾರದಾಗ

 

 

                                                            ನಿಮ್ಮ ಸುಮಂಗಲಾ ಪ್ರಕಾಶ್

Rating
No votes yet

Comments