ಹೆಣ್ಣು........ಪದಗಳೇ ಸಿಗುತ್ತಿಲ್ಲಾ..

ಹೆಣ್ಣು........ಪದಗಳೇ ಸಿಗುತ್ತಿಲ್ಲಾ..

'ಅ'ದಿಂದ 'ಆಹಾ'ದವರೆಗೆ ಅಡಿಯಿಂದ ಮುಡಿಯವರೆಗೆ ಚಲುವು ತುಂಬಿ ತುಳುಕಾಡುವುದು ಹೆಣ್ಣಲ್ಲಿ ಮಾತ್ರ. ಹೆಣ್ಣಿನ ಬಗ್ಗೆ ಪುರಾಣಕಾಲದಿಂದ ಇದುವರಿಗಿನ ಕವಿಗಳು ವರ್ಣಿಸಿ,ವರ್ಣಿಸಿ ನಮ್ಮಂತಹ ಸಾಮಾನ್ಯರಿಗೆ ಹೊಗಳಲು ಬಾಕಿ ಏನೂ ಉಳಿಸಿಲ್ಲ.ಹೆಣ್ಣಿನ ನೋಟ,ನಗು,ನಡು,ನಡೆ ಎಲ್ಲಾ ಸುಂದರ..ತೀರಾ ಸಪ್ಪೆಯಾಯಿತು ಅಲ್ಲವಾ? 'ಸುಂದರ' ಪದವೇ ಹೆಣ್ಣಿನ ವರ್ಣನೆಗೆ ಸಪ್ಪೆ.
ಚಲುವ,ಸುಂದರ ಎಂಬ ಹೆಸರಿನವನನ್ನು ನೋಡಿ 'ಇವನೆಂಥಾ ಸುಂದರ?' ಅಂತಾ ಅನಿಸಬಹುದು.ಆದರೆ ಸುಂದರಿ,ಚಲುವಿ,ಸೌಂದರ್ಯರನ್ನು ನೋಡಿದಾಗ ಹಾಗನಿಸಲು ಸಾಧ್ಯವೇ ಇಲ್ಲ.ಹೆಣ್ಣನ್ನು ವರ್ಣಿಸಲು ಸಾಕಷ್ಟು ಶಬ್ದಗಳೇ ಕನ್ನಡದಲ್ಲಿ ಇಲ್ಲ.(ಸಂಪದ ಬಳಗದವರು ಗಮನಿಸಿ.)ಇರುವ ನಾಲ್ಕಾರು ಶಬ್ದಗಳನ್ನೇ ಹೆಣ್ಣಿನೆದುರು ಹೇಳಲು ಗಂಡು ತಿಣುಕಾಡುತ್ತಾನೆ.
ಇಲ್ಲಾ ಹೋಲಿಕೆ ಮಾಡಬೇಕು.ಈಗ ಮಾಡುತ್ತಿರುವ ಹೋಲಿಕೆ ಸಹ ಸಕ್ಕರೆ ಇಲ್ಲದ ಕಾಫಿ ತರಹ.ಉದಾಹರಣೆಗೆ ಹೆಣ್ಣಿನ ತಲೆಕೂದಲನ್ನೇ ನೋಡಿ-ಜಡೆ ಕಟ್ಟಿರಲಿ,ಬಿಚ್ಚಿರಲಿ,ಉದ್ದನೆ ಮೊಣಕಾಲವರೆಗೆ ಬಿಟ್ಟಿರಲಿ, ಇಲ್ಲಾ ಭುಜದವರೆಗೆ ಕತ್ತರಿಸಿರಲಿ-ವಾಹ್,ಎಂತಹ ಚಲುವು.ಅದನ್ನು ಹೋಗಿ ಭಯಾನಕ ಕಪ್ಪು ಮೋಡ,ನಾಗರಹಾವಿಗೆ ಹೋಲಿಸಿದ್ದಾರೆ. ಸರಿಯಾ?
ಆ ಸುಂದರ ಕಣ್ಣುಗಳನ್ನು ಮೀನಾಕ್ಷಿ,ನಳಿನಾಕ್ಷಿ,ಕಮಲಾಕ್ಷಿ..ಎಂದು ಮೀನಿಗೆ,ಕಮಲಕ್ಕೆ ಹೋಲಿಕೆ..ಛೆ..ಛೆ.
ತುಟಿ,ತೊಡೆ,ನಡು,ನಡೆ ಯಾವುದನ್ನೂ ಹೋಲಿಸುವಾಗಲು ಕೆಲ ಪ್ರಾಣಿ,ಪಕ್ಷಿ,ಗಿಡಗಳಿಗೆ ಹೋಲಿಸಿ ಹೆಣ್ಣಿಗೆ ಅವಮಾನ ಮಾಡಿದಲ್ವಾ?
ಈಗಿನ ಸಿನೆಮಾ ಹಾಡುಗಳಲ್ಲಿ ಹೆಣ್ಣಿನ ನಗುವನ್ನು ಟೆಲಿಫೋನ್ ಟ್ರಿನ್,ಟ್ರಿನ್ ಗೆ,ಅಂಗಾಗಗಳನ್ನು ....
ಇಷ್ಟಾದರೂ ಹೆಣ್ಣು ಸ್ವಲ್ಪವೂ ಬೇಸರಿಸಲಿಲ್ಲ.ಆ ಕಾಲದಿಂದ ಈಕಾಲದವರೆಗೂ ಕಳಪೆ ಹೋಲಿಕೆಗೆ(ಕ್ಷಮಿಸಿ.ಹಿಂದಿನ/ಇಂದಿನ ಕವಿಗಳನ್ನು ಅವಮಾನಿಸುತ್ತಿಲ್ಲ.ಅವರೂ ಸಹ ಹೋಲಿಕೆಗೆ ಪದಗಳು ಸಿಗದೇ,ಅವರಿಗೆ ಸರಿ ಕಂಡ ಪದಗಳನ್ನು ಉಪಯೋಗಿಸಿದ್ದಾರೆ.)ಸಂತೋಷಿಸಿದ್ದಾಳೆ.ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ.
ಚಲುವು ಒಂದೇ ಅಲ್ಲ.ಎಲ್ಲಾ ಒಳ್ಳೆಯ ಗುಣಗಳೂ(ತಾಳ್ಮೆ,ಸಹನೆ,ದಯೆ...)ಅವಳಲ್ಲಿದೆ.ಸೃಷ್ಠಿಕ್ರಿಯೆ ಭಗವಂತ ಮಾಡಿದ್ದಾದರೆ ಹೆಣ್ಣನ್ನು ಸೃಷ್ಠಿಸಿದ ಮೇಲೆ ಅವನಿಗೆ ತೃಪ್ತಿಯಾಗಿರಬಹುದು.

Rating
Average: 4 (1 vote)

Comments