ಹೆಸರು ಮಾಡಲು ಹೊಸ ವಿಧಾನ?

ಹೆಸರು ಮಾಡಲು ಹೊಸ ವಿಧಾನ?

ಏಪ್ರಿಲ್ ೧೩ ಹಾಗು ೧೪ ರಂದು  ಪತ್ರಿಕೆಗಳಲ್ಲಿ ಹೀಗೆ ಓದಿದೆ

[ http://timesofindia.indiatimes.com/India/NGOs-Teesta-spiced-up-Gujarat-riot-incidents-SIT/articleshow/4396986.cms ]

"In a significant development, the SIT led by former CBI director R K Raghavan told the Supreme Court on Monday that the celebrated rights activist cooked up macabre tales of wanton killings. "

ಸದಾ ಅನ್ಯಾಯ ಆದವರ ಪರವೇ ಹೋರಾಡುತ್ತಿರುವೆ ಎನ್ನುತ್ತಿದ್ದ ತೀಸ್ತಾ ಅವರು ಹೀಗೆ ಮಾಡಿದರೆ? ಯಾಕೆ ಹೀಗೆ ಮಾಡಿದರು?  ಇದು ಹೆಸರು, ಪದವಿ ಗಳಿಸಲು ಕಂಡುಕೊಂಡ ಮಾರ್ಗವೆ?  ಹಲವಾರು ರೀತಿಯಲ್ಲಿ ಹೆಸರು ಮಾಡಲು ಜನ ಪ್ರಯತ್ನಿಸುತ್ತಾರೆ,  ಕೆಲವು ಉದಾಹರಣೆಗಳು,

ಕತ್ತೆ ಮೇಲೆ ಕೂತು ಪ್ರತಿಭಟನೆ,  -> ಕತ್ತೆ ಬಗ್ಗೆ ಯಾರಿಗೂ ಯೋಚನೆಯೇ ಇಲ್ಲ.

ಶೌಚಾಲಯಗಳನ್ನು ಸ್ವಚ್ಚ ಗೊಳಿಸುತ್ತಾರೆ -> ಇಷ್ಟು ದಿನ ಆ ಶೌಚಾಲಯದ ಪರಿವೆಯೆ ಇವರಿಗೆ ಇರಲಿಲ್ಲ

ಚುನಾವಣೆಗೆ ಸ್ಪರ್ಧೆ -> ಠೇವಣಿ ಹುಟ್ಟುವ ಅಥಾವ ಮೂರಂಕಿಯಷ್ಟು ವೋಟು ಪಡೆಯುವ ನಂಬಿಕೆಯೂ ಅವರಿಗೆ ಇರುವುದಿಲ್ಲ..  

ಇದೆಲ್ಲಾ ಒಂದು ರೀತಿ ಹೆಸರು ಮಾಡುವುದಾದರೆ ಈಗ ಸುಳ್ಳೀನ ಮೇಲೆ ಸವಾರಿ ಮಾಡಿ ಎಲ್ಲರನ್ನೂ ಮೋಸ ಗೊಳಿಸಿ ಹೆಸರು ಮಾಡುವ ಪ್ರಯತ್ನ ನಡೆದಿದೆ.

ನ್ಯಾಯಂಗ ವ್ಯವಸ್ಥೆಯನ್ನ ಹೀಗೆ ಪ್ರಶ್ನಿಸಿದ್ದರು ಈಕೆ " Does the Constitution Not apply to Gujrat?"

[http://gaurav-awake.blogspot.com/2008/02/supreme-court-outraged-by-teesta.html ].

ಆಕೆ  ಆಗಲೆ ಪ್ರಶ್ನೆ ಮಾಡಿದ್ದರೆ? ತಾನು ಹೇಳುತ್ತಿರುವ ಸುಳ್ಳಿನ ಕಂತೆಗಳನ್ನು ಕಾನೂನು ಇನ್ನೂ ಯಾಕೆ ಪ್ರಶ್ನಿಸುತ್ತಿಲ್ಲ ಎಂದು?

ಸದಾ ಕೋಮುವಾದ , ತಾಲಿಬಾನೀಕರಣ ಎಂದು ಬೊಬ್ಬೆ ಇಡುತ್ತಾ  ಸಿಕ್ಕ ಅವಕಾಶವನ್ನೆಲ್ಲಾ "ಸದುಪಯೋಗ" ಪಡಿಸಿಕೊಂಡು ಪತ್ರಿಕೆಗಳಿಗೆ ಮಾಧ್ಯಮಗಳಿಗೆ ಹೇಳೀಕೆ ಕೊಡುತ್ತಾ ಪ್ರಚಾರ , ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ವಘೋಷಿತ ಬುದ್ದಿಜೀವಿಗಳು ಈಗ ಎಲ್ಲಿದ್ದಾರೊ?  ಬ್ಲಾಗ್ ಗಳಲ್ಲಿ ಸಿಕ್ಕಾಪಟ್ಟೆ ಬರೆದು ಮಜಾ ಅನುಭವಿಸುವ "ಮಜಾ"ವಾದಿಗಳು ಯಾಕೋ ಇನ್ನೂ ಈ ಕಡೆ ಗಮನಾನೆ ಹರಿಸಿಲ್ಲ...  ಪಾಪ ಅವರು ನೋಡುವ , ಓದುವ  Secular  ಪತ್ರಿಕೆಗಳು ಇದನ್ನು ಪ್ರಸರಿಸಿಲ್ಲವೇನೊ..   

ಇನ್ನೂ ವಿಪರ್ಯಾಸ ಅಂದರೆ,,  ಈ ಸುಳ್ಳಿನ ಕಂತೆ ಹರಡುತ್ತಿದ್ದ ತೀಸ್ತಾ ೨೦೦೭ ರಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ!!

[ http://www.winentrance.com/general_knowledge/miscellaneous/civilian-awards-2007.html ]

ಹೆಸರು ಗಳಿಸಲು, ಪದ್ಮಶ್ರೀ ಪ್ರಶಸ್ತಿ ಗಳಿಸಲು ಏನು ಮಾಡಬೇಕು ಎಂದು ದಾರಿ ತೋರಿಸಿದಂತಿದೆ ಈಕೆ!!!

Rating
No votes yet

Comments