ಹೇ ಚಂದ್ರನೇ...

ಹೇ ಚಂದ್ರನೇ...

ಏಕೆ..?

ನನ್ನ ಪ್ರೀತಿಯ ಹುಡುಗಿ..ಆ
ಕತ್ತಲಲ್ಲಿ ಮರೆಯಾದದ್ದು..

ಪ್ರತಿ ಕ್ಷಣವೂ ಅವಳು ನನ್ನ ಬಾಹುಬಂದನದಲ್ಲಿ
ಇರುತ್ತಿದ್ದಳು. ಆದರೆ, ಇಂದು ಒಂದೇ ಒಂದು ನೋಟವೂ
ಬೀರದೆ ಹೋದದ್ದೇಕೆ..?

ಅವಳಿಗೆ ನನ್ನ ಪ್ರೀತಿ ಬೇಸರವಾಯಿತೇ..?
ಹಾಗಾದ್ರೆ ಅವಳಿಗೆ ಹೇಳು ನಿನ್ನ ಮುಖವನ್ನಾದರೂ
ನೋಡಿ ಒಂದು ಕ್ಷಣ ನೆಮ್ಮದಿ ಪಡೆಯಲೆಂದು.

ಅವಳು ಶಾಶ್ವತವಾಗಿ ನನ್ನ ಬಿಟ್ಟು ಹೋಗಲು
ಬಯಸಿದ್ದಾಳೆಯೇ.. ಹಾಗಾದ್ರೆ ಒಮ್ಮೆಯಾದರೂ
ಹೇಳು ಅವಳಿಗೆ ನನ್ನ ಕೊಂದು ಹೋಗು ಎಂದು..

-ರೇವನ್...

Rating
No votes yet

Comments