ಹೇ ನೀರೆ

ಹೇ ನೀರೆ

ಹೇ ನೀರೆ ನಿನ್ನದೆಂಥ ಗುಣ!
ಬಾನಿಂದ ಹಾರುವಾಗ
ಬಣ್ಣವಿಲ್ಲದೆ ಬಂದೆ
ನೆಲ ಮುಟ್ಟಿ ಮಿಲನಗೊಂಡು
ನೀ ರಂಗು ಪಡೆದೆ
ಕಲ್ಲು ಮಣ್ಣಿನ ಹಾದಿ ಪಕ್ಕದಲಿ
ಮನೆ ಕಟ್ಟಿ ಮಲಗಿದೆ
ಹಳ್ಳ ಮುಚಿ ಕೆರೆಯ ತುಂಬಿ
ಹಸಿರ ನೆನೆಸಿ ಓಡಿದೆ
ಸಾಲು ಹಾಸು ತಂತಿ ಮೇಲೆ
ಮುತ್ತಿನ ತೋರಣ ಕಟ್ಟಿದೆ
ಎಲ್ಲ ಜನರು ಸೂರಿಗಾಗಿ
ಓಡುವಂತೆ ಮಾಡಿದೆ
ಮುಗ್ಧ ಮನಸು ಆಚೆ ನಿಂತು
ಹಾಡಿ ಕುಣಿದು ನಲಿಯಿತೆ

ಹೇ ನೀರೆ ನಿನ್ನದೆಂಥ ಗುಣ!

ಕೊಳೆಯ ಕಳೆದು, ಹೃದಯ ತೊಳೆದು
ಒಲವ ಸುಧೆಯ ಹರಿಸಿದೆ
ತೊರೆಯ ತಣಿಸಿ ಶುದ್ಧಗೊಂಡು
ಪಾತಾಳದಲಿ ಅಡಗಿದೆ
ಬಿತ್ತ ಬೀಜಕೆ ಜೀವಕೊಟ್ಟು
ಚಿಲುಮೆ ಚಿಗುರ ಕಾಣಿಸಿದೆ
ನದಿಯ ಹೊಳೆಯ ಕುಣಿಸಿ ನಲಿಸಿ
ದೂರ ಸಾಗರಕೆ ಬೆಸೆದೆ
ಬಾಗಿಲಲ್ಲಿ ಬಿಸಿ ಬಜ್ಜಿ ಜೊತೆ
ಚಹಾ ಹೀರುತ ಒರಗಿದ್ದೆ
ನಿನ್ನ ನಡೆಯ ವಯ್ಯಾರ ಮನವ ಕಲಕಿ, ಒಂದು ಕವಿತೆ ಮೂಡಿತೆ
ಒಮ್ಮೆ ನಿಂತು ಮತ್ತೆ ಸುರಿದೆ
ನೋಡಲದನು ನಾನು ಅಲ್ಲೇ ನಿಂತೆ

Rating
No votes yet