ಹೊಗೆನಕಲ್ ಗೆ ಹೊಗೆ ಹಾಕ್ ಬಿಟ್ರು ಶಿವಾ !
ನಿನ್ನೆಯ ಕನ್ನಡ ಪ್ರಭ ವರದಿ ನೋಡಿ. ತಮಿಳುನಾಡು ಸರ್ಕಾರ ಹೊಗೆನಕಲ್ ಯೋಜನೆಗೆ ಕೆಲಸ ಶುರು ಮಾಡಿ ಕೊಂಡಿದೆ. ಅಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧವನ್ನು ಹೇರಿದೆಯಂತೆ. ಯೋಜನೆ ಅಕ್ರಮವಾಗಿರುವುದರಿಂದಲೇ ಹೀಗೆ ಮಾಡುತ್ತಿರಬಹುದೇ ಅನ್ನುವ ಅನುಮಾನ ಕಾಡ್ತಿಲ್ವಾ?
ಭಾವೈಕ್ಯತೆ, ಬಾಂಧವ್ಯ, ಚಿನ್ನ ತಂಬಿ, ಬೆಳ್ಳಿ ತಂಬಿ ಅಂತೆಲ್ಲ ತಿರುವಳ್ಳುವರ್ ಮೂರ್ತಿ ಕೂರಿಸುವಾಗ ಹೇಳಿದ್ದೆಲ್ಲ ಏನಾಯ್ತು ಶಿವಾ? ಕನ್ನಡಪ್ರಭ ಒಂದೇ ಇದನ್ನ ವರದಿ ಮಾಡಿರುವುದು. ಬೇರೆ ಯಾವ ಕನ್ನಡ ಪತ್ರಿಕೆಗೂ ಕನ್ನಡಿಗರ ಬದುಕಿಗೆ ಸಂಬಂಧಿಸಿದ ಈ ಸುದ್ದಿ ಮುಖ್ಯವಾಗದೇ ಹೋಯಿತೆ? ಅಥವಾ ಬಿ.ಬಿ.ಎಮ್.ಪಿ ಚುನಾವಣೆ ಮುಗಿಯುವವರೆಗೂ ಇದೆಕ್ಕಲ್ಲ ಸಮಯವೇ ಇಲ್ಲವೇ?
ಇಂತಹ ಭ್ರಷ್ಟ ವ್ಯವಸ್ಥೆ, ಸೋಮಾರಿ, ನಿರಭಿಮಾನಿ ರಾಷ್ಟ್ರೀಯ ಪಕ್ಷಗಳು, ನಾಯಕರು, ಬುದ್ದಿ ಜೀವಿಗಳನ್ನು ಪಡೆದ ಕನ್ನಡ ತಾಯಿ ನೀನೇ ಧನ್ಯ !
ಬನ್ರಪ್ಪ ಹೊಗೆನಕಲ್ ಗೆ ಹೊಗೆ ಹಾಕಿದ್ದು ಆಯ್ತು, ಅಟಲಿಸ್ಟ್ ತಿಥಿ ಊಟಕ್ಕಾದ್ರೂ ಬೆಳ್ಳಿ ತಂಬಿ ಊರಿಗೆ ಹೋಗ್ ಬರೋಣ.
Rating
Comments
ಉ: ಹೊಗೆನಕಲ್ ಗೆ ಹೊಗೆ ಹಾಕ್ ಬಿಟ್ರು ಶಿವಾ !
ಉ: ಹೊಗೆನಕಲ್ ಗೆ ಹೊಗೆ ಹಾಕ್ ಬಿಟ್ರು ಶಿವಾ !
ಉ: ಹೊಗೆನಕಲ್ ಗೆ ಹೊಗೆ ಹಾಕ್ ಬಿಟ್ರು ಶಿವಾ !