ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ 

ಕೊನೆಯ ಕೊಸರು: ಇದೇ ಸುಭಾಷಿತವನ್ನೇ ಪಾವೆಂ ಆಚಾರ್ಯರೋ, ಎಸ್ವಿ ಪರಮೇಶ್ವರ ಭಟ್ಟರೋ( ಯಾರೆಂದು ಮರೆತಿರುವೆ)  ಹೀಗೆ ಕನ್ನಡಿಸಿದ್ದಾರೆ ಎಂದು ಬಹಳ ಹಿಂದೆ ಓದಿದ ನೆನಪು:

ಹೆಣ್ಣು ಹೊನ್ನು ಪುಸ್ತಕ
ಆದರೆ ಪರಹಸ್ತಕ
ಹೋಗೇ ಹೋಯ್ತು! ಮರಳಿದರೂ
ಭ್ರಷ್ಟ, ನಷ್ಟ, ಹರುಕ!

-ಹಂಸಾನಂದಿ

Rating
No votes yet