ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?

ಹೊಸವರ್ಷದ ಶುಭಾಷಯ - ಹೀಗೂ ಹೇಳಬಹುದೇ?

ಸಂಪದ ಬಳಗದ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

ಹೊಸ ವರ್ಷದ ಶುಭಾಷಯ ತಿಳಿಸೋದಕ್ಕೆ ಅಂತ ಒಂದು ಕವನ ಬರೆಯೋಣ ಅಂತ ಕುಳಿತೆ. ಇದ್ದಕ್ಕಿದಂತೆ ಒಂದು ಹೊಸ ಯೋಚನೆ ಬಂತು. "ಒಬ್ಬನೇ ಎಲ್ಲರಿಗೂ ಶುಭಾಷಯ ಹೇಳುವ ಬದಲು, ಎಲ್ಲರೂ ಎಲ್ಲರಿಗೂ ಶುಭಾಷಯ ಹೇಳುವಂತಾದರೆ ಎಷ್ಟು ಚೆನ್ನ ಅಂತ". ನನ್ನ ಯೋಚನೆ/ಕಲ್ಪನೆ ಎಷ್ಟರ ಮಟ್ಟಿಗೆ ಸಿಂಧುವೆಂದು ನಿಜಕ್ಕೂ ನನಗೆ ಗೊತ್ತಿಲ್ಲ.

ನನಗೆ ಹೊಳೆದ ಯೋಚನೆ ಹೀಗಿದೆ: ಹೊಸ ವರ್ಷದ ಶುಭಾಷಯದ ಕವನವನ್ನು ಎಲ್ಲರೂ ಸೇರಿ ರಚಿಸುವುದು! ಅಂದರೆ ಪ್ರತಿಯೊಬ್ಬರೂ ಎರಡೆರಡು ಸಾಲನ್ನು ಹಿಂದಿನ ಆವೃತ್ತಿಗೆ ಸೇರಿಸೋದು. ಅಂದರೆ ಕೊನೆಯ ಪ್ರತಿಕ್ರಿಯೆಯನ್ನು (ಅಪೂರ್ಣ ಕವನದ ತುಣುಕನ್ನು) ಕೈಗೆತ್ತಿಕೊಂಡು (ಹಾಗೆಯೇ ಯಥಾವತ್ ನಕಲು ಮಾಡಿ) ಅದಕ್ಕೆ ತಮ್ಮದೇ ಇನ್ನೆರಡು ಸಾಲನ್ನು ಸೇರಿಸುವುದು. ಸಾಧ್ಯವಾದಷ್ಟೂ ಕವನದ ಆಶಯ ಮತ್ತು ಬಂಧ ಕೆಡದಂತೆ ಪ್ರಯತ್ನಿಸುವುದು. ಈ ರೀತಿ ಇವತ್ತಿನಿಂದ ಇನ್ನೂ ಮೂರು ದಿನ ಇದು ಸಾಗುತ್ತಾ ಇರಲಿ. ಕೊನೆಯಲ್ಲಿ (ಜನವರಿ ಮೂರನೇ ತಾರೀಖು ಬೆಳಿಗ್ಗೆ, ಮೂರಕ್ಕೆ ಮುಕ್ತಾಯ ಅನ್ನುವ ರೀತಿ) ನಾನು ಕೊನೆಯ ಪ್ರತಿಕ್ರಿಯೆಯಲ್ಲಿ ಏನು ಕವನ ಇರುತ್ತೋ ಅದನ್ನು ಪುನಃ ಇನ್ನೊಮ್ಮೆ ಪ್ರಕಟಿಸುತ್ತೇನೆ. ನಮ್ಮ ನಮ್ಮ ಸಾಲುಗಳು ಇನ್ನೊಬ್ಬರ ಆಶಯದ ಜೊತೆ ಬೆರೆತು ಸಾಗುವುದನ್ನು ನೋಡುವುದೂ ಒಂದು ಚೆಂದ ಅಂತ ನನ್ನ ಅನಿಸಿಕೆ. ಏನಂತೀರಾ? ಏನಾದರೂ ಆಗಲಿ, ಹೊಸ ವರ್ಷದ ಹೊಸ್ತಿಲಿನಲ್ಲಿ ಹೊಳೆದ ಆಲೋಚನೆಯನ್ನು ಚಿವುಟುವುದು ಬೇಡ ಎಂದು ನಿಮ್ಮ ಮುಂದಿಡುತ್ತಿದ್ದೇನೆ.

"ಇದು ಕಾರ್ಯಸಾಧ್ಯವಲ್ಲ" ಅಂತೀರಾ? ಖಂಡಿತಾ ಇಲ್ಲ! ಹನಿ ಹನಿಗೂಡಿದರೆ ಹಳ್ಳ ತಾನೇ? ಬನ್ನಿ, ಉತ್ಸಾಹಿಗಳು ಕೈಜೋಡಿಸಿ. ಒಲಿದಂತೆ, ಹೊಳೆದಂತೆ ಬರೆಯೋಣ. ನನಗೆ ತೋಚಿದ ಎರಡು ಸಾಲುಗಳಿಂದ ನಾನು ಪ್ರಾರಂಭಿಸುತ್ತಿದ್ದೇನೆ.

ಹೊಸ ವರ್ಷ ತರಲಿ ಹರ್ಷ

ಹಾರ್ದಿಕ ಸುಸ್ವಾಗತವು ನಿನಗೆ ಎರಡು ಸಾವಿರದ ಏಳು,
ಇನ್ನಷ್ಟು ಹಸನಾಗಲಿ, ಕಳೆಗೂಡಲಿ ನಮ್ಮೆಲ್ಲರ ಬಾಳು.

Rating
No votes yet