ಹೊಸ ನಗೆಹನಿಗಳು- ೫೫ ನೇ ಕಂತು

ಹೊಸ ನಗೆಹನಿಗಳು- ೫೫ ನೇ ಕಂತು

ಒಬ್ಬ ಬಾಸ್ ತನ್ನ ಸಿಬ್ಬಂದಿಯೆಲ್ಲರನ್ನು ಕರೆದು ಹೇಳಿದ -
ಐದು ಸಾವಿರ ರೂಪಾಯಿ ಇರುವ ನನ್ನ ಪರ್ಸ್ ಇಲ್ಲೆಲ್ಲಿಯೋ ಬಿದ್ದು ಹೋಗಿದೆ. ಅದನ್ನು ನನಗೆ ತಲುಪಿಸಿದವರಿಗೆ 500 ರೂಪಾಯಿ ಬಹುಮಾನ ಕೊಡುತ್ತೇನೆ.

ಹಿಂದಿನಿಂದ ಎಲ್ಲಿಂದಲೋ ಒಂದು ದನಿ ಹೇಳಿತು - ನಾನು ಒಂದು ಸಾವಿರ ಕೊಡುತ್ತೇನೆ!

- - - -

ಒಬ್ಬ ತನ್ನ ಹೆಂಡತಿಯತ್ತ ಬಾಗಿ ಪಿಸು ಮಾತಿನಲ್ಲಿ ಕೇಳಿದ - ಒಂದು ರಹಸ್ಯ ಮಾತಿದೆ, ಅದನ್ನು ನಿನಗೆ ಹೇಳಿದರೆ , ಬೇರೆ ಯಾರಿಗೂ ಹೇಳದೆ ನಿನ್ನೊಳಗೆಯೇ ಇಟ್ಟುಕೊಳ್ಳಬಲ್ಲೆಯಾ?

" ಖಂಡಿತ!'' ಅವಳು ಕುತೂಹಲದಿಂದ ಹೇಳಿದಳು,

"ನಾನು ಕೂಡ" ಗಂಡ ಹೇಳಿ ಸುಮ್ಮನೆ ಕೂತ!

- - - -

ತಂದೆ ಮಗನಿಗೆ ಹೇಳಿದ - ನೀನು ದತ್ತು ಪುತ್ರ , ಕಣಯ್ಯ.

ಮಗ - ಏನು? ನನಗೆ ಸಂಶಯ ಇದ್ದೇ ಇತ್ತು. ನನ್ನ ನೈಸರ್ಗಿಕ ತಾಯ್ತಂದೆ ಯಾರು? ನಾನು ಅವರನ್ನು ಕಾಣಬೇಕು.

ತಂದೆ ಹೇಳಿದ- ನಾವೇನೆ ಕಣೋ. ನಿನ್ನನ್ನ ದತ್ತು ಕೊಟ್ಟಿದ್ದೀವಿ, ಇನ್ನರ್ಧ ಗಂಟೆಗೆ ಅವರು ಬರುತ್ತಾರೆ , ನೀನು ಗಂಟು ಮೂಟೆ ಕಟ್ಟು!

- - - -

- ಕಾಫಿ ಕುಡಿದರೆ ನನಗೆ ನಿದ್ದೆ ಬರುವುದಿಲ್ಲ
- ಹೌದಾ! ನನ್ನ ವಿಷಯ ತದ್ವಿರುದ್ಧ !
- ಹೌದಾ! ನಿಜವಾಗಿ ?
- ಹೌದು , ನನಗೆ ನಿದ್ದೆ ಬಂದು ಬಿಟ್ಟರೆ ಕಾಫಿ ಕುಡಿಯಲು ಆಗುವುದಿಲ್ಲ!!

Rating
Average: 4 (1 vote)