ಹೊಸ ನಗೆಹನಿಗಳು- ೫೬ ನೇ ಕಂತು

ಹೊಸ ನಗೆಹನಿಗಳು- ೫೬ ನೇ ಕಂತು

ಇಬ್ಬರು ಒಂದು ಬಸ್ ನಲ್ಲಿ ಪಯಣಿಸುತ್ತಿದ್ದರು.
ಒಬ್ಬ - ಈ ಬಸ್ ನಲ್ಲಿ 15 ವರುಷದಿಂದ ಪ್ರಯಾಣ ಮಾಡುತ್ತಿದ್ದೀನಿ

ಇನ್ನೊಬ್ಬ - ಹೌದೆ? ಈ ಬಸ್ ನ್ನು ನೀವು ಎಲ್ಲಿ ಹತ್ತಿದಿರಿ ?

---------

ಅವಳು - ನೀನು ನನ್ನ ಪಾಲಿಗೆ ಸೂರ್ಯನಾಗುವಿಯಾ?
ಅವನು- ಖಂಡಿತ
ಅವಳು - ಹಾಗಾದರೆ ನನ್ನಿಂದ ಒಂಬತ್ತು ಕೋಟಿ ಮೈಲು ದೂರ ಇರು!

-----

ವಕೀಲನಿಂದ ನನಗೆ ಇನ್ನೊಂದು ನೋಟೀಸು ಬಂದಿತು. ಅದರಲ್ಲಿ 'ಕೊನೆಯ ನೋಟೀಸು' ಎಂದು ಬರೆದಿತ್ತು.

ಸದ್ಯ ಅವನು ಇನ್ನು ಮುಂದೆ ನನಗೆ ತೊಂದರೆ ಕೊಡುವುದಿಲ್ಲ!

-----

ಇನ್ನು ಜನ 'ನಮ್ಮ ಗೋಳನ್ನು ಯಾರೂ ಕೇಳುವವರಿಲ್ಲ' ಎಂದು ಅನ್ನುವಂತಿಲ್ಲ.
ಸರಕಾರ ಜನರ ಫೋನುಗಳನ್ನು ಕದ್ದು ಕೇಳುತ್ತಿದೆಯಂತೆ!

Rating
No votes yet