ಹೊಸ ನಗೆಹನಿಗಳು- ೫೭ ನೇ ಕಂತು

ಹೊಸ ನಗೆಹನಿಗಳು- ೫೭ ನೇ ಕಂತು

ಡಾಕ್ಟರ್ - ನಿಮಗೆ ಬೊಜ್ಜು ಸ್ವಲ್ಪ ಹೆಚ್ಚೇ ಇದೆ.
ರೋಗಿ - ನಾನು ಎರಡನೇ ಅಭಿಪ್ರಾಯ ಕೇಳುವೆ.
ಡಾಕ್ಟರ್ - ಹಾಗಾದರೆ ಕೇಳಿ - ನೀವು ಸಾಕಷ್ಟು ಕುರೂಪಿ ಕೂಡ!

- - - - - -

ಒಂದು ಕಂಪನಿ ಮಾಲೀಕ ಇನ್ನೊಂದು ಕಂಪನಿಯ ಮಾಲೀಕನನ್ನು ಕೇಳಿದ - ನಿಮ್ಮ ಸಿಬ್ಬಂದಿ ಬೆಳಗ್ಗೆ ಕೆಲಸಕ್ಕೆ ಎಲ್ಲರೂ ಸಕಾಲಕ್ಕೆ ಹೇಗೆ ಹಾಜರಾಗುತ್ತಾರೆ?

ಅಂವ ಹೇಳಿದ - ತುಂಬಾ ಸುಲಭ . ಮೂವತ್ತು ಜನ ಕೆಲಸಗಾರರು ಇದ್ದಾರೆ, ಇಪ್ಪತ್ತು ಜನರ ವಾಹನಗಳಿಗೆ ಪಾರ್ಕಿಂಗ್ ಜಾಗ ವ್ಯವಸ್ಥೆ ಮಾಡಿದ್ದೀನಿ.

- - - - - -

--------------

ಪೇಪರು ಓದುತ್ತಿದ್ದವ ಹೆಂಡತಿಗೆ ಹೇಳಿದ - ನೋಡೇ, ಇಲ್ಲಿ ಬರೆದಿದೆ , ಹೆಂಗಸರು ಒಂದು ದಿನದಲ್ಲಿ ಗಂಡಸರಿಗಿಂತ ಎರಡು ಪಟ್ಟು ಮಾತಾಡುತ್ತಾರೆ ಅಂತ

ಹೆಂಡತಿ ಹೇಳಿದಳು - ನೀವು ಗಂಡಸರಿಗೆ ನಾವು ಪ್ರತಿಯೊಂದನ್ನೂ ಎರಡು ಬಾರಿ ಹೇಳಬೇಕಾಗುತ್ತಲ್ಲ ? ಅದಕ್ಕೆ!
------

ಒಬ್ಬ ಅಂಗಡಿಯಾತನಿಗೆ ಇನ್ನೊಬ್ಬ ಅಂಗಡಿಯವ ಕೇಳಿದ - ಅಂಗಡಿ ಕಾಯಲು ರಾತ್ರಿ ವಾಚ್ ಮನ್ ಬೇಕು ಅಂತ ಜಾಹಿರಾತು ಕೊಟ್ಟಿದ್ರಲ್ಲ , ಏನಾಯಿತು ?

ಅವ ಹೇಳಿದ - ಅವತ್ತೇ ರಾತ್ರಿ ನಮ್ಮ ಅಂಗಡಿಯಲ್ಲಿ ಕಳ್ಳತನ ಆಯಿತು .

Rating
Average: 5 (2 votes)