ಹೊಸ ನಗೆಹನಿಗಳು- ೫೮ ನೇ ಕಂತು
ಡಾಕ್ಟರ್ ಕೇಳಿದರು - ರಾತ್ರಿ ಮಲಗುವ ವೇಳೆ ಕಿಟಕಿ ತೆಗೆದಿಟ್ಟು ಮಲಗಲು ಹೇಳಿದ್ದೆ , ಈಗ ನಿಮ್ಮ ಉಸಿರಾಟದ ತೊಂದರೆ ಹೋಗಿದೆಯೇ ?
ರೋಗಿ - ಅದು ಹೋಗಿಲ್ಲ ; ಆದರೆ ನನ್ನ ಲ್ಯಾಪ್ಟಾಪ್ ಮತ್ತು ಮೊಬೈಲ್ ಹೋಗಿವೆ.
----------
ನೌಕರಿ ಬಯಸಿ ಬಂದವನಿಗೆ ಮ್ಯಾನೇಜರ್ ಹೇಳಿದರು - ನಮಗೆ ಹೊಣೆಗಾರ ಮನುಷ್ಯರು ಬೇಕು.
ಆತ ಹೇಳಿದ- ಸರ್ ನಾನು ತುಂಬ ಜವಾಬ್ದಾರಿ ಮನುಷ್ಯ ಸರ್ , ಹಿಂದಿನ ಕೆಲಸಗಳಲ್ಲೆಲ್ಲ ಏನೇ ಅನಾಹುತ , ಅಫರಾತಫರಾ ಆದರೂ ನನ್ನನ್ನೇ ಹೊಣೆ ಮಾಡುತ್ತಿದ್ದರು!
----------
ಆ ಸಂಖ್ಯಾಶಾಸ್ತ್ರಜ್ಞನು ಸತ್ತದ್ದು ಹೇಗೆ ಗೊತ್ತೇ ? ನೀರಿನ ಆಳ ಸರಾಸರಿ ಮೂರು ಅಡಿ ಎಂದು ನದಿಯನ್ನು ದಾಟಲು ಹೋದ!
----------
--ಆ ಸಂಖ್ಯಾಶಾಸ್ತ್ರಜ್ಞನ ಸಂಗತಿ ಇವನಿಗೆ ಗೊತ್ತಿರಬಹುದೇ ?
- ಅದು ಸಂಭವನೀಯ!
---------
Rating