ಹೊಸ ನಗೆಹನಿಗಳು- ೫೯ ನೇ ಕಂತು

ಹೊಸ ನಗೆಹನಿಗಳು- ೫೯ ನೇ ಕಂತು

ನಾನು ಮದುವೆ ಸಮಾರಂಭಗಳಿಗೆ ಹೋದಾಗಲೆಲ್ಲ  ಹಿರಿಯರು ನನಗೆ "  ಮುಂದಿನ  ಸರದಿ ನಿಂದೇ " ಅಂತ ಹೇಳುತ್ತಿದ್ದರು. ನನಗೂ ಕೇಳಿ ಕೇಳಿ ಸಾಕಾಗಿ  ಅಂತ್ಯಕ್ರಿಯೆಗಳಿಗೆ ಹೋದಾಗಲೆಲ್ಲ "ಮುಂದಿನ ಸರದಿ ನಿಮ್ಮದೇ " ಅಂತ ಹೇಳತೊಡಗಿದೆ !

---------

- ಪ್ರೀತಿಗೂ ಮದುವೆಗೂ  ಏನು ವ್ಯತ್ಯಾಸ ?
- ಪ್ರೀತಿ ಕುರುಡು ,   ಮದುವೆ ಕಣ್ಣು ತೆರೆಸುತ್ತದೆ!

---------

-  ಯಾವುದು  ಆದರ್ಶ ವಿವಾಹ ?
-  ಕಿವುಡ ಗಂಡ  ,  ಕುರುಡ ಹೆಂಡತಿಯದು!

---------

- ಗಂಡ ಅಥವಾ ಹೆಂಡತಿಯನ್ನು ಕಳೆದುಕೊಳ್ಳುವುದು ಅಂದರೆ ತುಂಬಾ ಕಠಿಣ , ಅಲ್ಲವೇ ?
- ಕಠಿಣ ? ಅಸಾಧ್ಯ ಅನ್ನಿ!

Rating
Average: 4.8 (4 votes)