ಹೊಸ ವರ್ಷ, ಹೊಸ ಹರ್ಷ

ಮತ್ತೊಂದು ವರ್ಷ ನಮ್ಮೆಡೆಯಿಂದ ಮರೆಯಾಯಿತು. ಕಳೆದ ವರ್ಷದ ಸಾವು ನೋವುಗಳು ಅಸಂಖ್ಯ. ಅದರಲ್ಲಿ ಜಪಾನಿನ ಸುನಾಮಿಯ ಪಾತ್ರ ಹಿರಿದು. ತದನಂತರ ಬಿನ್ ಲಾದೆನ್ ನ ಹತ್ಯೆ ಮತ್ತು ಹಲವಾರು ಗಣ್ಯರ ಸಾವು. ಇವೆಲ್ಲದರ ಮಧ್ಯೆ ನಾವು ನಮಗೆ ಮೋಸಮಾಡಿ ಕೊಳ್ಳಲೆಂದೇ ಮಾಡಿಕೊಳ್ಳುವ “ರೆಸಲ್ಯೂಶನ್” ಗಳು ‘ಲೂಸ್ ಮೋಶನ್’ ಗಳಾಗಿ ಜನವರಿ ಮೂರನೇ ವಾರದಲ್ಲೇ ವಿಸರ್ಜಿತ. ಆದರೂ ನಾವು ಸೋಲನ್ನು ಒಪ್ಪಿಕೊಳ್ಳೊಲ್ಲ. ಆದರೆ ಒಂದು ಮಾತು ನೆನಪಿರಲಿ, ಚಿಕ್ಕ ಪುಟ್ಟ resolution ಗಳು ಇರಲಿ, ಅದರಲ್ಲೂ ಕೈಗೆಟುಕುವಂಥದ್ದಾದರೆ ಇನ್ನೂ ಚೆನ್ನು. ಮಕ್ಕಳು ಕೇಕ್ ಮೇಲಿನ icing ಮಾತ್ರ ಕೆರೆದು ತಿನ್ನುವಂತೆ.
೨೦೧೨ ಕ್ಕೆ ಹೊಸ ಭರವಸೆಯೊಂದಿಗೆ ಸುಸ್ವಾಗತ ಬಯಸೋಣ.
“ಅವರೆಲ್ಲಾ ಭಿನ್ನ ಭಿನ್ನ ರಾಗಿರುತ್ತ್ತಾರೆ, ಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ. ನಮ್ಮ ಜೊತೆ ಜೊತೆಗೇ ಸಾಗುತ್ತಾ ಇರುತಾರೆ ಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆ”
ಈ ಮಾತುಗಳು ನಮ್ಮ ಪ್ರೀತಿಯ ಸಂಪದ ವೆಬ್ ತಾಣಕ್ಕೆ ಬರೆಯುವ ಹಿರಿಯ ಲೇಖಕರದು. ಡಿಸೆಂಬರ್ ೩೧ ರ ಸೂರ್ಯಾಸ್ತದೊಂದಿಗೆ ಗಂಟು ಮೂಟೆ ಕಟ್ಟುವ “ವರುಷ” ಎನ್ನುವ ಅತಿಥಿಯ
‘ಬರು – ಹೋಗು’ವಿಕೆ ಗೆ ಹೋಲಿಸಿ ಬರೆದ ಸುಂದರ ಕವನದಿಂದ ಹೆಕ್ಕಿದ ಸಾಲುಗಳು.
೨೦೧೨ ಸಮಸ್ತ ಕನ್ನಡಿಗರಿಗೂ, ಭಾರತೀಯರಿಗೂ ಶುಭಕರವಾಗಲೀ, “ಕನ್ನಡ ನಾಡು ಗಂಧದ ಬೀಡು” ಎನ್ನುವ ಹೆಸರಿಗೆ ತಕ್ಕುದಾಗಿ ನಡೆದು ಕೊಳ್ಳುವ ಔದಾರ್ಯ, ಸನ್ಮನಸ್ಸು ನಮ್ಮೆಲ್ಲರದಾಗಲಿ, ಭಾರತವೆಂಬ ವೈಭವ ಮತ್ತಷ್ಟು ವೈಭವೀಕೃತಗೊಳಿಸುವತ್ತ ನಮ್ಮ ಪ್ರಯತ್ನ, ಶ್ರಮ ನಿರಂತರವಾಗಿರಲಿ ಎನ್ನುವ ಹಾರೈಕೆಯೊಂದಿಗೆ 2012 ಕ್ಕೆ ತಳಿರು ತೋರಣ ಕಟ್ಟೋಣ.
ಚಿತ್ರ: ನನ್ನ ಕ್ಯಾಮರಾದಿಂದ
Comments
ಉ: ಹೊಸ ವರ್ಷ, ಹೊಸ ಹರ್ಷ