ಹೋಗಿ ಬರತೀನಿ - ಮನದಾಗಿಡೊ ನೆನಪ .. ಗೆಳೆಯಾ
ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ ವಿಮರ್ಶೆ ಇತ್ಯಾದಿ) ಬರೆದಿದ್ದೇನೆ . ಸುಮಾರು ೨೦೦ ಬ್ಲಾಗ್ ಲೇಖನಗಳಿರಬಹುದು . ಲೇಖನಗಳು ಒಂದೈವತ್ತು ಇರಬಹುದು . ಟೈಪಿಂಗಿನಲ್ಲಿ ಅಷ್ಟು ಬಲ್ಲಿದನಲ್ಲದ ನಾನು ಜಿಪುಣತನದಿಂದ ನಾನು ಹೇಳಬೇಕೆಂದುಕೊಂಡಿದ್ದನ್ನು ಹೇಳಿದ್ದೇನೆ.
ನೀವೂ ಸೇರಿದಂತೆ ಸುಮಾರು ೫೦೦ ರವರೆಗೆ ಜನ ಓದಿದ್ದೀರಿ.
೨೫೦೦ ಪಾಯಿಂಟ್ ಗಳಿಸಿದ್ದೇನೆ(?!).
ಸ್ವಲ್ಪ ಖಾಲಿ ಸಮಯ ಏನಾದರೂ ಮಾಡೋಣವೆಂದು , ಏನೇನನ್ನೋ ಮಾಡಿದ್ದೇನೆ . ಅದು ಮುಂದು ಏನೇ ಆಗಿರಲಿ, ( ನಾನು ತುತ್ತೂರಿ ಊದಿಕೊಂಡಾಗಲೂ ಕೂಡ ) ನೀವುಗಳು ಅಭಿಮಾನಪಟ್ಟು ಪ್ರೋತ್ಸಾಹಿಸಿದ್ದೀರಿ .
ಕೆಲವು ತಪ್ಪುಗಳನ್ನೂ ಮನ್ನಿಸಿದ್ದೀರಿ .
ಸದ್ಯ ಹೊಸ ಓದನ್ನು ಸಾಧಿಸಲಾಗುತ್ತಿಲ್ಲ . ಒಳ್ಳೇದು ಕಂಡಾಗ ಖಂಡಿತ ನಿಮಗೆ ತಿಳಿಸುವೆ.
ಆದರೆ ಬರೆಯಬೇಕೆಂಬ ಒಂದೇ ಉದ್ದೇಶದಿಂದ ಏನೇನನ್ನೋ ಬರೆಯುತ್ತಿದ್ದು ನಿಮ್ಮ ಸಮಯವನ್ನೂ ಹಾಳು ಮಾಡಲೊಲ್ಲೆ .
ಸದ್ಯಕ್ಕೆ (ಅನಕಾತ ) ನನ್ನ ಬ್ಲಾಗಿಗೆ ಸ್ವಲ್ಪ ಬಿಡುವು ಕೊಡಬೇಕೆಂದು ಮಾಡಿದ್ದೇನೆ .
ಖಂಡಿತ ಮತ್ತೆ ಬರೆಯುವೆ .
ಸಿಗೋಣ.
ಅಲ್ಲಿತನಕ
ಮನದಾಗಿಡೊ ನೆನಪ .. ಗೆಳೆಯಾ
ಧನ್ಯವಾದಗಳು.