ಹೌದು, ಇನ್ನೂ ಇಲ್ಲಿಯೇ ಇದ್ದಾನೆ!

ಹೌದು, ಇನ್ನೂ ಇಲ್ಲಿಯೇ ಇದ್ದಾನೆ!

ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿಸಿ ಕೇಳಿದ. ಎಲ್ಲರೂ "ಇಲ್ಲವಲ್ಲ, ನಮ್ಮ ಮನೆಗೆ ಬಂದಿರಲಿಲ್ಲ" ಎಂದುಲಿದರು.

 

ಮುಂದೊಂದು ದಿನ ಗಂಡ ರಾತ್ರಿಪೂರ್ತಿ ಮನೆಯಲ್ಲಿರಲಿಲ್ಲ. ಮಾರನೆಯ ದಿನ ಹೆಂಡತಿಗೆ "ನಾನು ಸ್ನೇಹಿತನ ಮನೆಯಲ್ಲಿ ಇದ್ದೆ" ಎಂದು ಹೇಳಿದ. ಹೆಂಡತಿಯ ಆತನ ಆಪ್ತರಾದ ಹತ್ತು ಜನರಿಗೆ ಫೋನು ಮಾಡಿ ಕೇಳಿದಾಗ ಐದು ಜನ "ಹೌದು ನನ್ನ ಮನೆಯಲ್ಲಿಯೇ ಇದ್ದ" ಎಂದು ಖಚಿತಪಡಿಸಿದರೆ ಇನ್ನೂ ಐದು ಮಂದಿ "ಇನ್ನೂ ನನ್ನೊಂದಿಗೇ ಇದ್ದಾನಲ್ಲ! ಮಧ್ಯಾಹ್ನ ಕಳುಹಿಸಿತ್ತೇವೆ ಬಿಡಿ" ಎಂದು ಉತ್ತರಿಸಿದರು.

 

ನೀತಿ. ಹೆಂಗಳೆಯರಿಗಿಂತ ಗಂಡಸರೇ ಉತ್ತಮ ಸಂಗಾತಿಗಳು.

 

ಸೂಚನೆ: ಮಿಂಚಿದಂಚೆಯೊಂದರ ಅನುವಾದವಿದು.

Rating
No votes yet

Comments