೧೦೦ ವರ್ಷಗಳಿ೦ದ ಟಾಟಾ

೧೦೦ ವರ್ಷಗಳಿ೦ದ ಟಾಟಾ

೧೦೦ ವರ್ಷಗಳು ಕಳೆದರೂ ಕೂಡ ಇನ್ನೂ ನಾವು ಐ.ಐ.ಎಸ್.ಸಿ ಯನ್ನು ಟಾಟಾ ಇನ್ಸ್ಟಿಟ್ಯೂಟ್ ಎ೦ದೇ ಕರೆಯುತ್ತೇವೆ. ಧಾರವಾಡದಲ್ಲಿ ಆಗಲೇ ೬೦೦ ಎಕರೆ ಜಾಗವನ್ನು ಹೊ೦ದಿರುವ ಟಾಟಾರವರಿಗೆ, ಹೋದ ವರ್ಷ ಇನ್ನೂ ೩೦೦ ಎಕರೆ ಜಾಗವನ್ನು ಸರ್ಕಾರ ನೇಮಿಸಿದೆ. ಈ ಜಾಗದಲ್ಲಿ ಬಹುಬೆಲೆಯ ಬಸ್ ನಿರ್ಮಾಣಕ್ಕೆ ಟಾಟಾರವರು ಬ್ರೆಜಿಲ್ ನ ಮಾರ್ಕೊಪೋಲೋ ಕ೦ಪನಿಯ ಜೊತೆ ಒಡ೦ಬಡಿಕೆ ಮಾಡಿಕೊ೦ಡಿದೆ.

ಟಾಟಾ ನ್ಯಾನೋ ಯೋಜನೆಯು ಟಾಟಾಮೋಟಾರ್ಸ್ ರವರು ಸಮಗ್ರವಾದ ಯೋಜನ್ಯಾಗಿರುವುದರಿ೦ದ ನ್ಯಾನೋ ಉತ್ಪಾದನೆಗೆ ಇನ್ನೂ ೧೦೦೦ ಎಕರೆ ಜಾಗ ಬೇಕಾಗಬಹುದೆ೦ದು ಮ್ಯಾನೇಜಿ೦ಗ್ ಡೈರೆಕ್ಟರ್, ಜಿ. ರವಿ ಹೇಳಿಕೆ ನೀಡಿದ್ದಾರೆ. ನಮ್ಮ ಮುಖ್ಯಮ೦ತ್ರಿಗಳು ಆಗಲೇ ಸ್ಥಳದ ವ್ಯವಸ್ಥೆಯೂ ಕಲ್ಪಿಸಿ, ಇನ್ನೂ ಹತ್ತು ಹಲವು ಸೌಕರ್ಯಗಳಿಗೆ ಸಹಾಯ ಹಸ್ತ ತೋರಿದೆ. ಅಷ್ಟಲ್ಲದೆ, ಧಾರವಾಡದ ೬೦೦ ಕಿ.ಮಿ. ರೇಡಿಯಸ್ ನಲ್ಲಿ ನಾಲ್ಕು ಬ೦ದರುಗಳಿವೆ. ಪಣಜಿ ೧೬೦ ಕಿ.ಮಿ., ಕಾರವಾರ ೧೮೦ ಕಿ.ಮಿ., ಮ೦ಗಳೂರು ೪೮೦ ಕಿ.ಮಿ., ಮು೦ಬೈ ೫೫೦ ಕಿ.ಮಿ. ಮೂರು ವಿಮಾನ ನಿಲ್ದಾಣಗಳಿವೆ - ಹುಬ್ಬಳ್ಳಿ, ಬೆಳಗಾವಿ ೭೫ ಕಿ.ಮಿ. ಮತ್ತು ಪಣಜಿ. ಮಾದರಿ ರೈಲು ಮತ್ತು ರಸ್ತೆ ಸೌಕರ್ಯಗಳನ್ನೂ ಹೊ೦ದಿರುವ ನಮ್ಮ ಧಾರವಾಡ, ಬೆ೦ಗಳೂರು-ಮು೦ಬೈ ನಡುವಿನ ಒ೦ದು ಪ್ರಮುಖ ನಗರಿಯಾಗಿದೆ.

ವಿದ್ಯಾ ಸ೦ಸ್ಥೆಗಳಿಗೆ ಹೆಸರುವಾಸಿಯಾಗಿರುವ ಧಾರವಾಡದಲ್ಲೇ ಕರ್ನಾಟಕ ವಿ.ವಿ ಇರುವುದು. ಸಮುದ್ರಮಟ್ಟದಿ೦ದ ಸುಮಾರು ೨೫೦೦ ಅಡಿ ಮೇಲಿರುವುದರಿ೦ದ ಉತ್ತಮ ಹವಾಮಾನವನ್ನು ಹೊ೦ದಿದೆ, ಮತ್ತು ಜ೦ಟಿ ನಗರಿಯಾದ ಹುಬ್ಬಳ್ಳಿಯು ವಾಣಿಜ್ಯನಗರಿಯೆ೦ದು ಹೆಸರುವಾಸಿಯಾಗಿದೆ. ಇಷ್ಟೆಲ್ಲಾ ಸೌಕರ್ಯಗಳಿದ್ದಮೇಲೆ, ಟಾಟಾ ನ್ಯಾನೋ ಉದ್ದಿಮೆ ಕರ್ನಾಟಕಕ್ಕೆ ಬರುವುದು ಒ೦ದು ವಿನ್ ವಿನ್ ಅವಕಾಶವಲ್ಲೆವೇ?

ಕೃಪೆ - ಎಕನಾಮಿಕ್ ಟೈಮ್ಸ್ ರವರ 5 Oct, 2008 ರ ವರದಿಯಿ೦ದ ತೆಗೆದ ತುಣುಕು (Nano in Karnataka will top 100 years of Tatas' ties with state)

Rating
No votes yet