೧೬. ಲಲಿತಾ ಸಹಸ್ರನಾಮ - ’ಶ್ರೀ ವಿದ್ಯಾ’ದ ವಿವರಣೆ

೧೬. ಲಲಿತಾ ಸಹಸ್ರನಾಮ - ’ಶ್ರೀ ವಿದ್ಯಾ’ದ ವಿವರಣೆ

ಶ್ರೀ ವಿದ್ಯಾ

         ಶ್ರೀ ವಿದ್ಯಾ ಎಂದರೆ ಮಂಗಳಕರವಾದ ಜ್ಞಾನ. ಲಲಿತಾಂಬಿಕೆಗೆ ಸಂಭಂದಿಸಿದ್ದೆಲ್ಲವೂ ಮಂಗಳಕರವಾಗಿದೆ. ದೇವಿಯ ಕುರಿತಾದ ಜ್ಞಾನವು ಗುರುವಿನಿಂದ ಶಿಷ್ಯನಿಗೆ ದೀಕ್ಷೆ ಕೊಡುವುದರ ಮೂಲಕ ವರ್ಗಾಯಿಸಲ್ಪಡುತ್ತದೆ. ಗುರುವು ತನ್ನ ಶಿಷ್ಯನಿಗೆ ಪಂಚದಶೀ ಮಂತ್ರ ಅಥವಾ ಮತ್ತ್ಯಾವುದಾದರೂ ತನ್ನ ಆಯ್ಕೆಯ ಮಂತ್ರವನ್ನು ಶಿಷ್ಯನಿಗೆ ಉಪದೇಶಿಸುತ್ತಾನೆ. ಸಾಮಾನ್ಯವಾಗಿ ಪ್ರಥಮ ದೀಕ್ಷೆಯು ದೇವಿಯ ಕಿರಿಯ ವಯಸ್ಸಿನ ರೂಪವಾದ ಬಾಲಾ ಮಂತ್ರವಾಗಿರುತ್ತದೆ (ಇದನ್ನು ಮುಂದಿನ ಕಂತುಗಳಲ್ಲಿ ನೋಡೋಣ). ಶಿಷ್ಯನ ಸಾಧನೆಯನ್ನು ಅವಲಂಬಿಸಿ ಪಂಚದಶೀ ಅಥವಾ ಷೋಡಶೀ ಮಂತ್ರವನ್ನು ಗುರುವು ಉಪದೇಶ ಮಾಡುತ್ತಾನೆ. ಲಲಿತಾಂಬಿಕೆಯ ಪರಮೋನ್ನತ ಮಂತ್ರವು ಮಹಾ-ಷೋಡಶೀ ಮಂತ್ರವಾಗಿದ್ದು ಅದು ಸಾಧಕನನ್ನು ಮುಕ್ತಿಯೆಡೆಗೆ ಕರೆದೊಯ್ಯುತ್ತದೆ.

        ಗುರು-ಶಿಷ್ಯರ ಸಂಭಂದವು ಶಿಷ್ಯನು ಸಂಪೂರ್ಣ ಪುರೋಗತಿಯನ್ನು ಹೊಂದಿ ಸ್ವತಂತ್ರನಾಗುವವರೆಗೆ ಮುಂದುವರೆಯುತ್ತದೆ. ನಿಜವಾದ ಗುರು ಮತ್ತು ಸಾಮಾನ್ಯ ಗುರು ಇವರುಗಳ ನಡುವೆ ಅಗಾಧವಾದ ವ್ಯತ್ಯಾಸವಿರುತ್ತದೆ. ನಿಜವಾದ ಗುರುವೆಂದರೆ ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿ ಮತ್ತು ಸಾಮಾನ್ಯ ಗುರು ಎಂದರೆ ಕೇವಲ ತಂತ್ರಶಾಸ್ತ್ರಗಳನ್ನು ಓದಿಕೊಂಡವನಾಗಿದ್ದು ಅದಕ್ಕೆ ಸಂಭಂದಿಸಿದ ವಿಧಿಬದ್ಧ ಆಚರಣೆಗಳೊಂದಿಗೆ ಅನುಭಂದವನ್ನಿಟ್ಟುಕೊಂಡು ಆ ಆಚರಣೆಗಳೊಂದಿಗೇ ಇದ್ದು, ತನ್ನಷ್ಟಕ್ಕೆ ತಾನೇ ಶ್ರೀ ವಿದ್ಯೆಯ ಮೇಲೆ ಪ್ರಭುತ್ವವನ್ನು ಸಾಧಿಸಿದ್ದೇನೆಂದು ಸ್ವಯಂ ಘೋಷಣೆ ಮಾಡಿಕೊಳ್ಳುವವನು (ಕೊಚ್ಚಿಕೊಳ್ಳುವವನು). ಗುರುವಿನಿಂದ ಉಪದೇಶಿಸಲ್ಪಟ್ಟ ಮಂತ್ರಗಳನ್ನು ನಿರ್ಧಿಷ್ಠ ಸಂಖ್ಯೆಯಲ್ಲಿ ಉಚ್ಛರಿಸಬೇಕು (ಪಠಿಸಬೇಕು). ಹೀಗೆ ನಿಗದಿ ಮಾಡಲ್ಪಟ್ಟ ನಿರ್ಧಿಷ್ಟ ಸಂಖ್ಯೆಯನ್ನು ಪೂರ್ಣಗೊಳಿಸಿದ ನಂತರ ಶಿಷ್ಯನಾದವನು ಕೆಲವೊಂದು ಯಜ್ಞ-ಯಾಗಾದಿಗಳನ್ನು ಕೈಗೊಳ್ಳಬೇಕು. ಒಂದೊಮ್ಮೆ ನಿಗದಿತ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸದ ಮೇಲೆ ಶಿಷ್ಯನಾದವನು ದೇವಿಯೊಂದಿಗೆ ದೈವೀ ಸಂಭಂದವನ್ನು ಏರ್ಪಡಿಸಿಕೊಳ್ಳಲು ಸಾಧ್ಯವಾಗಬೇಕು.

        ಮಂತ್ರ ಜಪದ ಜೊತೆಗೆ ಶ್ರೀ ಚಕ್ರದ ವಿಧಿಬದ್ಧ ಪೂಜಾಚರಣೆಯ ಕ್ರಮವನ್ನು ಗುರುವಾದವನು ತನ್ನ ಶಿಷ್ಯನಿಗೆ ಕಲಿಸಿಕೊಡುತ್ತಾನೆ. ಶಿಷ್ಯನಾದವನು ನಿರ್ಧಿಷ್ಠ ಸಂಖ್ಯೆಯಲ್ಲಿ ಮೂಲಮಂತ್ರವನ್ನು (ಪಂಚದಶೀ ಅಥವಾ ಷೋಡಶೀ) ದಿನನಿತ್ಯ ಜಪಿಸಬೇಕು ಮತ್ತು ಇದಾದ ನಂತರ ವಿಧಿಬದ್ಧವಾಗಿ ಶ್ರೀ ಚಕ್ರದ ಪೂಜೆಯನ್ನು ಮಾಡಬೇಕು. ಇವೆರಡರ ನಂತರ ಧ್ಯಾನವನ್ನು ಕೈಗೊಳ್ಳಬೇಕು. ಶ್ರೀ ವಿದ್ಯಾ ಪೂಜಾ ಕ್ರಮದ ವಿಶೇಷವೇನೆಂದರೆ ಅದು ಗುರು-ಶಿಷ್ಯರ ಸಂಭಂದದ ಕುರಿತದ್ದಾಗಿದೆ. 

******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ ŚRĪ VIDYĀ श्री विद्या http://www.manblunder.com/2012/04/sri-vidya-sri-vidya.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
No votes yet

Comments

Submitted by nageshamysore Sun, 01/26/2014 - 16:50

ಶ್ರೀಧರರೆ, ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ ಸಿದ್ಧ :-)
.
೧೬. ಲಲಿತಾ ಸಹಸ್ರನಾಮದ ವಿವರಣೆ - ಶ್ರೀ ವಿದ್ಯಾ
________________________________________
.
ಶ್ರೀ ವಿದ್ಯಾ  (ಗುರು ಶಿಷ್ಯ ಸಂಬಂಧ)
.
ಲಲಿತೆಯಂತೆ ಮಂಗಳಕರ ಜ್ಞಾನ, ಶ್ರೀವಿದ್ಯಾ ದೀಕ್ಷೆ ಗುರು ಮುಖೇನ
ದೇವಿಯ ಕಿರಿ ವಯಸ ರೂಪ ಬಾಲಾ ಮಂತ್ರ, ಪ್ರಥಮ ದೀಕ್ಷಾಜ್ಞಾನ
ಅರ್ಹತೆ ಸಾಧನೆಗೆ ತಕ್ಕಾದೀಕ್ಷೆ, ಪಂಚದಶೀ ಷೋಡಶೀ ಆಯ್ದು ಗುರು
ಲಲಿತಜ್ಞಾನ ಪರಮೋನ್ನತ ಮಹಾಮಂತ್ರ ಷೋಡಶೀ ಮುಕ್ತಿಗೆ ತೇರು ||
.
ತಂತ್ರ ಶಾಸ್ತ್ರದವ ಸಾಮಾನ್ಯಗುರು, ಆತ್ಮಸಾಕ್ಷಾತ್ಕಾರವಿಹ ನಿಜಗುರು
ಶಿಷ್ಯನಾಗುವವರೆಗೆ ಪರಿಣಿತ ಸ್ವತಂತ್ರ, ಬಿಡದೆ ಹಿಡಿದೆ ನಡೆಸುವತರು
ಕೊಚ್ಚಿಕೊಳ್ಳದ ಸಾಧನೆ ಪ್ರಬುದ್ಧ, ಪಠಿಸಿ ಗುರುವಿನ ಮಂತ್ರ ನಿರ್ದಿಷ್ಟದ
ಯಜ್ಞಯಾಗಾದಿ ಶಾಸ್ತ್ರೋಕ್ತ ನಿಗದಿತ, ಶಿಷ್ಯ-ದೇವಿಗೆ ದೈವೀ ಸಂಬಂಧ ||
.
ಶ್ರೀ ವಿದ್ಯಾ ಪೂಜಾಕ್ರಮ ವಿಶೇಷ, ಗುರು ಶಿಷ್ಯ ಸಂಬಂಧದ ಪರಮಪಥ
ಮಂತ್ರ ಜಪದ ಜೊತೆಗೆ ಶ್ರೀ ಚಕ್ರದ, ವಿಧಿಬದ್ದ ಪೂಜಾಚರಣೆ ಕಲಿಸುತ
ಮೂಲ ಪಂಚದಶೀ, ಷೋಡಶೀ ಜಪಿಸಿ ನಿರ್ದಿಷ್ಟ, ನಿತ್ಯ ಶ್ರೀಚಕ್ರಕೆ ಪೂಜ
ವಿಧಿಬದ್ಧನಾಗಿ ಮುಗಿಸಿದ ಶಿಷ್ಯ, ಕೈಗೊಳ್ಳುತ ಲಲಿತಾಧ್ಯಾನವ ಸಹಜ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು