೨೦೧೨ ರ ಲಂಡನ್ ಒಲಂಪಿಕ್ಸ್ ನ ಭಾರತದ ಸಾಧನೆಯೇನು ಕಡಿಮೆ ಮಹತ್ವದ್ದೆ? !

೨೦೧೨ ರ ಲಂಡನ್ ಒಲಂಪಿಕ್ಸ್ ನ ಭಾರತದ ಸಾಧನೆಯೇನು ಕಡಿಮೆ ಮಹತ್ವದ್ದೆ? !

ಕೃಪೆ : ಸಿ.ಏನ್.ಏನ್. ತಾಣ : Courtesy : CNN Telivision.ಬಣ್ಣ-ಬಣ್ಣದ ಫೈರ್ ವರ್ಕ್ಸ್ ನೋಡಿ ಆನಂದಿಸಿ !

http://www.cnn.com/video/?/video/sports/2012/08/12/vo-oly-finale-fireworks.cnn#/video/sports/2012/08/12/vo-oly-finale-fireworks.cnn

ಆಗಸ್ಟ್, ೧೨ ರ,  ರವಿವಾರ ಸಾಯಂಕಾಲ ಇಲ್ಲಿನ ೪ ಗಂಟೆಗೆ ಸರಿಯಾಗಿ ಶುರುವಾದ ಸುಂದರ ಸಮರ್ಥ, ಹಾಗೂ ಸಮರ್ಪಕವಾಗಿ ಆಯೋಜಿಸಿದ್ದ ಸಮಾಪನ ಕಾರ್ಯಕ್ರಮ, ೭.೧೫ ಕ್ಕೆ ಮುಗಿಯಿತು. ಅದನ್ನು ಕೆನಡಾದ ಪ್ರಸಿದ್ಧ ಮೀಡಿಯಾಗಳಲ್ಲೊಂದಾದ 'ಸಿಟೀವಿ,' ಲಂಡನ್ ನಿಂದ ನೇರಪ್ರಸಾರವನ್ನು ಮಾಡಿತು. ಇಲ್ಲಿನ ಕ್ರೀಡಪ್ರೇಮವನ್ನು ನಾವು ನೋಡಿಯೇ ಅನುಭವಿಸಬೇಕು. ೪X೪೦೦ ಮೀಟರ್ ರಿಲೆರೇಸ್ ನಲ್ಲಿ ಮಾಡಿದ ಫ಼ೌಲ್ ನಿಂದಾಗಿ ಸಿಕ್ಕಿದ್ದ ಕಂಚಿನಪದಕದಿಂದ ವಂಚಿತರಾದ ಅವರ ನೋವನ್ನು ಕೆನಡಾದ ಪ್ರತಿಯುವಜನರ ಕಣ್ಣಿನಲ್ಲಿ ನಾವುಕಂಡೆವು. ನಮ್ಮಜನರಿಗೆ ಸ್ಪೋರ್ಟ್ಸ್ ಬಗ್ಗೆ ಆಸಕ್ತಿಯಿಲ್ಲ ಸರ್ಕಾರ ಈಗ ಹಣದ ನೆರವನ್ನೇನೋ ಕೊಡುತ್ತಿದೆ. ಆದರೆ ಅಸ್ಥಿರತೆ ರಾಜಕೀಯ ಎಲ್ಲವನ್ನೂ ನಿರರ್ಥಕಗೊಳಿಸುತ್ತಿದೆ. ಇದರ ಮಧ್ಯೆಯೂ ನಮ್ಮ ಆಟಗಾರ(ಗಾರ್ತಿಯರು) ರು ತಮ್ಮ ಅನುಪಮ ಯೋಗದಾನಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ಒಲಂಪಿಕ್ಸ್ ನಲ್ಲಿ ಹಲವಾರು ಮೆಡಲ್ ಗಳು ಬರುವುದು ಖಂಡಿತ ನನ್ನ ಪ್ರಕಾರ ಅವುಗಳಲ್ಲಿ ಹೆಚ್ಚಿನವು ಸ್ವರ್ಣ ಹಾಗೂ ರಜತ ಪದಕಗಳಾಗಿರುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ !
ಸನ್, ೨೦೧೨ ರ,  ಲಂಡನ್ ಒಲಂಪಿಕ್ಸ್, ನ ಬಗ್ಗೆ ಹೇಳಲು ಒಂದಲ್ಲ ಎರಡಲ್ಲ ಹಲವಾರು ಸಂಗತಿಗಳಿವೆ. ಎಲ್ಲವು ದಾಖಲಿಸಲು ಯೋಗ್ಯವಾದವುಗಳೇ ! ಬ್ರಿಟನ್ ನ ರಾಣಿ ಸಮಾಪನ ಕಾರ್ಯಕ್ರಮವನ್ನು ನಡೆಸಿಕೊದಬಹುದಿತ್ತು. ರಾಣಿಗೆ ಅದೆಷ್ಟು ರಕ್ಷಣೆ ವ್ಯವಸ್ಥೆ ಮಾಡಬೇಕು ?  ಅವರ ಪ್ರಧಾನಮಂತ್ರಿ ಗಂಟೆಗಟ್ಟಲೆ ಮುಂದಿದ್ದ ಜನರಮುಂದೆ ತಮ್ಮ ಭಾಷಣಮಾಡಿ ಬೋರ್ ಹೊಡೆಸಬಹುದಿತ್ತು. ಆದರೆ ಅಂತಹ ಸಂದಿಗ್ಧ ಪರಿಸ್ಥಿತಿ ಅವರು ತರಲಿಲ್ಲ. ಚಿಕ್ಕ-ಚೊಕ್ಕ ಭಾಷಣ, ತಮ್ಮ ಹಿಂದಿನ ಓಟಗಾರನಿಂದ, ಮತ್ತು ಒಲಂಪಿಕ್ ಕಮಿಟಿಯ ಅಧ್ಯಕ್ಷರ ಭಾಷಣ ಅಷ್ಟೇ ! ಆ ಭಾಷಣವನ್ನು ದ್ವನಿಮುದ್ರಿಸಿ ನಮ್ಮ ರಾಜಕಾರಣಿಗಳಿಗೆ ತರಪೇತು ಕೊಡುವಾಗ ಕೇಳಲು ಕೊಡಬೇಕು ! ಅದೆಷ್ಟು ಸ್ಪಷ್ಟ ಸಂದೇಶ; ನಿರ್ವಾಹಕರಿಗೆ, ಬಹುಮಾನ ಗಳಿಸಿದವರಿಗೆ ಬಹುಮಾನದಿಮ್ದ ವಂಚಿತರಾದವರಿಗೆ, ದೇಶವಾಸಿಗಳಿಗೆ, ವಿದೇಶಿಗಳಿಗೆ, ಮತ್ತು ಪ್ರತಿದಿನ ಕಷ್ಟಪಟ್ಟು ದುಡಿದು ಆ ೧೭ ದಿನಗಳ ಸಂಭ್ರಮದ ಆಟಗಳ ಹಬ್ಬವನ್ನು ನಡೆಸಿಕೊಟ್ಟ ಸ್ಥಳೀಯ ಸ್ವಯಂ ಸೇವಕರಿಗೆ, ಹೀಗೆ ಎಲ್ಲರನ್ನು ನೆನೆದು ತಮ್ಮ ಮಾತುಗಳನ್ನು  ಮುಗಿಸಿದ 'ಸೇಬಾಶ್ಸಿಯನ್ ಕೂ' ವಂದನಾರ್ಹರು !
 
ಚಿತ್ರದಲ್ಲಿ :   ಬ್ರಟನ್ ನ ಹಿಂದಿನ ಸುಪ್ರಸಿದ್ಧ ಓಟಗಾರ,  'ಸೆಬೆಶ್ಚಿಯನ್ ಕೊ,' ಸಮಾಪನ ಭಾಷಣ ಮಾಡುತ್ತಿರುವುದು. 

'೨೦೧೨ ರ ಲಂಡನ್ ಒಲಂಪಿಕ್ಸ್ ನ ಕೊನೆಯದಿನ' ದಂದು, ಭಾರತದ (೧೨-೦೮-೨೦೧೨) ಸುಶೀಲ್ ಕುಮಾರ್,  '೬೬ ಕೆಜಿ ಫ್ರೀ ಸ್ಟೈಲ್ ರೆಸ್ಲಿಂಗ್ ' ನಲ್ಲಿ ಜಪಾನಿನ 'ಟ್ಯಾಟ್ ಸುಹಿರೊ ಯೊನೆ ಮಿತ್ಸು,' ರೊಂದಿಗೆ ಫೈನಲ್ ಪಂದ್ಯದಲ್ಲಿ ಸೆಣಿಸಿ, ಲೀಡ್ ಇಟ್ಟುಕೊಳ್ಳುವಲ್ಲಿ ಅಸಮರ್ಥರಾಗಿ 'ರಜತ ಪದಕ'ದಿಂದ ಸಮಾಧಾನ ಪಟ್ಟುಕೊಳ್ಳಬೇಕಾಯಿತು.

೨೯ ವರ್ಷ ಪ್ರಾಯದ, ಹರಿಯಾಣದ ಸೋನೆಪತ್ ಊರಿನ ಯುವ ಪ್ರತಿಭೆ  ಯೋಗೇಶ್ವರ್ ದತ್,  ೨೦೧೨ ರ ಲಂಡನ್ ಒಲಂಪಿಕ್ಸ್ ನಲ್ಲಿ  ೬೦ ಕೇಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಉ.ಕೊರಿಯದ ಜಾಂಗ್ ಮ್ಯೊಂಗ್  ರನ್ನು  ಸೋಲಿಸಿ,  ಕಂಚಿನಪದಕ ಗಳಿಸಿದರು. (ಒಂದೇ ದಿನದಲ್ಲಿ ೩ ಪಂದ್ಯಗಳನ್ನು ಆಡಿ)

ಕೃಪೆ : ಇಂಗ್ಲೀಷ್ ವಿಕಿಪೀಡಿಯಾದಿಂದ 

http://en.wikipedia.org/wiki/India_at_the_2012_Summer_Olympics 

ಅತೃಪ್ತಿ ಅಸಮಧಾನ, ಹಾಗೂ ಅಸಡ್ಡೆ ನಮ್ಮ ದೇಶದ ಸಾಮಾನ್ಯ ಜನರ ಮನಸ್ಸಿನಲ್ಲಿ ಹೊಗೆಯಾಡುತ್ತಿದೆ. ಆಟವೆಂದರೆ ಅಸಹ್ಯಬರುವಷ್ಟು ರಾಜಕೀಯದಿಂದ ಕೆಟ್ಟು ಹೊಲಸುನಾರುತ್ತಿರುವ ಪರಿಸರದಲ್ಲಿ ಆಶೆಯ ಜ್ಯೋತಿಯನ್ನು ಹಚ್ಚಿ ನಮ್ಮೆಲ್ಲರನ್ನು ಎಚ್ಚರಿಸಿದ ನಮ್ಮ ಈ ಒಲಂಪಿಕ್ಸ್ ನ ಕ್ರೀಡಾಪಟುಗಳಿಗೆ ಶತ-ಶತ ಪ್ರಣಾಮಗಳು. ಇದುವರೆಗೆ ನಮಗೆ ಆದರ್ಶಪ್ರಾಯರಾಗಿದ್ದವರು, ಧ್ಯಾನ್ ಚಂದ್, ಹಾಕಿಯಲ್ಲಿ ಮತ್ತು ಮಿಲ್ಖಾ ಸಿಂಗ್-ಅವರಿಗೆ ಒಲಂಪಿಕ್ಸ್ ನಲ್ಲಿ ಪದಕದೊರೆಯಲಿಲ್ಲ. ಆದರೂ ನಮಗೆ ಹೇಳಿಕೊಳ್ಳಲು ಒಬ್ಬ ಆದರ್ಶ್ ಸ್ಪೋರ್ಟ್ಸ್ ಪರ್ಸನ್ ಇರಲೇ ಇಲ್ಲ. ಆಮೇಲೆ ಅಭಿನವ್ ಬಿಂದ್ರಾ, ಹರ್ಷ ವರ್ಧನ್ ರಾಥೋಡ್, ವಿಜಯ್ ಕುಮಾರ್ ಮೊದಲಾದವರು ಬಂದರು. ಈಗಲಂತೂ ಅದೆಷ್ಟು ಯುವ ಪ್ರತಿಭೆಗಳಿವೆ ನಮ್ಮಲ್ಲಿ ? ಆದರೆ ಕ್ರಿಕೆಟ್ ಹುಚ್ಚು ತಪ್ಪಿಲ್ಲ; ಬೇರೆ ಆಟಗಳಿಗೂ ಆದ್ಯತೆ ಬೇಡವೇ ?? ಕೆಟ್ಟ ಕ್ರಿಕೆಟ್ ಗೆ ದೊರಕುತ್ತಿರುವ ಅತಿ ಪ್ರಾಮುಖ್ಯತೆ ನಮ್ಮೆಲ್ಲರ ಈ ಬೇಸರಕ್ಕೆ ಕಾರಣವೆನ್ನುವುದರಲ್ಲಿ ತಪ್ಪೇನಿದೆ ? 

ನಮ್ಮ ರಾಷ್ಟ್ರದ ಬೇರೆ ಆಟಗಳಲ್ಲಿ ನಮ್ಮ ಯುವಜನತೆ ಹೆಚ್ಚು ಹೆಚ್ಚು ಪ್ರಾವೀಣ್ಯತೆಗಳನ್ನು ಹೊಂದಿದ್ದಾರೆ ಸಮಯಬಂದಾಗ ತೋರಿಸುತ್ತಿದ್ದಾರೆ ಸಹಿತ ! ನಮ್ಮ ಭಾರತದ ಆಟಗಾರರು ಮಾಡಿರುವ ಸಾಧನೆಗಳನ್ನು ಗಮನಿಸಿ. ಎಷ್ಟುಜನಕ್ಕೆ ಈ ಸಾಧಕರಬಗ್ಗೆ ತಿಳಿದಿದೆ ? ನಾನೇ ಈದಿನ ಬೆಳಿಗ್ಯೆ ನೋಡಿದಾಗ ಅದೆಷ್ಟು ಹೊಸ ಪ್ರತಿಭೆಗಳು ಅಂತಾರಾಷ್ಟ್ರೀಯ  ಮಟ್ಟದಲ್ಲಿ ಮಿಂಚುತ್ತಿವೆ. ಅವರಿಗೆ ಸರಿಯಾದ ಸಹಾಯ ಪ್ರೋತ್ಸಾಹ ಬೇಕಷ್ಟೆ. ನಮ್ಮ ಸರಕಾರ ಮತ್ತು ಖಾಸಗೀ ವಲಯದ ಸ್ಪಾನ್ ಸರ್ ಗಳೂ ತಮ್ಮ ಅಮೋಘ ಸಹಕಾರನೀಡಿದ್ದಾರೆ. ಈಗ ನಾವು ಸ್ವಲ್ಪ ಕಣ್ಣುತೆರೆದು ನಮ್ಮವರ ಕೊಡುಗೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ,
 
ಸಂಪದಿಗರೇ ಏಳಿರಿ ಎಚ್ಚರಗೊಳ್ಳಿರಿ. ಆಟಗಳಬಗ್ಗೆಯೂ ಸ್ವಲ್ಪ ಓದಿ. ಇಂದಿನ ನಮ್ಮ ಯುವಜನರ ಆದ್ಯತೆಗಳನ್ನು ನಾವೂ-ನೀವೂ ಅರಿಯುವ ಅಗತ್ಯವಿದೆ. ಏಳಿ ಎದ್ದೇಳಿ ಓ ನಮ್ಮ ಗೆಳೆಯರೇ !  

೨ ೦೧೨ ರ ಲಂಡನ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾರ್ಥಿಗಳ ವಿವರ ಹಾಗೂ ಒಂದು ಚಿಕ್ಕ ಸಮೀಕ್ಷೆ : 

ನಾಲ್ಕು ವರ್ಷಕ್ಕೊಮ್ಮೆ ವಿಶ್ವದ ಯಾವುದಾದರೊಂದು ರಾಷ್ಟ್ರ ಆಯೋಜಿಸಿ ನಡೆಸಲಾಗುವ ಅತ್ಯಂತ ಮತ್ವದ ಕ್ರೀಡಾ ಕೂಟ. ಈ ಮಹಾ ಕ್ರೀಡಾ ಕೂಟದಲ್ಲಿ ನಮ್ಮ ಭಾರತ ಭಾಗವಸಿತ್ತು. ಒಟ್ಟು ಕ್ರೀಡಾಳುಗಳ ಸಂಖ್ಯೆ ೮೩, ಮತ್ತು ಭಾಗವಹಿಸಲು ಶ್ರಮಪಟ್ಟದ್ದು ೧೩ ಕ್ರೀಡಾ ವಿಭಾಗಗಳಲ್ಲಿ.
 
ಸಾರಾಂಶ :
 
ಆಗಸ್ಟ್ ೧೦ ರಂದು ನಮ್ಮ ಕ್ರೀಡಾ ಪಟುಗಳು ೬  ಪದಕಗಳನ್ನು, ಅದರಲ್ಲಿ ೪  ಕಂಚಿನಪದಕಗಳು, ಮತ್ತು ೨  ರಜತಪದಕವೂ ಸೇರಿದಂತೆ ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡಿದ್ದರು. 
 
* ಮೊಟ್ಟಮೊದಲ ಕಂಚಿನಪದಕ, ಜುಲೈ ೩೦ ರಂದು, 'ಗಗನ್ ನಾರಂಗ್' ೧೦ ಮೀ. ಏರ್ ರೈಫಲ್ ಎವೆಂಟ್ ನಲ್ಲಿಗಳಿಸಿದರು.
 
* ಎರಡನೆಯ ಪದಕ ೩ ಆಗಸ್ಟ್, (ರಜತ ಪದಕ) ವನ್ನು 'ವಿಜಯ ಕುಮಾರ್', ಪುರುಷರ ರಾಪಿಡ್ ಫೈರ್ ಪಿಸ್ಟಲ್ ಎವೆಂಟ್ ನಲ್ಲಿ ಪಡೆದರು.
 
*ಮೂರನೆಯ ಪದಕ ಆಗಸ್ಟ್ ೪ ರಂದು,  (ಕಂಚಿನ ಪದಕ)ಮಹಿಳೆಯರ ಬಾಡ್ಮಿಂಟನ್ ವಿಭಾಗದ ಸ್ಪರ್ಧೆಯಲ್ಲಿ 'ಸೈನಾ ನೆಹ್ವಾಲ್' ಗಳಿಸಿದಳು.
 
* ೪ ನೆಯ ಪದಕಗಳಿಸಿದವರು,ಆಗಸ್ಟ್, ೮ ರಂದು, (ಕಂಚಿನ ಪದಕ) ಮಣಿಪುರದ 'ಮೇರಿ ಕೋಮ್', ಮಹಿಳೆಯರ ವಿಭಾಗದ ಫ್ಲೈ ವೇಟ್  ಬಾಕ್ಸಿಂಗ್ ಸ್ಪರ್ಧೆಯಲ್ಲಿ.
 
* ೫ ನೆಯ ಪದಕಗಳಿಸಿದವರು, ಅಗಸ್ಟ್ ೧೧ ರಂದು,(ಕಂಚಿನ ಪದಕ) 'ಯೋಗೇಶ್ವರ್ ದತ್, ಪುರುಷರ ವಿಭಾಗದ ೬೦ ಕೇಜಿ. ಫ್ರೀ ಸ್ಟೈಲ್ ರೆಸ್ಲಿಂಗ್ ನಲ್ಲಿ.
 
* ಕೊನೆಯ ದಿನದಂದು,  ೬ ನೆಯ ಪದಕ ಗಳಿಸಿದವರು, ಭಾರತದ ಸುಶೀಲ್ ಕುಮಾರ್, (ರಜತ ಪದಕ) ೬೬ ಕೇಜಿ ಫ್ರೀ ಸ್ಟೈಲ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ. ಅವರಿಗೆ ಸ್ವರ್ಣ ಪದಕ ಸಿಗಬೇಕಿತ್ತು. ಆದರೆ ತಮ್ಮ ಅಂಕದಲ್ಲಿ ಮುನ್ನಡೆ ಹೊಂದುವಲ್ಲಿ ಅವರು ನಿಧಾನ ಮಾಡಿ ವಿಫಲರಾಗಿ,  ಜಪಾನಿನ ಪ್ರತಿಸ್ಪರ್ಧಿಗೆ ಮುಂದುವರೆಯಲು ಬಿಟ್ಟುಕೊಟ್ಟರು.
 
ಈ ಕ್ರೀಡೆಗಳಿಗೆ ವ್ಯಯಿಸಿದ ಹಣದ ವಿವರಗಳು :
 
* ನಮ್ಮ ಘನ ಸರ್ಕಾರ ೪೮.೧ ಮಿಲಿಯನ್ ಅಮೆರಿಕನ್ ಡಾಲರ್. 
 
* ಇತರ  ಖಾಸಗೀ ಸಂಸ್ಥೆಗಳು ೧೧ ಮಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು.
 
 
-ಚಿತ್ರ : ಬಿ.ಬಿ.ಸಿ. ಸೈಟ್ (Courtesy : B.B.C. Telivision & News Channel)
 
Rating
No votes yet