೨೬-೩-೨೦೨೦ -ಗಣೇಶ

೨೬-೩-೨೦೨೦ -ಗಣೇಶ

‘ ನಿಮ್ಮ ಮಗಳ MSM ಬಂದಿತ್ತು. ಮೊಮ್ಮಗಳು ಮ್ಯಾತ್ಸ್‌ನಲ್ಲಿ ೯೯.೭೮೨ ಮಾರ್ಕ್ಸ್ ತೆಗೆದುಕೊಂಡಿದ್ದಾಳೆ. ವಿಚಾರಿಸಬೇಕಂತೆ, ಅಪಾಯ್ಟ್ಮೆಂಟ್ ತೆಗೆದುಕೊಂಡಾಗಿದೆ. ಕೂಡಲೆ ಹೊರಡಿ.’ ಎಂದಳು ನನ್ನಾಕೆ. ‘ಬರುತ್ತಾ ನಿಮ್ಮ ಬೆನ್ನುನೋವಿನ ಬಗ್ಗೆಯೂ ವಿಚಾರಿಸಿ ..’ addಸಿದಳು.

ಕಂಪ್ಯೂಟರ್‌ಗೆ ಮೊಮ್ಮಗಳನ್ನು ಕನೆಕ್ಟ್ ಮಾಡಿ ನೋಡಿ ‘ಛೆ.. ಹೋದಸಲ ಎಲ್ಲಿ ಈ ಚಿಪ್ ಹಾಕಿಸಿದಿರಿ. ಪಿರೇಟೆಡ್ ವರ್ಶನ್ ಹಾಕಿದ್ದಾರೆ. ಚಿಂತಿಸಬೇಡಿ. ಈ ಸಲ ಒರಿಜಿನಲ್ ಹಾಕುವೆನು. ೨೦ಜಿಬಿ ಮೆಮೊರಿ ಇರುವುದು. ಪಿ.ಎಚ್.ಡಿ ವರೆಗಿನ ಎಲ್ಲಾ ಸಬ್ಜೆಕ್ಟ್ ಹಾಕಿದ್ದೇನೆ. ೨ ವರ್ಷ ಗ್ಯಾರಂಟಿ.’ ಎಂದರು ಡಾಕ್ಟ್ರು.

ಮೊಮ್ಮಗಳದಾದ ಮೇಲೆ ನನ್ನನ್ನು ಕನೆಕ್ಟ್ ಮಾಡಿ ‘ ಓ.. ಇದರ ಎಕ್ಸ್‌ಪೈರಿ ಕಳೆದ ತಿಂಗಳೇ ಆಗಿದೆ. ಅದಕ್ಕೇ ನಿಮಗೆ ಬೆನ್ನು ನೋವು ಪುನಃ ಕಾಣಿಸಿಕೊಂಡಿದೆ. ಈ ಸಲ ೬ ಇನ್ ೧ ಬಂದಿದೆ. ಟ್ಯೂಮರ್,ಟಿ.ಬಿ., ಡಯಬಿಟಿಸ್, ಕ್ಯಾನ್ಸರ್, ಬ್ಲಡ್ ಪ್ರೆಶರ್,ಬೆನ್ನುನೋವು ಬರದಂತೆ ರಕ್ಷಿಸುವುದು. ಹಾಕಲಾ’ ಎಂದರು. ಸಂತೋಷದಿಂದ ಹಾಕಿಸಿಕೊಂಡೆ.

Rating
No votes yet

Comments