೫೦ ಕೋಟಿ! ಒಂದು ವಾರ್..
ಹಗಲಿರುಳೂ ಊಟ,ನಿದ್ರೆ ಬಿಟ್ಟು ದೇಶಕ್ಕಾಗಿ ದುಡಿಯುವ ರಾಜಕಾರಣಿಗಳ ನಿಜ ವ್ಯಾಲ್ಯೂ ನಮಗೆ ತಿಳಿದಿಲ್ಲ. ರಾಜಕಾರಣಿಗಳೆಂದರೆ ನಮ್ಮ ಜನಕ್ಕೆ ಸಸಾರ.
ಚುನಾವಣೆಗೆ ಕೋಟ್ಯಾಂತರ ರೂಪಾಯಿ ರಾಜಕಾರಣಿಗಳು ಖರ್ಚು ಮಾಡಬೇಕು. ಆ ಹಣವನ್ನು ಮುಂದಿನ ೨ ವರ್ಷದಲ್ಲಿ (ಹಿಂದೆ ೫ ವರ್ಷದಲ್ಲಿ) ದುಡಿಯಬೇಕು. ಇದೂ ಪತ್ರಿಕೆ,ಟಿವಿ..ಯವರಿಗೆ ಗೊತ್ತಾಗಿ ಹಗರಣವಾಗಬಾರದು. ಎಷ್ಟೊಂದು ಕಷ್ಟ! ರಾಜಕಾರಣ ಬಿಟ್ಟು ಸನ್ಯಾಸಿಯಾಗಿ ಮಠ ಸುರು ಮಾಡುವುದೇ ಹೆಚ್ಚು ಲಾಭಕರ.
ಅದಕ್ಕೆ ರಾಜಕಾರಣಿಗಳಿಗೂ ಲಾಭ,ದೇಶಕ್ಕೂ ಲಾಭವಾಗುವಂತಹ ಒಂದು ಯೋಜನೆ-
-ಎಲ್ಲಾ ರಾಜ್ಯಗಳವರು ದೆಹಲಿಯಲ್ಲಿ ಸೇರಿ ಕ್ರಿಕೆಟ್ನಲ್ಲಿ ನಡೆದಂತೆ ರಾಜಕಾರಣಿಗಳ ಏಲಂ ನಡೆಸುವುದು. ತಮಗೆ ಬೇಕಾದಂತಹ ರಾಜಕಾರಣಿಗಳನ್ನು ಜಾಸ್ತಿ ಬಿಡ್ ಮಾಡಿ ತೆಗೆದುಕೊಳ್ಳುವುದು.
ಇದರಿಂದಾಗುವ ಲಾಭ ನೋಡಿ-
ರಾಜಕಾರಣಿಗಳಿಗೆ ಮೊದಲೇ ಹಣಸಿಗುವುದರಿಂದ ಹಣ ಮಾಡುವ ಚಿಂತೆ ಇಲ್ಲ.ರಾಜ್ಯದ ಅಭಿವೃದ್ಧಿ ಕಡೆ ಗಮನಿಸುವರು.
ಕರ್ನಾಟಕದಂತಹ ಶ್ರೀಮಂತ ರಾಜ್ಯ ಕೋಟ್ಯಾಂತರ ಬಿಡ್ ಮಾಡಿ ಕರುಣಾನಿಧಿ, ಜಯಲಲಿತಾ, ಲಲ್ಲೂ, ರಾಜ್ ಠಾಕ್ರೆ..ಯವರನ್ನು ಖರೀದಿಸಿದರೆ ಗಡಿ, ರೈಲು, ಕಾವೇರಿ ಸಮಸ್ಯೆ ಪರಿಹಾರವಾಗುವುದು.
ಇನ್ನೊಂದು ಲಾಭ ಅಂದರೆ.. .. .. .. ಊಂ..ಬೇಡಬಿಡಿ..