೫ ಡಿಸೆಂಬರ್ ೨೦೧೮ ರ ಮಗಳು ಜಾನಕಿ ಧಾರಾವಾಹಿಯ ವರದಿ :

೫ ಡಿಸೆಂಬರ್ ೨೦೧೮ ರ ಮಗಳು ಜಾನಕಿ ಧಾರಾವಾಹಿಯ ವರದಿ :

ನಿರಂಜನನ ಹಳ್ಳಿ ಮನೆ :
ಅವನ ತಾಯಿ ಮತ್ತು ಅಕ್ಕ ಸಂಜನಾ ಜೊತೆ ಲೋಕಾಭಿರಾಮವಾಗಿ  ಮಾತುಕತೆನಡೆಸುವ ಸೀನ್. 
ಅವರಿರುವ ಮನೆ ಖಾಲಿಮಾಡುವ ಸಮಯ ಹತ್ತಿರವಾಗುತ್ತಿದೆ. ಬಾಕಿ ಬರಲಿರುವ ೧೫ ಲಕ್ಷ ರೂಪಾಯಿ ಹಣವನ್ನು  ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವ ಯೋಚನೆ. ದೇವಘಟ್ಟದಲ್ಲಿ ಮನೆಬಾಡಿಗೆ ಹೆಚ್ಚಾಗಿದೆ. ಅದರಿಂದ ಜಂಗಮದುರ್ಗದಲ್ಲಿ ಬಾಡಿಗೆ ಮನೆ ಮಾಡುವ ವಿಚಾರವನ್ನು ಮನೆಯಲ್ಲಿ ಮೂವರೂ  ಅನುಮೋದಿಸುತ್ತಾರೆ.  ಸಂಜನಾ ಮಗುವಿಗೆ ಈಗ  ೪ ವರ್ಷ ವಯಸ್ಸು. ಸ್ಕೂಲಿಗೆ ಸೇರಿಸಲೇ ಬೇಕು.  ಅದಕ್ಕೆ ೧ ಲಕ್ಷ ರೂ. ಖರ್ಚು ಬರುತ್ತೆ.
 
ಜಾನಕಿಗೆ ತನ್ನ ಮನೆಗೆ ಫೋನ್ ಮಾಡುವ ಅನಿವಾರ್ಯತೆ ಇದೆ. ದೇವಘಟ್ಟರ ಆಫಿಸ್  ಬಂದು ಅವರ ಸಹಾಯ  ಕೇಳುತ್ತಾಳೆ   ದೇವಘಟ್ಟರು  ಫೋನ್ ಮಾಡಲು ಲ್ಯಾಮ್ಡ್ ಲೈನ್ ಟೆಲೆಫೋನ್ ಕೊಡುವುದಲ್ಲದೆ  ಅದು ಬೇರೆ ಯಾರದೋ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಯೋಚಿಸುವ ಅಗತ್ಯವಿಲ್ಲವೆಂದು ಧರ್ಯ ಹೇಳುತ್ತಾರೆ.  
 
ಚಂದು ಬಾರ್ಗಿ ಮನೆಯಲ್ಲಿ : 
 
ಜಾನಕೀ ಮನೆಬಿಟ್ಟುಹೋಗಿ  ಇನ್ನು ಒಂದು ದಿನವಾಗಿದೆ. ರಶ್ಮಿ ಮತ್ತು ಚಂಚಲ ಜಾನಕಿಯ ನೆನಪಿನಲ್ಲಿ ಶೋಕಿಸುತ್ತಿದ್ದಾರೆ. ಆಗ ಜಾನಕಿಯ ಫೋನ್ ಬರುತ್ತೆ. ಅವಳ ಜೊತೆ ಮಾತಾಡಿದಾಗ ಅವರಿಗೆ ನೆಮ್ಮದಿ ಆಗುತ್ತೆ. ಲ್ಯಾಮ್ಡ್ ಲೈನ್ ಆದ್ದರಿಂದ ಫೋನ್ ನಂಬರ್ ಸೇವ್ ಮಾಡಿಕೊಳ್ಳಲು ಆಗುವುದಿಲ್ಲ.
  
ನಿರಂಜನನ ಹಳ್ಳಿಮನೆ  :
 
ಮನೆಮಾಲಿಕ ರತ್ನಪ್ಪನವರು ನಿರಂಜನನ ಮನೆಗೆ  ಬಂದು ಶಂತರಾಜು ಅವರ ಮನೆಬಿಟ್ಟು ಹೊರಟುಹೋದ ವಿಷಯ ತಿಳಿಸುತ್ತಾರೆ. ಬಾರ್ಗಿಯವರು ತಮ್ಮ ಹುಡುಗರನ್ನು ಬಿಟ್ಟು ಶಂತರಾಜು ರನ್ನು ಹುಡುಕಲು ಬಹಳ ಪ್ರಯತ್ನ ನಡೆಸಿದ್ದಾರೆ. ಅವರು ತಕ್ಷಣ ಮನೆ ಬಿಟ್ಟು ಬೀಗದ ಕೈ ತಂದು ಕೊಟ್ಟರು ಎರಡು ತಿಂಗಳ ಬಾಡಿಗೆ ಕೊಟ್ಟಿಲ್ಲ. ನಿಧಾನವಾಗಿ ಕೊಡಿ ಎಂದು ಆಶ್ವಾಸನೆ ನೀಡಿ ಅವರ  ಡೈರಿ ಮನೆಯಲ್ಲೇ ಇತ್ತು ಅದನ್ನು ಕೊಟ್ಟುಹೋಗಲು ಬಂದಿದ್ದರು.
 
ಬಾರ್ಗಿ ಮನೆಯಲ್ಲಿ  :   
 
ಚಂಚಲ ಜೊತೆ ಮಾತು. ಗೆಳತಿ  ಆಫರ್  ಮಾಡಿದ ಕೆಲಸ  ಒಪ್ಪಿಕೊಳ್ಳದೆ ಯಾವುದೊ ಊರಿನಲ್ಲಿ ಸ್ಕೂಲಿಗೆ ಶಿಕ್ಷಕಿಯಾಗಿ  ಸೇರಿದ್ದಾಳೆ.  ಅದಿತಿ ಮುಂಗಡವಾಗಿ ಕೊಟ್ಟ  ೧ ಲಕ್ಷರೂಪಾಯಿ ಹಣವನ್ನು ಅವಳ  ಅಕೌಂಟಿಗೆ  ಕಳಿಸಿರುವ ಬಗ್ಗೆ  ತಿಳಿಸುತ್ತಾ ಈ ವಿಚಾರವನ್ನು ಸಮಾಧಾನಕರವಾಗಿ ತಿಳಿಸಳು ಮನವಿಮಾಡಿಕೊಳ್ಳುತ್ತಾಳೆ. ತಾಯಿ, ಮನಸ್ಸಿನಲ್ಲೇ ಜಾನಕಿಗೆ ಎಲ್ಲ ಅರ್ಥ ಆಗಿರಬೆಂಕೆಂದು ಆತಂಕ. ನಿರಂಜನನನ್ನು ಬೈಬಾರದಾಗಿತ್ತು  ಎಂದು ನೊಂದುಕೊಳ್ಳುತ್ತಾರೆ.
 
ವೀಕ್ಷಕರ ಊಹಾಪೋಹಗಳು/ಅನಿಸಿಕೆಗಳು  :
 
1. ನಾಳೆ ನಮಗೆ ಸಂಜನಾಳ ೪ ವರ್ಷದ  ಮಗಳನ್ನು ನೋಡುವ ಅವಕಾಶ ಸಿಗಬಹುದು. 
2. ನಿರಂಜನ ಸಿ.ಎಸ.ಪಿ ಭೆಟ್ಟಿಮಾಡಲು ಜಂಗಮದುರ್ಗಕ್ಕೆ ಹೋಗುತ್ತಾನೆ ಅವರಿಂದ ಹೆಚ್ಚಿಗೆ ಕೊಟ್ಟ ಮನೆಯ ಅಡ್ವಾನ್ಸ್ ಹಣ ವಾಪಾಸ್ ಪಡೆದು ಸ್ವಲ್ಪ ಕಡಿಮೆ ಬಾಡಿಗೆ ಮನೆ ಹುಡುಕುವ ಪ್ರಯತ್ನ. 
ಇಲ್ಲಿ ನಿರಂಜನನೇ ಬಾರ್ಗಿಯವರ ನಿರಂಜನ ಧಾವಳಿ ಅಳಿಯ ಎಂದು ಗೊತ್ತಾಗದಂತೆ ನಿಗಾವಹಿಸಿದರೆ ಸೀರಿಯಲ್ ಸ್ವಲ್ಪ ಮುಂದಕ್ಕೆ ಹೋಗುತ್ತದೆ. ಸ್ವಲ್ಪ ಗೊತ್ತಾದರೂ  ಕತೆಯಲ್ಲಿ ಬಹಳ ಏರುಪೇರುಗಳು ಉಂಟಾಗುತ್ತವೆ. 
3. ನಿರಂಜನನ ತಂದೆ ಶಂತರಾಜು ಎಲ್ಲಿ ಅಡಗಿಕೊಂಡಿದ್ದಾರೆ ? ಶಾಂತರಾಜು ಅವರು ಬಿಟ್ಟುಹೋದ ದಿನಚರಿ ಪುಸ್ತಕದಲ್ಲಿ ಏನಾದರೂ ಬಾರ್ಗಿ ಮತ್ತು ಶಂತರಾಜು ಮಧ್ಯೆ ನಡೆದ ಒಪ್ಪಂದಗಳ ಬಗ್ಗೆ  ಹೆಚ್ಚಿನ ಸುಳಿವುಗಳು ಸಿಗಬಹುದೇ ?
4. ಶ್ಯಾಮಲಮ್ಮನ ಯಜಮಾನರು ಬಂದರೇ  ?
5. ಚಂಚಲ ಲಂಡನ್ ಗೆ ಹೋಗುತ್ತಾಳೆಯೇ ?
6. ದೇವಘಟ್ಟರವರು ಜಾನಕಿಯ ಎಲ್ಲಾ ಗುಟ್ಟುಗಳನ್ನು ಅರಿತರು. ಬಾರ್ಗಿಯವರು ಮೋಸಗಾರರೆಂದು ಅವರು ಬೇಸರಪಟ್ಟುಕೊಂಡಿದ್ದಾರೆ. ಈಗ ದುರ್ಬಲ  ಜಾನಕಿಯನ್ನು ಬಳಸಿಕೊಂಡು ಆ ಸೇಡು ತೀರಿಸಿಕೊಳ್ಳುತ್ತಾರೆಯೇ  ? (ಅಪರಿಚಿತರಾಗಿರುವ ದೇವಘಟ್ಟರಿಗೆ ತನ್ನ ಗಂಡನ ಜೊತೆ ಡೈವೋರ್ಸ್ ಬಗ್ಗೆ ಹೇಳುವ ಅವಶ್ಯಕತೆ ಇತ್ತೇ ? ತನ್ನ ಎಲ್ಲಾ ಗುಟ್ಟುಗಳನ್ನು ಅಪರಿಚಿತವ್ಯಕ್ತಿಯ (ಎಷ್ಟೇ ಆಗಲಿ ದೇವಘಟ್ಟ ರವರು ಹೊಸವ್ಯಕ್ತಿ) ಜೊತೆ ಹಂಚಿಕೊಳ್ಳುವುದು ಅವಿವೇಕವಲ್ಲವೇ ?  ಕೆಲಸ ಇದ್ದರೆ ಕೊಡುತ್ತಾರೆ ಇಲ್ಲದಿದ್ದರೆ ಬೇಡ. ಗೆಳತಿ ಅದಿತಿ ಇದ್ದೇ  ಇದಾಳೆ. 
7. ಜಾನಕಿ  ಮತ್ತೆ ಸಿ.ಎಸ್ ಪಿ ಯವರನ್ನು ಕಾಣಲು ಬರುತ್ತಾಳೆಯೇ ?
8. ಚೇತನ್, ಪ್ರಭಂಜನ ನಿರಂಜನ ಜೊತೆ ಸೇರಿ ತಮ್ಮ ಹೊಸ ಕಂಪೆನಿಯ  ಕೆಲಸ ಆರಂಭಿಸಿರಬಹುದೇ  ?
 
 

Rating
No votes yet