’ಈ ಮಾತನ್ನು ನಿನ್ನೇನೇ ಹೇಳ್ಬಾರ್ದೇ ?’ - ಸತ್ಯಕಾಮ ( ಭಾಗ ೩)
( ಹಿಂದಿನ ಭಾಗಕ್ಕೆ ಇಲ್ಲಿ ನೋಡಿ - http://www.sampada.net/blog/shreekantmishrikoti/21/11/2007/6354 )
’ವೇಶ್ಯೆಯ ಮಗಳು ನೋಡಲಿಕ್ಕೆ ಎಷ್ಟೇ ಚೆನ್ನಾಗಿದ್ದರೂ , ಸದ್ಗುಣಿಯಾಗಿದ್ದರೂ , ಮದುವೆಯಾಗಲು ಯಾರು ಮುಂದೆ ಬರುತ್ತಾರೆ ? ನೀವೇ ಹೇಳಿ , ನೀವು ಸಿದ್ಧರಿದ್ದೀರಾ? ’ ಎಂಬ ಪ್ರಶ್ನೆ ನಮ್ಮ ನಾಯಕನಿಗೆ ಧುತ್ತೆಂದು ಎದುರಾಗಿದೆ.
ಅವನೇನು ಮಾಡುತ್ತಾನೆ?
ನಾನು ಅಥವಾ ನೀವು ಮಾಡಬಹುದಾದ್ದನ್ನೇ ಮಾಡುತ್ತಾನೆ !
ತಕ್ಷಣ ಉತ್ತರ ಹೇಳಲಾಗದೆ ಸುಮ್ಮನೆ ನಿಂತ .
’ಸರಿ , ಬಾಬೂಜಿ , ಎಲ್ಲ ನಮ್ಮ ಹಣೆಬರಹ , ಯಾರು ಏನು ಮಾಡೋಕಾಗುತ್ತೆ ? ’ ಎಂದು ಅವಳ ಸಾಕು ಅಪ್ಪ ಅವಳನ್ನು ಕರೆದುಕೊಂಡು ಹೋಗುವನು .
ನಮ್ಮ ನಾಯಕನಿಗೆ ರಾತ್ರಿಯೆಲ್ಲಾ ನಿದ್ದೆ ಬಾರದು . ಒಂದು ತೀರ್ಮಾನಕ್ಕೆ ಬಂದು ಬೆಳಗಾಗುತ್ತಿದ್ದಂತೆ ಅವರ ಮನೆಗೆ ಹೋಗುವನು . ಮುದುಕ ಏನೋ ಕೆಲಸ ಮಾಡುತ್ತಿದ್ದಾನೆ. ಇವನನ್ನು ನೋಡಿ , ’ಏನು ಬಾಬೂಜಿ ?’ ಎಂದು ವಿಚಾರಿಸಿದಾಗ ’ ನಿಮ್ಮ ಮಗಳನ್ನು ನಾನು ಮದುವೆ ಆಗಲು ಸಿದ್ಧ’ ಹೇಳಿ ಹೋಗಲಿಕ್ಕೆ ಬಂದೆ’ ಅನ್ನುವನು .
ಆಗ ಆ ಮುದುಕ
’ ಇದೇನು ಬಾಬೂಜಿ , ಈ ಮಾತನ್ನು ನಿನ್ನೇನೇ ಹೇಳ್ಬಾರ್ದೇ ?’
’ಯಾಕೆ ಏನಾಯ್ತು ?’
’ ತುಂಬಾ ತಡವಾಯಿತು .....’
.....
....
ತಿಳೀಲಿಲ್ಲವೇ ? ಅವಳನ್ನು ಆ ಲಂಪಟ ರಾಜ ರಾತ್ರಿಯೇ ಕೆಡಿಸಿಬಿಟ್ಟಿದ್ದಾನೆ .
... ಸಿನೆಮಾ ಕತೆ ಇನ್ನೂ ಮುಗಿದಿಲ್ಲ .
ಮುಂದಿನ ಭಾಗಕ್ಕೆ ಇಲ್ಲಿ ನೋಡಿ -> http://www.sampada.net/blog/shreekantmishrikoti/22/11/2007/6376