’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)

’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)

ನಿನ್ನೆ ಶಾಲೆ - ಸಾಲಿ, ಮನೆ - ಮನಿ, ಆನೆ - ಆನಿ , ರಾಟೆ - ರಾಟಿ ಇತ್ಯಾದಿ ಆಗುವ ಬಗ್ಗೆ ಹೇಳಿದೆ . ನಾಮಪದ(ಹೆಸರುಪದ)ಗಳ ವಿಷಯದಲ್ಲಿ ಹೀಗೆ ಆಗುವದೇನೋ ?
ಆದರೆ , ಹೋದರೆ , ಬಂದರೆ , ಮುಂದೆ , ಹಿಂದೆ , ನಡುವೆ , ಕೆಳಗೆ ಇವು ’ಅ’ ಸ್ವರದಿಂದ ಕೊನೆಯಾಗುವವು . ... ಆದರ , ಹೋದರ , ಬಂದರ , ಕೆಳಗ , ನಡುವ ಇತ್ಯಾದಿ ... ಇಲ್ಲಿನ ’ಅ’ ಕಾರ ’ಆ’ ಅಲ್ಲ ಎಂದು ನೆನಪಿಡಿ .... ( ನೋಡಿ "ನಾವು ’ಅ’ ಅನ್ನು ’ಅ’ ಅಂತೀವಿ! " (ಧಾರವಾಡ ಕನ್ನಡ - ೧ ( http://www.sampada.net/blog/shreekant_mishrikoti/06/10/2007/5865 ))
ಸರಿಯಾದ ಉಚ್ಚಾರಕ್ಕೆ ಬೇಕಾದರೆ ಯಾರಾದರೂ ಧಾರವಾಡಿಗರನ್ನು / ಉತ್ತರ ಕರ್ನಾಟಕದವರನ್ನು ಕೇಳಿ ನೋಡಿ .
---------------------------------------------
ನಿನ್ನೆ ಹೇಳಿದ ಶಬ್ದಗಳಿಗೆ ಇನ್ನೊಂದೆರಡು ಕುತೂಹಲಕರ ಉದಾಹರಣೆಗಳು ದೋಸೆ -> ದ್ವಾಸಿ , ವೇಳೆ -> ವ್ಯಾಳ್ಯಾ , ಬೇಸಿಗೆ -> ಬ್ಯಾಸಿಗಿ
---------------------------------------------
ಈಗ ಧಾರವಾಡದಾಗ , ಮಳೆಗಾಲದಾಗ , ವೈಶಾಖದಾಗ , ಟಾಕೀಸಿನ್ಯಾಗ ಇವು ಧಾರವಾಡದಲ್ಲಿ , ಮಳೆಗಾಲದಲ್ಲಿ ಇತ್ಯಾದಿಗಳ ಇಲ್ಲಿಯ ರೂಪಗಳು .
---------------------------------------------

ಈ ಉದಾಹರಣೆಗಳನ್ನು ಈ ತಿಂಗಳ ( ನವಂಬರ್ ೨೦೦೭ ) ಕಸ್ತೂರಯೊಳಗಿನ ಒಂದು ಕತೆಯಿಂದ ತಗೊಂಡೇನಿ ... ಬೇಕಾದರ ನೀವೂ ಓದಲಿಕ್ಕೆ ಪ್ರಯತ್ನ ಮಾಡ್ರಿ as an exercise !
---------------------------------------------
ಈಗ ನಿಮಗೊಂದು ಪ್ರಶ್ನಿ ... joint family ಗೆ ಕನ್ನಡದಾಗ ಏನಂತಾರ? ಹೇಳ್ರಿ , ನೋಡೋಣ?

Rating
No votes yet

Comments