’ಮೋಹನ ಮೃಷ್ಟಾನ್ನ’ !
'ಶ್ರೀವತ್ಸ ಜೋಶಿಯವರ ಇತ್ತೀಚಿನ ಲೇಖನ' ಕ್ಕೆ ನನ್ನ ಪ್ರತಿಕ್ರಿಯೆ :
http://sjoshi.podbean.com/2012/08/15/mohana-mrushtaanna/#comments
-ಚಿತ್ರ : (ಶ್ರೀವತ್ಸ ಜೋಶಿಯವರ ಕ್ಷಮೆ ಕೋರಿ)
ಗೆಳೆಯ ಜೋಶಿಯವರಿಗೆ,
(೨೦೧೨ ರ, ಆಗಸ್ಟ್ ೧೭ ರ,) ಕುರಿತ ನನ್ನಂತಹ ಅಲ್ಪಜ್ಞ ನೊಬ್ಬನ, ಕೆಲವು ಅನಿಸಿಕೆಗಳು :
-ಹೊರಂಲವೆಂ, ಕ್ಯಾಂಪ್ : ಟೊರಾಂಟೋ, ಕೆನಡಾ,
'ಭೂಪೆನ್ ಹಾಝಾರಿಕಾ,' ಹಾಡಿದ, 'ಓ ಗಂಗಾ ಬೆಹತಿ ಹೈ ಕ್ಯೊಂ ' ಗೀತೆ ಅತ್ಯಂತ ಪ್ರಿಯ ! ಹಾಗೆಯೇ 'ರುಡಾಲಿ ಚಿತ್ರ' ದ, ' ’ದಿಲ್ ಹೂಂ ಹೂಂ ಕರೆ’ ಗೀತೆ ಇವತ್ತಿಗೂ ನನಗೆ ಅತಿಪ್ರಿಯವಾದ ಗೀತೆಗಳಲ್ಲೊಂದು !
'ಭೂಪಾಲಿ' ಹಾಗೂ 'ಮೋಹನರಾಗ' ಗಳ ಜೊತೆಜೊತೆಯ ಮೃಷ್ಟಾನ್ನ ಸವಿದಮೇಲೆ, ನಿಮ್ಮ 'ವಿಚಿತ್ರಾನ್ನದ ಕೆಲವು ತುಣುಕು' ಗಳನ್ನೂ ಹೀಗೆಯೇ ರಾಗಮಯ-ಅನುರಾಗಮಯವಾಗಿ ಉಣ್ಣೀಸಿ ಮಾರಾಯ್ರೆ !
ಈಗ ನಿಮ್ಮ ಒಲವು ಸಂಗೀತದ ಕಡೆಗೆ ವಾಲಿದೆ. ಯಾವ ವಿಷಯವೂ ನಳನಕೈಗೆ ಸಿಕ್ಕರೆ, ಅದು 'ಜೋಶಿ-ನಳಪಾಕ'ವಾಗದೆ ಇರಲು ಸಾಧ್ಯವೇ ?!
ಅದೆಷ್ಟು ಉತ್ತಮವಾದ ರಚನೆಗಳನ್ನು ಹೆಕ್ಕಿ-ಹೆಕ್ಕಿ ಆರಿಸಿಕೊಂಡಿದ್ದೀರಿ-ಸಿನಿಮಾವಲಯ, ಕನ್ನಡ, ತೆಲುಗು, ಮರಾಠಿ, ಹಿಂದಿ, ಚಿತ್ರಗಳು. ಮಹಾನ್ ವಿದುಷಿ, ಗಾನ ಕೋಕಿಲಾ, ಡಾ.ಎಮ್.ಎಸ್.ಎಸ್ ರಂತಹ ಮಹಾನ್ ಸಂಗೀತಗಾರರು, ಮತ್ತೋರ್ವ ವಿದುಷಿ, ಗಾನಕೋಗಿಲೆ, ಲತಾದೀದಿ, ಪಿ.ಬಿ, ಬಿಪೆನ್ ಹಝಾರಿಕಾ, ನಿಜಕ್ಕೂ ಕಿವಿಯಿದ್ದವರಿಗೆ ಇದು ಅಮೃತಪಾನ, ಸಂಗೀತ ರಸಿಕರಿಗೆ ಮಧುಪಾನ !
(ನಾನೂ ಸಂಗೀತ ರಸಿಕನೇ; ನನ್ನ ಕಾಲೇಜ್ ದಿನಗಳಲ್ಲಿ , 'ಬಡಗನಾಡು ಸಂಘ ಹಾಸ್ಟೆಲ್' ನಲ್ಲಿದ್ದಾಗ, 'ರಾಮನವಮಿ ಸಂಗೀತೋತ್ಸವ' ದ ವೇಳೆ, ಅದೆಷ್ಟು ಬಾರಿ, ಸಮೀಪದ 'ಬೆಂಗಳೂರಿನ ಶೇಶಾದ್ರಿಪುರಂ ಹೈಸ್ಕೂಲಿನ ಹೊರಗಿನ ಹುಲ್ಲಿನಮೇಲೆ' ಕುಳಿತು/ಮಲಗಿ ! ಸಂಗೀತದ ಅಮೃತಪಾನಮಾಡಿದ್ದೇನೋ, ನೆನಪಿಲ್ಲ !
ಜಿ.ಎನ್.ಬಿ, ಆರ್.ಕೆ.ಶ್ರೀಕಂಠನ್, ಬಾಲಮುರುಳಿಕೃಷ್ಣ, ಶೂಲಮಂಗಳಮ್ ಸೋದರಿಯರು, ರಾಧಾ ಜಯಲಕ್ಷ್ಮಿ, ಬಾಂಬೆ ಸೋದರಿಯರು, ಅನೇಕರು, ಭೀಮ್ ಸೇನ್ ಜೋಷಿ, ಮಹಾಲಿಂಗಮ್ ಮಾಸ್ಟರ್ ಸುರೇಶ್, ಕೊಳಲು, ಚೌಡಯ್ಯನವರ ಪಿಟೀಲ್ ವಾದನ, ವಿಚಿತ್ರವೀಣೆ, ದೊರೈಸ್ವಾಮಿಯವರ ವೀಣಾ ವಾದನ, ಇತ್ಯಾದಿ) 'ಸಿಟಿ ಇನ್ಸ್ಟಿಟ್ಯೂಟ್,' 'ಆರ್. ಏನ್.ಕಾಲೋನಿ', ಮೊದಲಾದಕಡೆ....
* ರಾಧಾ ಮಾಧವ ವಿನೋದ ಹಾಸ,
* ಜೇನಿನ ಹೊಳೆಯೋ,
* ಜ್ಯೋತಿ ಕಲಶ ಝಲಕೆ,
* ಕಾಂಚೀರೆ ಕಾಂಚೀರೆ,
* ಇಂನ್ ಆಂಖ್ ಕೆ ಮಸ್ತೀ ಮೆ,
* ಗಿರಿಧರ ಗೋಪಾಲ,
* ಘನ ಶ್ಯಾಮ ಸುಂದರಾ ಶ್ರೀಧರ,
* ಸ್ವಾಗತಂ ಕೃಷ್ಣ,
* ಜಯತು ಜಯ ವಿಠಲ, ಒಂದೇ ಎರಡೇ
ಎಲ್ಲಕ್ಕಿಂತಾ ಮಿಗಿಲಾಗಿ, ಅತ್ಯಂತ ಉತ್ತಮವಾದ ಸ್ಪಷ್ಟ, ಹಾಗೂ 'ಕರ್ಣಮಧುರವಾದ ಆಡಿಯೋ', 'ಯು-ಟ್ಯೂಬ್' ಗಳ ಬಳಕೆಯಿಂದ ನಿಮ್ಮ 'ಪ್ರೆಸೆಂಟೇಶನ್ 'ತುಂಬಾ ’ಸಕತ್ತಾಗಿ’-ಬೊಂಬಾಟಾಗಿ ಬಂದಿದೆ (ಇದೇ ಸರಿಯಾದ ಪದ)
-'ಅತಿ ಉತ್ತಮ್, ಅತಿ ಉತ್ತಮ್' !!
ಬಹುಶಃ ಸಂಗೀತದಲ್ಲಿ ಒಳ್ಳೆಯ ಪ್ರಾವೀಣ್ಯತೆಯಿರುವ 'ಹಂಸನಂದಿ' ಅವರು ನಿಮ್ಮ ಈ ಲೇಖನ ಬಹಳವಾಗಿ ಮೆಚ್ಚುತ್ತಾರೆ.
ಅದೇಕೆ, 'ಸಂಗೀತ ಕಲಿಯುವ ಮಕ್ಕಳಿಗೆ ವರ್ಕ್ ಶಾಪ್,' ನಡೆಸಿದಾಗ ಖಂಡಿತ ಈ ನಿಮ್ಮ ರಸಕಾವ್ಯ-ಸಂಗೀತದ ತುಣುಕುಗಳು , 'ಅತಿಸಹಾಯಕವಾದ ಕಲಿಕಾಸಾಮಗ್ರಿಗಳಾಗುವುವು' ಯೆನ್ನುವುದರಲ್ಲಿ ಸಂದೇಹವಿಲ್ಲ !
** ಸಾಮಾನ್ಯವಾಗಿ 'ಯೂ ಟ್ಯೂಬ್,' ಬಹಳ ತೊಡಕಿನದು. ಮಧ್ಯೆ 'ಕಟ್' ಆಗುತ್ತೆ. ನಿಮ್ಮ ಕೈಗೆ ಅವು ಸಿಕ್ಕಮೇಲೇ ಮೈಕೊಡವಿಕೊಂಡು ಓಡಿರಬಹುದೇ ??!
* http://youtu.be/XjlTBTOJBPo, 'ಸೌಮ್ಯರವರ', 'ಸ್ವಾಗತಂ ಕೃಷ್ಣ'
Rating
Comments
ಉ: ’ಮೋಹನ ಮೃಷ್ಟಾನ್ನ’ !