’ವಿರೋಧ ವಿರೊಧೀ ಅಲೆ’

’ವಿರೋಧ ವಿರೊಧೀ ಅಲೆ’

ಇತ್ತೀಚಿನ ಪಾರ್ಲಿಮೆಂಟ್ ನಡಾವಳಿ ಗಮನಿಸುತ್ತಿದ್ದೀರಾ? ಒಬ್ಬರು ಒಂದೊಂದಕ್ಕೆ ಒಟ್ಟೊಟ್ಟಿಗೇ ಕೂಗಾಡುತ್ತಾರೆ; ಯಾರು, ಏನು ಒತ್ತಾಯಿಸುತ್ತಿದ್ದಾರೆ ಎಂದು ಅರ್ಥವಾಗುವ ಮುನ್ನವೇ ಕೆಲವರು, ಯುದ್ಧಕ್ಕೆ ಬಂದಂತೆ ಅಧ್ಯಕ್ಷಾಸನದೆದುರು ಧಾವಿಸಿ ಬರುತ್ತಾರೆ. ಎರಡು ಗಂಟೆಯವರೆಗೆ ಕಲಾಪ ಮುಂದೂಡಲಾಗಿದೆ ಎಂದು ಸಾರಿ ಅಧ್ಯಕ್ಷರು ಎದ್ದುಹೋಗುತ್ತಾರೆ. ಊಟ ಮುಗಿಸಿಕೊಂಡು ಕೆಲ ಸದಸ್ಯರು ಸದನಕ್ಕೆ ಬರುತ್ತಾರೆ. ಅಧ್ಯಕ್ಷರು ಬರುತ್ತಿದ್ದಂತೆಯೇ ಇವರು ದೊಡ್ಡ ಗಂಟಲೆತ್ತುತ್ತಾರೆ. ಅಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡುತ್ತಾರೆ. ಏನೋ ದೊಡ್ಡ ಮಹರ್ಬಾನಿ ತೋರಿಸಿದಂತೆ, ಪ್ರತಿಪಕ್ಷದವರು ಧನವಿನಿಯೋಗ ಮಸೂದೆಗೆ ಅಡ್ಡಿ ಮಾಡಲಿಲ್ಲ. ‘ಏನಾದರೂ ಮಾಡಿಕೊಂಡು ಹಾಳಾಗಿಹೋಗಿ’ ಎಂಬರ್ಥದಲ್ಲಿ ಹೊರಗೋಡಿಹೋದರು. ಚರ್ಚೆ, ಟೀಕೆ, ಖಂಡನೆಗಳೇ ಇಲ್ಲದೆ ವಿಧೇಯಕ ಅಂಗೀಕಾರವಾಯಿತು. ಇದರ ಅರ್ಥವೇನಾಗುತ್ತದೆ? ನಮ್ಮ ಹಣಕಾಸು ಮಂತ್ರಿ ಮಂಡಿಸಿದ ಬಜೆಟ್ ಪರಿಪೂರ್ಣವಾಗಿದೆ; ಇದರಲ್ಲಿ ಹುಳುಕು ಹುಡುಕುವುದು ಸಾಧ್ಯವಿಲ್ಲ; ನಾವು ಸಹ ಇಷ್ಟು ಒಳ್ಳೆಯ ಬಜೆಟ್ ಹೆಣಿಯುವುದು ಸಾಧ್ಯವಿರಲಿಲ್ಲ ಎಂದು ತಾನೇ?! ನಾಳೆ ಯಾವ ಮುಖ ಹೊತ್ತು ಇವರು ಚುನಾವಣೆಗೆ ಹೋಗುತ್ತಾರೆ? ಹಿಗ್ಗಾ-ಮುಗ್ಗಾ ಒದ್ದಾರು, ನಿಜ. ಆದರೆ ಬೇರೆಯವರ ದುರ್ಗುಣಗಳನ್ನು ಹಳಿಯುವುದು, ನಮ್ಮ ಸದ್ಗುಣಗಳನ್ನು ಸಾಬೀತು ಮಾಡುವುದಿಲ್ಲ. ನಮ್ಮದೂ Positive ಏನಾದರೂ ಇರಬೇಕಲ್ಲವೇ? ‘ಏನೂ ಇಲ್ಲ’ ಎಂಬ ಧೋರಣೆಯಿಂದ ವಿರೋಧ ಪಕ್ಷಗಳು, Anti-incubancyಯಂತೆ Anti-outcubancy ಅಲೆ ಸೃಷ್ಟಿಸಿಕೊಳ್ಳುತ್ತಿದೆಯೇ?  

Rating
No votes yet