’ಸಖೇದಾಶ್ಚರ್ಯ’ ಮತ್ತು ’ಸನೇಕ’

’ಸಖೇದಾಶ್ಚರ್ಯ’ ಮತ್ತು ’ಸನೇಕ’

ಸಖೇದಾಶ್ಚರ್ಯ ಅಂತ ನೀವು ಶಬ್ದ ನೋಡಿರಬಹುದು ... ಏನು ಈ ಶಬ್ದದ ಅರ್ಥ ? ಆಶ್ಚರ್ಯದಿಂದ ಅನ್ನೋ ಅರ್ಥದಲ್ಲಿ ಬಳಸ್ತಾರೆ , ನಿಜ . ಈ ಶಬ್ದವನ್ನು ಅರ್ಥ ಮಾದಿಕೊಳ್ಳಲು ಪ್ರಯತ್ನಿಸಿದರೆ ಖೇದ ( ದು:ಖ) ಮತ್ತು ಆಶ್ಚರ್ಯಗಳಿಂದೊಡಗೂಡಿ ಎಂದಾಗುತ್ತದೆಯೆ ?
ಖೇದ ಶಬ್ದ ಯಾಕೆ ಇಲ್ಲಿ ? ಅಥವಾ ಬೇರೇನಾದರೂ ಅರ್ಥ ಇದೆಯೇ ಈ ಶಬ್ದಕ್ಕೆ?

ಅಂದ ಹಾಗೆ ನೀವು ಸನಿಹ/ಸನಿಯ ಆಡುಮಾತಲ್ಲಿ ನೋಡಿದ್ದೀರಾ ?

ನನಗೆ ಒಮ್ಮೆಲೇ ಹೊಳೆಯಿತು ... ನಮ್ಮಲ್ಲಿ ಬಳಸುವ .. ಸನೇ / ಸನೇಕ ಅದೇ ಶಬ್ದ !
ಅವನ ಸನೇ(ಕ) ಹೋಗಬ್ಯಾಡ....
ಅಂದರೆ ಅವನ ಹತ್ರ ಹೋಗಬ್ಯಾಡ....

Rating
No votes yet

Comments