“ಕಲಾಪ ಬಹಿಷ್ಕಾರ” ಎನ್ನುವ ಬಾಲಿಶ!

“ಕಲಾಪ ಬಹಿಷ್ಕಾರ” ಎನ್ನುವ ಬಾಲಿಶ!

ರಾಜಕೀಯ ವರಸೆಯಾಗಿ, ವಿಧಾನ ಮಂಡಲದ ಕಲಾಪಗಳಿಗೆ ಅಡ್ಡಿ ಪಡಿಸುವ ಬೇಜವಾಬ್ದಾರೀ ಬೆದರಿಕೆ ಮಾತುಗಳು ಪ್ರತಿಪಕ್ಷದ ನಯಕರುಗಳಿಂದ ಕೇಳಿಬರುತ್ತಿದೆ. ಇದು ಎಷ್ಟು ಮಾತ್ರಾ “ಪ್ರಬುದ್ಧ” ಎನ್ನುವದನ್ನು, ಸಂಸತ್ತಿನ ಚಳಿಗಾಲದ ಅಧಿವೇಶನದ ವೈಖರಿಯ ಆಧಾರದ ಮೇಲೆ ವಿಶ್ಲೇಷಿಸಿ ನೋಡಬಹುದಲ್ಲವೇ?


          ’ವಿಧಾನಮಂಡಲ’ವೆನ್ನುವುದು ಮುಖ್ಯಮಂತ್ರಿಗಳ ಸ್ವಂತದ್ದೇ? ಸರಕಾರದ ಭಾಗವೇ? ಅದು ಪ್ರತಿಪಕ್ಷಗಳವರ ಗೌರವಾನ್ವಿತ ವೇದಿಕೆಯೂ ಅಲ್ಲವೇ? ರಾಜ್ಯದ ಪ್ರೌಢ ಪ್ರಜೆಗಳೆಲ್ಲರ ಮಹಾ ಪ್ರಾತಿನಿಧಿಕ ವ್ಯವಸ್ಥೆಯೇ ಆಗಿರುವಂಥದಲ್ಲವೇ? ಇದಕ್ಕೆ ಅವಮಾನವಾಗುವಂತೆ ನಡೆದುಕೊಳ್ಳುವುದು ಸಂವಿಧಾನದ ಅಪಚಾರ; ಸಾರ‍್ವಜನಿಕರ ಅವಹೇಳನ ಎನ್ನುವುದು, ಕನಿಷ್ಠ ವಿದ್ಯೆ, ಬುದ್ಧಿ, ಭಾವಗಳುಳ್ಳ ಅತಿ ಸಾಮಾನ್ಯರಿಗೂ ಎಟುಕುವ ತರ್ಕವೇ ಅಲ್ಲವೇ?!


          ಸಣ್ಣ-ಪುಟ್ಟ ತಪ್ಪುಗಳನ್ನೆಸಗುವ ಸರಕಾರ, ಪ್ರತಿಪಕ್ಷದ ನೈತಿಕ ತೀಕ್ಷ್ಣತೆಗಂಜಿ ಅಧಿವೇಶನ ಕರೆಯುವುದಕ್ಕೇ ಕೊಸರಾಡುತ್ತಿದ್ದ ಕಾಲವೂ ಒಂದಿತ್ತು. ಈಗ ನೋಡಿದರೆ, ಪ್ರತಿಪಕ್ಷಗಳೇ ಅಧಿವೇಶನಕ್ಕೆ ಹೋಗಲು ಹೇಡಿತನ ತೋರುತ್ತವೆ!


          ಸರಕಾರದ ಪ್ರಭೃತ್ತಿಗಳಿಗೆ ಇದರಿಂದ ಅನುಕೂಲವೇ ಆಗುತ್ತದೆ! “ಕೇಳುವವರೇ” ಇಲ್ಲದ ಮೇಲೆ “ಹೇಳುವವರಿ”ಗೇಕೆ ಅಂಜಿಕೆ?! ಆದರೆ ಎರಡೂ ಕಡೆಯ ನೈತಿಕ ಹೊಣೆಗಾರಿಕೆ, ಇಲ್ಲವೆನ್ನುವ ಮಟ್ಟಕ್ಕಿಳಿಯುವುದು ಮಾತ್ರಾ ಈ ಪ್ರಜಾಸತ್ತೆಯ ದುರ‍್ದೆಸೆಯೆನಿಸುತ್ತದೆ!   

Rating
No votes yet

Comments