“ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...”

“ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...”

“ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...”

ಆ ಸಾಲು ಅಂದಿನಿಂದ ಇಂದಿನವರೆಗೂ ಅವನನ್ನು ಬಹಳವಾಗಿ ಕಾಡುತ್ತಿದೆ. ಅದಕ್ಕಿಂತ ಬೇರೆ ರೀತಿಯಲ್ಲಿ ತನ್ನ ಪ್ರೀತಿಯನ್ನು ಒಬ್ಬ ವ್ಯಕ್ತಿ ನಿವೇದಿಸಿಕೊಳ್ಳಲು ಅಥವಾ ವ್ಯಕ್ತಪಡಿಸಲು ಸಾಧ್ಯವೇ ಎಂದು. ಅವನಿಗೆ ಇದುವರೆಗೆ ಸಾಧ್ಯವಾಗಿಲ್ಲ. ಇಂಗ್ಲಿಶ್ ಸಾಹಿತ್ಯದ ವಿದ್ಯಾರ್ಥಿಯಾದ ಅವನಿಗೆ ಕನ್ನಡ ಸಾಹಿತ್ಯದ ಪರಿಚಯ ಇಂಗ್ಲಿಶ್ ಸಾಹಿತ್ಯಕ್ಕಿಂತಲೂ ಹೆಚ್ಚಾಗಿತ್ತು. ಜಗತ್ತಿನ ಪ್ರತಿಯೊಬ್ಬ ಕವಿಯೂ ಒಂದೇ ಒಂದು ಕವನವನ್ನಾದರೂ "ಪ್ರೀತಿ"ಯ ಬಗ್ಗೆ ಬರೆದೇ ಇರುತ್ತಾನೆ. ಇನ್ನು ನಾವು ಓದುವ ಕತೆ,ಕವನ, ಕಾದಂಬರಿಗಳು, ನೋಡುವ ಚಿತ್ರಗಳು, ಧಾರಾವಾಹಿಗಳು ಇತ್ಯಾದಿಗಳಲ್ಲಿ ಪ್ರತಿಯೊಂದರಲ್ಲೂ ಒಂದಲ್ಲ ಒಂದು ಪ್ರೇಮ ಕತೆ ಅಡಗೇ ಇರುತ್ತದೆ. ಏಕೆಂದರೆ, ಅದು ಅಮೃತವಾಹಿನಿಯಂತೆ ಮಾನವನ ಎದೆಯಿಂದ ಎದೆಗೆ ಸರಿಯುತ್ತಲೇ ಇರುತ್ತದೆ. ಇತ್ತೀಚಿಗೆ ಕನ್ನಡ ಚಿತ್ರ ಸಾಹಿತ್ಯದಲ್ಲಿಯೂ ನವಿರಾದ ಅರ್ಥಪೂರ್ಣ ಪ್ರೇಮಗೀತೆಗಳ ಹೊಸ ಪರಂಪರೆಯೇ ಹುಟ್ಟಿಕೊಂಡಿದೆ. Thanks to ಜಯಂತ ಕಾಯ್ಕಿಣಿ. ಇಂಗ್ಲಿಶ್ ನ ಷೇಕ್ಸ್ ಪಿಯರ್ ನಿಂದ ಹಿಡಿದು ಕನ್ನಡದ ಜಯಂತ ಕಾಯ್ಕಿಣಿಯ ಕವಿತೆಗಳವರೆಗೂ ಓದಿಕೊಂಡಿರುವ ಅವನಿಗೆ ಈ "ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ..." ಸಾಲಿಗೆ ಸಮನಾದ ಸಾಲು ಸಿಕ್ಕಿಲ್ಲ.

ಇದು ಫ್ರೆಂಚ್ ಕವಿ ಬೋದಿಲೇರನ "ಲೆ ಫ್ಲುರ್ ದು ಮಾಲ್"(ಇಂಗ್ಲಿಶ್ - ದಿ ಫ್ಲವರ್ಸ್ ಆಫ್ ಈವಿಲ್) ಕವನ ಸಂಕಲನದ ಕನ್ನಡ ಅನುವಾದ "ಪಾಪದ ಹೂಗಳು"(ಅನು:ಪಿ.ಲಂಕೇಶ್)ವಿನ ಕವನದ ಒಂದು ಸಾಲು. ಇದನ್ನು ಅವನು ಸುಮಾರು 6 ವರ್ಷಗಳ ಹಿಂದೆ ಓದಿದ್ದಿರಬಹುದು. ಕಾವ್ಯದ ಯಾವುದೇ ಪರಿಚಯ ಇಲ್ಲದವರಿಗೆ, ಚೌಕಟ್ಟಿನಿಂದಾಚೆ(Out of the box) ಯೋಚಿಸಲು ಸಾಧ್ಯವಿಲ್ಲದವರಿಗೆ ಇದು ನಿಜಕ್ಕೂ ವಿಕ್ಷಿಪ್ತ, ಅಸಹ್ಯ, ಅಶ್ಲೀಲ ಎನಿಸಬಹುದಾದ ಕವನ ಸಂಕಲನ. ಆದರೆ, ಜಗತ್ತಿನ ಕಾವ್ಯ ಜಗತ್ತಿನಲ್ಲೇ ಒಂದು ಹೊಸ ಸಂಚಲನ ಸೃಷ್ಟಿಸಿದ್ದು ಇದರ ಹೆಗ್ಗಳಿಕೆ. ಹಲವಾರು ಕಾರಣಗಳಿಂದ ಆ ಕವನ ಸಂಕಲನ ಅವನಿಗೆ ಬಹಳ ಪ್ರಿಯ. ಅದರಲ್ಲಿನ ಮತ್ತೊಂದು ಪದ್ಯವಿಡೀ ಕೂದಲಿನ ಬಗ್ಗೆ ಇರುವುದು. ಕವಿ ಬೋದಿಲೇರ ತನ್ನ ಪ್ರಿಯತಮೆಯ ಕೂದಲನ್ನು ವರ್ಣಿಸಿರುವ ರೀತಿ ಜಗತ್ತಿನ ಕಾವ್ಯ ಪ್ರಕಾರಕ್ಕೆ ವಿಶಿಷ್ಟ. ಜಗತ್ತಿನ ನೋವನ್ನೆಲ್ಲಾ ಒಟ್ಟಿಗೇ ಅನುಭವಿಸಿದವನಂತೆ ನನ್ನ ವಯಸ್ಸಿಗಾಗಲೇ ಮುಪ್ಪಿನಾ ಕಹಿಯನ್ನು ಕಂಡವನು ಅವನು. ಅದರಿಂದಾಗಿಯೇ ಅವನ ಕಾವ್ಯ ನೋವಿನಾ ಕೊಳದಲ್ಲಿ ಅರಳಿದಾ ತಾವರೆಯಂತೆ ಕಂಗೊಳಿಸುವುದು.

"ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ" ಸಾಲಿನ ಇಂಗ್ಲಿಶ್ ಮೂಲ "Your soul is my solace". ಆದರೆ, ಕನ್ನಡದಲ್ಲಿ ಅದಕ್ಕೆ ದಕ್ಕಿರುವ ಅರ್ಥ ವ್ಯಾಪ್ತಿ ನಿಜಕ್ಕೂ ದೊಡ್ಡದು, ವಿಶಿಷ್ಟವಾದುದು. ಅದನ್ನು ಯಥಾವತ್ತಾಗಿ ಅನುವಾದಿಸಿದರೆ ಅದು "ನಿನ್ನ ಆತ್ಮವೇ ನನ್ನ ಸಮಾಧಾನ, ಪರಿಹಾರ, ಸಾಂತ್ವನ,ಉಪಶಮನ ಕಡೆಗೆ ನೆಮ್ಮದಿಯೆಂದು ಆಗುತ್ತದೆ" ಎಂದಾಗುತ್ತದೆ. ಆದರೆ, ಸ್ವತಃ ಕವಿಯಾಗಿದ್ದ ಲಂಕೇಶರ ಸೃಷ್ಟಿಶೀಲ ಮನಸ್ಸಿನಿಂದಾಗಿ ಆ ಸಾಲು ಬೇರೆಯ ಅರ್ಥವನ್ನೇ ಪಡೆದುಕೊಂಡಿದೆ.

ಪ್ರೀತಿ ಎಂದಾಗಲೆಲ್ಲ ನೆನಪಾಗುವ ಈ ಸಾಲು ಈಗ ಅವನಿಗೆ ಮತ್ತೆ ನೆನಪಾದುದು, ಕಾಡತೊಡಗಿದ್ದು ಅವನು ಒಂದು ಹುಡುಗಿಯ ಆಕರ್ಷಣೆಗೆ ಒಳಗಾದಾಗ. ಆ ಹುಡುಗಿಗೆ "ನೀನು ನನಗೆ ತುಂಬಾ ಇಷ್ಟ" ಎಂದು ಹೇಳುವುದು ಹೇಗೆ, ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಹೇಗೆ ಎಂದು ತೋರದೆ ಪರದಾಡುತ್ತಿದ್ದಾಗ. ಹುಟ್ಟು ಸಂಕೋಚ ಸ್ವಭಾವದವನಾದ ಅವನು ಇಂದು ಎಂಥವರೊಂದಿಗೂ ಭಯ ಮುಚ್ಚು ಮರೆಯಿಲ್ಲದೆ ಮಾತನಾಡುವಷ್ಟು ಧೈರ್ಯ ಗಳಿಸಿಕೊಂಡಿರುವನಾದರೂ ಇದುವರೆಗೂ ಯಾವ ಹುಡುಗಿಯ ಮುಂದೆಯೂ ನೇರವಾಗಿ ಹೋಗಿ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಧೈರ್ಯದಿಂದ ಹೇಳಲು ಹಿಂಜರಿಯುವಷ್ಟು ಸಂಕೋಚವನ್ನು ಇನ್ನೂ ಉಳಿಸಿಕೊಂಡಿದ್ದಾನೆ. ಇನ್ನು ಅವನ ನೆಚ್ಚಿನ ಪತ್ರ ಬರಹದ ಮೂಲಕ ವ್ಯಕ್ತಪಡಿಸೋಣ ಎಂದರೆ ಅದನ್ನು ಕೊಡುವವರು ಯಾರು? ತಾನೇ ಕೊಟ್ಟರೆ ಆ ಹುಡುಗಿ ಅದನ್ನು ಯಾರಿಗಾದರೂ ತಿಳಿಸಿಬಿಟ್ಟರೆ? ಅಥವಾ ತನ್ನ ತಂದೆತಾಯಿಗೋ, ಅಣ್ಣತಮ್ಮನಿಗೋ ಅಥವಾ ತನ್ನ ಸಹೋದ್ಯೋಗಿಗಳಿಗೋ ಯಾರಿಗಾದರೂ ತೋರಿಸಿಬಿಟ್ಟರೆ? ಭಯಕ್ಕಿಂತ ಹೆಚ್ಚಾಗಿ ತಾನು ಗಳಿಸಿಕೊಂಡಿದ್ದ ಹೆಸರಿಗೆ ಕಪ್ಪು ಚುಕ್ಕೆ ಇಟ್ಟಂತಾದೀತು ಎಂಬ ಹಿಂಜರಿಕೆ ಅವನಿಗೆ. ಅಲ್ಲದೆ, ಬರೀ ನಾವು ಒಬ್ಬರನ್ನು ಪ್ರೀತಿಸಿದರೆ ಸಾಲದು, ಆ ಪ್ರೀತಿಯನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿದರೆ ಮಾತ್ರ ಆ ಪ್ರೀತಿಗೆ ಘನತೆ. ಇಲ್ಲಿಯವರೆಗೂ ನನ್ನನ್ನು ಕಂಡಾಗಲೆಲ್ಲ ಕಡೇ ಪಕ್ಷ "ನಗು"ವನ್ನಾದರೂ ನೀಡುತ್ತಿದ್ದಾಳೆ. ನಾನು ಹಾಗೆ ಹೇಳಿ ಅವಳಿಗಿಷ್ಟ ಆಗದೆ ಇನ್ನು ಮುಂದೆ ಆ ಒಂದು ನಗುವನ್ನೂ ನೀಡದಿದ್ದರೆ...! ಇಲ್ಲದ ಅವಾಂತರವನ್ನೇಕೆ ಸೃಷ್ಟಿಸಿಕೊಳ್ಳಬೇಕು ಎಂದು ಹೇಳಿ ಆ ಆಲೋಚನೆಯನ್ನೇ ಕೈಬಿಟ್ಟ.

ಆ ಹುಡುಗಿ ಸುಂದರಿ. ಅವನ ಎತ್ತರ ಗಾತ್ರಕ್ಕೆ ಸರಿದೂಗುವಳೇ. ಹೊರ ನೋಟಕ್ಕೆ ಅವನ ಕನಸಿನ ರಾಣಿಯೇ. ಈಗಿನ ಕಾಲದವರಂತೆ ಮಾಡ್ ಎನ್ನುವಂತಿದ್ದರೂ ಯಾವುದೇ ಕೃತಕ ಬಣ್ಣಗಳಿಂದ ಹೊರತಾದ ನಿಚ್ಚಳವಾದ ಮುಖ. ಇನ್ನು ಆ ಕಣ್ಣುಗಳು! ಕಪ್ಪು ಕಪ್ಪು ಕಣ್ಣುಗಳು. ಹೊಸ ಪ್ರಪಂಚಕ್ಕೆ ಆಹ್ವಾನ ನೀಡುವಂತಿದ್ದವು. ಎಂಥದೋ ಸೆಳೆತ. ಆಕರ್ಷಣೆ. Magnetism for Men ಅನ್ನೋ ಹಾಗೆ.

ಅವನು ಕೂಡ ತೀರಾ ಸಾಧಾರಣನೇನೂ ಆಗಿರಲಿಲ್ಲ. ಸಾಮಾಜಿಕ ಸ್ಥಾನಮಾನದಲ್ಲಿ, ವಿದ್ಯೆಯಲ್ಲಿ, ಜೀವನಾನುಭವ, ವೃತ್ತಿ ಅನುಭವ ಇತ್ಯಾದಿಗಳಲ್ಲಿ ಅವನು ಅವಳನ್ನು ಮೀರಿಸಿದವನೇ. ಆದರೆ, ವೈಯುಕ್ತಿಕವಾಗಿ ಅವನಿಗೆ ಯಾವ ಜಾತಿ, ಮತ, ಧರ್ಮ, ಭಾಷೆ ಇತ್ಯಾದಿಗಳಲ್ಲಿ ನಂಬಿಕೆಯಿರಲಿಲ್ಲ. ನಿಜವಾದ ಪ್ರೀತಿ ಅವೆಲ್ಲವನ್ನೂ ಮೀರಬೇಕು ಎನ್ನುವ ಕಾರಣದಿಂದಾಗಿಯೇ ಅವನಿಗೆ ಎಲ್ಲ ಹುಡುಗರಂತೆ ವರ್ತಿಸುವುದು ಕಷ್ಟವಾಗುತ್ತಿತ್ತು. ಕೆಲ ಹುಡುಗಿಯರು ಇಷ್ಟವಾಗಿದ್ದರೂ ಅವನು ಎಂದೂ ಯಾವ ಹುಡುಗಿಯ ಹಿಂದೆಯೂ ಬಿದ್ದವನಲ್ಲ. ಆದರೆ, ಈ ಹುಡುಗಿಯ ಒಂದೇ ಒಂದು ನಗು ಅವನನ್ನು disturb ಮಾಡಿಬಿಟ್ಟಿತ್ತು. ಆ ನಗುವಿನ ಮುಂದೆ ತಾನು ಏನೂ ಅಲ್ಲ. ಈ ಪ್ರಪಂಚದಲ್ಲಿ ಆ ನಗುವಿಗೆ ಬೇರೆ ಯಾವುದೂ ಸಮವಲ್ಲ ಎನಿಸಿತ್ತು ಅವನಿಗೆ. ಅವಳನ್ನು ಕಂಡಾಗಲೆಲ್ಲ "ಬೊಂಬಾಟ್" ಚಿತ್ರದಲ್ಲಿ ಗಣೇಶ ಹೇಳುವ ಹಾಗೆ, "ಮಾತಿನಲ್ಲಿ ಹೇಳಲಾರೆನು, ರೇಖೆಯಲ್ಲಿ ಗೀಚಲಾರೆನು, ಆದರೂನು ಹಾಡದೇನೇ ಉಳಿಯಲಾರೆನು. ಅಂಥ ರೂಪಸಿ ನನ್ನ ಪ್ರೇಯಸಿ. ಒಮ್ಮೆ ಅವಳಿಗೆ ನನ್ನ ತೋರಿಸಿ..." ಎಂದು ಹಾಡಬೇಕೆನಿಸುತ್ತಿತ್ತು. ಆದರೆ, ಏನು ಮಾಡುವುದು ಇದು ರಿಯಲ್ ಲೈಫ್! ಇಲ್ಲಿ ಕನಸು ಕಾಣುವುದಕ್ಕೆ ಅವಕಾಶವೇ ಹೊರತು, ಅದನ್ನು ಹಾಡಲು ಅಲ್ಲ.

ಅವನಿಗೆ ಅವಳ ಪರಿಚಯವಾದದ್ದೇ ಆಕಸ್ಮಿಕ. ಅದು ಕೂಡ "ನನಗೂ ನಿನಗೂ ಕಣ್ಣಲ್ಲೇ ಪರಿಚಯ..."ಎನ್ನುವುದು ಬಿಟ್ಟರೆ, ಮತ್ತೇನೂ ಅಲ್ಲ ಎನ್ನುವಂತದ್ದು. ಮೊದಲ ನೋಟದಿಂದಲೇ "ನಿನ್ನಿಂದಲೇ ಕನಸೊಂದು ಶುರುವಾಗಿದೆ..." ಎಂದು ಅವನ ಹೃದಯ ಹಾಡಲು ಶುರುಮಾಡಿತು. ಹೀಗಿರುವಾಗ ಯುಗದಂತಿದ್ದ ಕ್ಷಣ ದಿನಗಳು ಎಷ್ಟೇ ಕಳೆದರೂ ಆ ಪರಿಚಯ ಬೇರಾವ ರೂಪವನ್ನು ಪಡೆಯುವ ಲಕ್ಷಣ ಕಾಣುತ್ತಿರಲಿಲ್ಲ. ಅವಳ ಬಗ್ಗೆ ತಿಳಿಯುವ ಕುತೂಹಲ, ಮಾತನಾಡಿಸುವ ಹಂಬಲ ದಿನ ದಿನ ಹೆಚ್ಚಾಗುತ್ತಿತ್ತು. ಅವಳು ಹೇಗೆ, ಏನು ಎತ್ತ ಎಂದು ತಿಳಿಯುವುದು ಅವನಿಗೆ ಕಷ್ಟವೇನಾಗಲಿಲ್ಲ. "ಈ ಕ್ಷಣದಲ್ಲಿ ಇಡಿಯಾಗಿ ಬದುಕಬೇಕು" ಎನ್ನುವ ಜಾಯಮಾನದವನಾದ ಅವನಿಗೆ ಅವಳ ಇತಿಹಾಸದ ಬಗ್ಗೆ ಅಷ್ಟಾಗಿ ಆಸಕ್ತಿಯಿರಲಿಲ್ಲ. ಅವನಿಗೆ ಸಮಸ್ಯೆಯಿದ್ದದ್ದು ಇಂತಹ ಚೆಲುವೆಗೆ ಇಲ್ಲಿಯವರೆಗೆ ಯಾರೂ ಪ್ರಪೋಸ್ ಮಾಡಿರಲಾರರೆ? ಅಂತಹವರಲ್ಲಿ ಒಬ್ಬರನ್ನಾದರೂ ಆಕೆ ಒಪ್ಪಿಕೊಂಡಿರಲಾರಳೇ? ಅವಳ ಮನಸ್ಸಿನಲ್ಲಿ ಯಾರೂ ಇಲ್ಲದಿದ್ದಲ್ಲಿ ಅದು ತನ್ನ ಅದೃಷ್ಟ. ಆದರೆ, ಅದನ್ನು ತಿಳಿಯುವುದು ಹೇಗೆ? ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದಾದರೂ ಹೇಗೆ ಎಂದು ತಿಳಿಯದೆ ತನಗಿದ್ದ ಒಬ್ಬಳೇ ಆತ್ಮೀಯ ಗೆಳತಿಯ ಬಳಿ ಎಲ್ಲವನ್ನೂ ಹೇಳಿಕೊಂಡ. ಅವಳು ಆ ಹುಡುಗಿಯನ್ನು ನೋಡಿರಲಿಲ್ಲವಾದರೂ, ಅವನು ನೀಡಿದ ವಿವರದಿಂದಲೇ ಹೇಗೋ ಏನೋ ಅವಳು ಇಂತವಳು ತಾನೇ ಎಂದು ನೇರವಾಗಿ ಹೇಳಿಬಿಟ್ಟಳು. ಅದು ಅವನಿಗೆ ಶಾಕ್ ನೀಡಿತ್ತು. ಅಲ್ಲದೆ, ಮತ್ತೊಂದು ಶಾಕ್ ಅವಳು ಆಕೆಯ ತಂದೆ ಬಗ್ಗೆ ಹೇಳಿದಾಗ. ಅವನಿಗೆ ಆಕೆಯ ತಂದೆಯ ಪರಿಚಯ ಸುಮಾರು 5 ವರ್ಷಗಳಿಂದಲೇ ಇತ್ತು. ಆದರೆ ಎಂದೂ ಆತನನ್ನು ಮಾತನಾಡಿಸಿರಲಿಲ್ಲ. ಕಾರಣ, ಆಕೆಯ ತಂದೆಯ ವ್ಯಕ್ತಿತ್ವದ ಬಗ್ಗೆ ಅವನಿಗೆ ಗೌರವವಿರಲಿಲ್ಲ. ಅವನಿಗೆ ಸ್ವತಃ ತನ್ನ ತಂದೆ ಬದುಕಿದ ರೀತಿಯ ಬಗ್ಗೆಯೇ ತಿರಸ್ಕಾರವಿತ್ತು. It was really disappointing and disgusting for him.

ಆದರೆ, ಅವನಿಗೆ ಬೇಕಾಗಿದ್ದು ಆ ಹುಡುಗಿ, ಅವಳ ಪ್ರೀತಿಯಷ್ಟೆ. ಆದರೆ, ಹುಡುಗಿ ಒಪ್ಪುವವರೆಗೆ ಮುಖ್ಯವಾಗಿಲ್ಲದವೂ ಕೂಡ ಮುಖ್ಯವಾಗಿಬಿಡುತ್ತವೆ. ಇಲ್ಲದ ಆಲೋಚನೆಗಳು ಆವರಿಸಿಕೊಂಡುಬಿಡುತ್ತವೆ. ಪ್ರತಿದಿನವೂ ಒಂದೆರಡು ಸಲವಷ್ಟೆ ಆ ಹುಡುಗಿಯನ್ನು ನೋಡುತ್ತಿದ್ದ ಅವನಿಗೆ ಆ "ದರ್ಶನ" ಅಷ್ಟೇ ಸದ್ಯಕ್ಕೆ ಸಿಗುತ್ತಿದ್ದ ಆನಂದ. ಆ ಕ್ಷಣ ಅವನಿಗೆ ಮುಂಜಾವಿನ ಅರುಣೋದಯ, ಹಕ್ಕಿಗಳ ಚಿಲಿಪಿಲಿ, ಮಂಜಿನ ಹನಿಯಷ್ಟೆ ಆನಂದವನ್ನು, ಹಿತವನ್ನು ತಂದುಕೊಡುತ್ತಿತ್ತು. ಆ ಕ್ಷಣವನ್ನು ತಪ್ಪಿಸಿಕೊಳ್ಳಲು ಅವನು ಯಾವ ಕಾರಣಕ್ಕೂ ಸಿದ್ಧನಿರಲಿಲ್ಲ. ಆ ಕ್ಷಣಕ್ಕಾಗಿ ಸದಾ ಕಾಯುತ್ತಿದ್ದ ಅವನಿಗೆ ಒಂದೊಂದು ಕ್ಷಣವು ಯುಗದಂತೆ ಭಾಸವಾಗುತ್ತಿತ್ತು.

ಅವನು ತನ್ನ ಗೆಳತಿಗೆ ಈ ವಿಷಯದಲ್ಲಿ ಸಹಾಯ ಮಾಡುವಂತೆ ಕೋರಿಕೊಂಡನಾದರೂ, ಆರಂಭದಲ್ಲಿ ಆಸಕ್ತಿ ತೋರಿಸಿದ್ದ ಅವಳು ಯಾಕೋ ಈ ವಿಷಯದಲ್ಲಿ discourage ಮಾಡುವುದಕ್ಕೆ ಶುರು ಮಾಡಿದಳು. ಆ ಊರಿನವರು, ಮಲ್ಲೂಗಳು, ಬೆಂಗಾಲಿಗಳು ಇವರ ಕಂಡರೆ ಸ್ವಲ್ಪ ಹುಶಾರಾಗಿರು. ತುಂಬಾ ವ್ಯಾವಹಾರಿಕ ಜನ. ನಿನ್ನ ಜಾಯಮಾನಕ್ಕೆ exact opposite... ಹೀಗೆ ಏನೇನೋ ಹೇಳಿದ್ದರಿಂದಾಗಿ ಅವನಿಗೆ ಇದ್ದ ಒಂದೇ ಒಂದು ಆಸರೆಯೂ ಕೈ ತಪ್ಪಿ ಹೋಗುವಂತಾಯಿತಲ್ಲ ಎಂಬ ಆತಂಕ ಆರಂಭವಾಯಿತು. ಆ ರೀತಿ Prejudice ಇಟ್ಟುಕೊಳ್ಳುವುದು ಎಷ್ಟು ಸರಿ ಎಂಬುದು ಅವನ ವಾದವಾದರೂ, ತನ್ನ ಗೆಳತಿ ಹೇಳುತ್ತಿದ್ದ ಮಾತು ಸಂಪೂರ್ಣ ಸುಳ್ಳೇನಾಗಿರಲಿಲ್ಲ ಎಂದು ಅವನಿಗೂ ಅನಿಸುತ್ತಿತ್ತು. ಆ ಹುಡುಗಿಯನ್ನು ಕಂಡಾಗಿನಿಂದ ತನ್ನ ಕಣ್ಣು ಮನಸ್ಸುಗಳ ತುಂಬಾ ಅವಳನ್ನೇ ತುಂಬಿಕೊಂಡಿದ್ದ ಅವನಿಗೆ ಯಾವುದರಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅಸಾಧ್ಯವಾಯಿತು. ಅವಳಿಗೆ ತನ್ನ ಪ್ರೀತಿಯನ್ನು ತಿಳಿಸುವುದು mushkil hi nahi, na mumkin hain ಎನ್ನುವಂತಾದಾಗ ಇಡೀ ಜಗತ್ತೇ ಕತ್ತಲಲ್ಲಿ ಮುಳುಗಿದಂತೆ ಭಾಸವಾಯಿತು. ಹೀಗಿರುವಾಗ ಅವನು ಏನು ತಾನೇ ಮಾಡಬಲ್ಲ? Mehfil mein bhi tanha hain dil aise ಎನ್ನುವಂತಾಯಿತು ಅವನ ಪರಿಸ್ಥಿತಿ.

ಪ್ರೀತಿಯನ್ನು ತೀವ್ರವಾಗಿ ಅನುಭವಿಸತೊಡಗಿದಾಗ ಅದು ನೀಡುವ ಕಾವು, ನೋವು ಪ್ರೀತಿಯಲ್ಲಿ ತೊಡಗಿದವರಿಗಷ್ಟೇ ಗೊತ್ತು. ಹೊರಗೆ ಭೂಮಿಯೇ ಹತ್ತಿ ಉರಿಯುವಂತೆ ಬೆಂಕಿಯನ್ನು ಕಾರುತ್ತಿರುವ ಸೂರ್ಯ, ಒಳಗೆ ತನ್ನನ್ನೇ ಸುಡತೊಡಗಿರುವ ಈ ಪ್ರೀತಿ. ನಡುವೆ ಇವೆರಡನ್ನೂ ಅನುಭವಿಸುತ್ತಿರುವ ಅವನು. ಇದರಿಂದ ಹೊರಬರಲು ಅವನು ಬೇರೆ ಹುಡುಗರಂತೆ ಕುಡಿತ, ಸಿಗರೇಟ್ ನಂತಹದ್ದಕ್ಕೆ ಕೈ ಹಾಕುವವನೂ ಅಲ್ಲ. ಅಂತಹದನ್ನು ತಾತ್ವಿಕವಾಗಿ ವಿರೋಧಿಸುವವನು ಅವನು ತನ್ನ ಪ್ರೀತಿಯಲ್ಲಿ ಷೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನ ಹಾಗೆ Philisophical ಆದಂತಹ ದ್ವಂದ್ವವನ್ನು ಎದುರಿಸಲಾರಂಭಿಸಿದ. ಹ್ಯಾಮ್ಲೆಟ್ ನ ಮುಂದಿದ್ದ To be, or not to be; that is the question ಎನ್ನುವ Philosophical ಪ್ರಶ್ನೆ ಅವನ ಮುಂದೆ ರಾಜಾ ವಿಕ್ರಮನಿಗೆ ಬೇತಾಳ ಕೇಳುವ ಪ್ರಶ್ನೆಯಂತೆ ನಿಂತಿತ್ತು. ಆ ಪ್ರಶ್ನೆಗೆ ಉತ್ತರ ಹೇಳದೆ(ಕಂಡುಕೊಳ್ಳದ ಹೊರತು) ಅವನಿಗೆ ಉಳಿಗಾಲವಿರಲಿಲ್ಲ. ತನ್ನ ಹೃದಯದಲ್ಲಿ ಹುಟ್ಟಿದ್ದ ಆ "ಪ್ರೀತಿ ಬೆಳಕು" ಹಾಗೆಯೇ ಚಿರಂತನವಾಗಿ ಉಳಿಯುವಂತೆ ಮಾಡಲು ಅವನು ತನ್ನ ಪ್ರೀತಿಯನ್ನು ಕಾಲನ ಪರೀಕ್ಷೆಗೆ ಒಡ್ಡಬೇಕಿತ್ತು. ಅಗ್ನಿಗಾಹುತಿ ನೀಡಿ ತನ್ನ "ಪ್ರೀತಿ ಎಷ್ಟು ಪವಿತ್ರ" ಎಂದು ಪರೀಕ್ಷಿಸಬೇಕಿತ್ತು. ಹೌದು, ಪ್ರೀತಿ ಎನ್ನುವುದು ಪವಿತ್ರ. ಎಲ್ಲ ಇಷ್ಟ, ಬಯಕೆ, ಆಕರ್ಷಣೆ, ಮೋಹ ಎಲ್ಲವನ್ನೂ ಮೀರಿದ್ದಾಗಿತ್ತು ಅವನಿಗೆ.

ಈ ಪ್ರೀತಿಯ ಬಲೆಗೆ ಸಿಲುಕಿದ್ದ ಅವನಿಗೆ ಹೊರಬರಲು ಇದ್ದದ್ದು ಒಂದೇ ದಾರಿ. ಅವನ ನೆಚ್ಚಿನ ಹವ್ಯಾಸವಾದ ಓದು. ಆಗ ಅವನಿಗೆ ಸಿಕ್ಕಿದ್ದು ತನ್ನ ನೆಚ್ಚಿನ Oshoನ The Book of Woman. ಈ ಪುಸ್ತಕವನ್ನು ಅವನು ಒಂದು ವರ್ಷದ ಹಿಂದೆ ಚೆನ್ನೈನಲ್ಲಿದ್ದಾಗ ಕೊಂಡು ಕೊಂಡಿದ್ದ. ಅಂದಿನಿಂದಲೂ ಓದುವುದಕ್ಕೆ ಆರಂಭಿಸಿ ಸಂಪೂರ್ಣವಾಗಿ ಮುಗಿಸಲಾಗದ ಪುಸ್ತಕವನ್ನು ಮತ್ತೆ ಓದಲಾರಂಭಿಸಿದ. ಮೊದಲಿಂದ ಕೊನೆಯವರೆಗೂ ಹೆಣ್ಣಿನ ಬಗ್ಗೆ, ಪ್ರೀತಿಯ ಬಗ್ಗೆ ಹೊಸ ಪ್ರಪಂಚವನ್ನೇ ಅವನ ಮುಂದೆ ತೆರೆದಿರಿಸಿತ್ತು ಆ ಪುಸ್ತಕ. ಅದರ ಹಿಂಬದಿಯಲ್ಲಿ A guide to undestanding the essential woman ಎಂದು ಬರೆದಿತ್ತು. ಜತೆಗೆ, A woman, according to Osho, 'is a mystery; trying to understand her is futile' ಎಂದು ಬರೆದಿತ್ತು. ಒಳ ತೆರೆದು ನೋಡಿದಾಗ ಮೊದಲನೇ ಅಧ್ಯಾಯದಲ್ಲಿ I have told you that a woman is to be loved, not understood. That is the first understanding ಎಂದು ಓಶೋ ಮುಂದೆ ತಾನು ಹೇಳಲಿರುವುದರ ಕುರಿತು ನೀಡಿದ ಸೂಚನೆಯ ಅರಿವಾಯಿತು. ಹೌದು, ನೀವು ಹೇಳುವುದು ನಿಜ. ಹೆಣ್ಣನ್ನು(ಪ್ರೀತಿಯನ್ನು) ಅರ್ಥ ಮಾಡಿಕೊಳ್ಳಲು ಹೊರಟಷ್ಟು ರಹಸ್ಯಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅದಕ್ಕೆ ಅವಳನ್ನು ಸುಮ್ಮನೇ ಪ್ರೀತಿಸಬೇಕು ಎಂದು ಅವನು ತನಗೆ ತಾನೇ ಹೇಳಿಕೊಂಡ.

ಅಲ್ಲಿಂದ ಓದುವುದಕ್ಕೆ ಶುರು ಮಾಡಿದ ಅವನಿಗೆ, ತನಗೆ ಈ ಸಂದರ್ಭಕ್ಕೆ ಜರೂರಿ ಇರುವಂತಹ ನಾಲ್ಕೈದು ಅಧ್ಯಾಯಗಳನ್ನು ಓದಿ ಮುಗಿಸಿದ. Underline ಮಾಡುವಂತಹದ್ದನ್ನು ಮಾಡಿದ. ಹಾಗೆ ಹೇಳುವುದಾದಲ್ಲಿ, ಇಡೀ ಪುಸ್ತಕವನ್ನೇ underline ಮಾಡಬೇಕಾದಂತಹ ಪುಸ್ತಕವಾಗಿತ್ತು ಅದು. ಆ ಪುಸ್ತಕ ಓದಿದಾಗಿನಿಂದ ಶುರುವಾಯಿತು ಅವನ Self-Discovery...

ಹಾಗಾದರೆ, ಆ ಪುಸ್ತಕ ಅವನಲ್ಲಿ ಮೂಡಿಸಿದ ಬೆಳಕಾದರೂ ಯಾವುದು?

ಮುಂದುವರಿಯುತ್ತದೆ...

Rating
No votes yet