“ಬರವಣಿಗೆ ಚೆಂದ ಇರಲಿ”

5

ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು  ಈಗ ಅಷ್ಟೇನೂ relevant ಅಲ್ಲದಿದ್ದರೂ  ಕಸಿವಿಸಿ ಉಂಟು ಮಾಡುತ್ತದೆ.
ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು ಶಾಲೆಯಲ್ಲಿ “ಬರವಣಿಗೆ ಚೆಂದವಾಗಿರಲಿ” ಎಂದು ಜೋರು ಮಾಡಿ ಹೇಳುತ್ತಿದ್ದುದು ಥಟಕ್ಕನೆ ನೆನಪಾಗಿ ಒಮ್ಮೆ ಕಸಿವಿಸಿಯಾಯಿತು. ಏಕೆಂದರೆ ಆ ದಿನ ಅದ್ಯಾವುದೋ ವಿಚಿತ್ರ ಫಾಂಟ್ ಬಳಸಿ ಟೈಪ್ ಮಾಡಿಟ್ಟುಕೊಳ್ಳುತ್ತಿದ್ದೆ. ಅಕ್ಷರ ದುಂಡಗೆ ಮೂಡುವುದಿರಲಿ, ಟೈಪ್ ಮಾಡಿಟ್ಟುಕೊಂಡದ್ದನ್ನು ಓದಲು ನನಗೇ ಕಷ್ಟವಾಗುತ್ತಿತ್ತು. ಆದರೆ ಈ ಬಾರಿ ಬರವಣಿಗೆ ಚೆಂದಪಡಿಸಲು ಮತ್ತೊಮ್ಮೆ ಬರೆದಿಡುವುದು ಬೇಕಾಗಲಿಲ್ಲ - ಟೈಪ್ ಮಾಡಿಟ್ಟುಕೊಂಡದ್ದರ ಫಾಂಟ್ ಬದಲಾಯಿಸಿದೆ!

ಈಗ್ಗೆ ಕೆಲವು ವರ್ಷಗಳ ಹಿಂದೆ ಕೆಲಸದ ದೆಸೆಯಿಂದ ಮ್ಯಾಕ್ ಕಂಪ್ಯೂಟರು ಬಳಸಲೇಬೇಕಾಗಿ ಬಂದಾಗ ಅದರಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಸ್ವಲ್ಪ ಸರ್ಕಸ್ ಮಾಡುವಂತಾಗಿತ್ತು. ಇತ್ತೀಚೆಗೆ ಲಿಪಿಕಾ ಎಂಬ ತಂತ್ರಾಂಶದಿಂದಾಗಿ ಮ್ಯಾಕ್ ಕಂಪ್ಯೂಟರಿನಲ್ಲಿ ಟೈಪ್ ಮಾಡುವುದು ಅಷ್ಟೇನೂ ಕಷ್ಟವಿಲ್ಲ. ಅಲ್ಲದೆ ಮ್ಯಾಕ್ ಬಳಸಿ ಟೈಪ್ ಮಾಡುವಾಗ “ಆಹಾ, ಅಕ್ಷರಗಳು ಎಷ್ಟು ಚೆಂದ ಮೂಡಿಬರುತ್ತಿವೆ!” ಎಂದೆನಿಸದೇ ಇರದು. ಏಕೆಂದರೆ ಮ್ಯಾಕ್ ಕಂಪ್ಯೂಟರಿನಲ್ಲಿ ಅಕ್ಷರಗಳನ್ನು ರೆಂಡರ್ ಮಾಡುವ ರೀತಿ ಅದ್ಭುತವಾಗಿದೆ. ಇತ್ತೀಚೆಗಷ್ಟೆ ಅಮೇರಿಕದಿಂದ ಹಿಂದಿರುಗಿದ ಗೆಳೆಯರೊಬ್ಬರು ಸದಾಕಾಲ ಮ್ಯಾಕ್ ಬಳಸುವ ಆಪಲ್ ಅಭಿಮಾನಿ. ಅವರು ಕಳೆದ ಸಲ ನಮ್ಮ ಆಫೀಸಿಗೆ ಭೇಟಿ ಕೊಟ್ಟಾಗ ಮ್ಯಾಕ್ ಕಂಪ್ಯೂಟರಿನಲ್ಲಿ ಮೂಡಿಬರುವ ಕನ್ನಡ ಅಕ್ಷರಗಳನ್ನು ನೋಡಿ “ಇದೆಲ್ಲ ಸ್ಟೀವ್ ಜಾಬ್ಸ್ ಕೃಪೆ ಸಾರ್” ಎಂ‍ದೇ ಉದ್ಗರಿಸಿದ್ದರು! ಸ್ಟೀವ್ ಜಾಬ್ಸ್ ವಿಶ್ವವಿದ್ಯಾಲಯದಲ್ಲಿ ಸುಮ್ಮನೆ ಆಸಕ್ತಿಯಿಂದ ॑ಟೈಪೋಗ್ರಫಿ॑ ತರಗತಿಗಳಿಗೆ ಹಾಜರಾಗುತ್ತಿದ್ದರಂತೆ. ಇದರ ಫಲ ಮ್ಯಾಕ್ ಬಳಕೆದಾರರಿಗೆ ಸಿಗುತ್ತಿದೆಯೆಂದೇ ಅವರ ಅಭಿಪ್ರಾಯ.
ಹೀಗಿದ್ದರೂ ಆಪಲ್ ಒದಗಿಸುವ ಕನ್ನಡ ಫಾಂಟಿನಲ್ಲಿ ಕೆಲವೊಂದು ಚಿಕ್ಕಪುಟ್ಟ ತೊಂದರೆಗಳಿವೆ.

ಈ ಪುಟ್ಟ ಬರಹ ಕೂಡ ಮ್ಯಾಕ್ ಕಂಪ್ಯೂಟರೊಂದರಲ್ಲಿ ॑ಸಿಂಪಲ್ ನೋಟ್॑ ಎಂಬ ತಂತ್ರಾಂಶ ಬಳಸಿ ಟೈಪ್ ಮಾಡಿದ್ದು.

ಚಿತ್ರ ಕೃಪೆ: ಕಾಮತ್ ಡಾಟ್ ಕಾಮ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಡಿಗರೆ ನಮಸ್ಕಾರ. ಸ್ಟೀವ್ ಜಾಬ್ಸ್ ಮರಣಾ ನಂತರ ಬಿಡುಗಡೆಯಾದ ಆತ್ಮ ಕಥನದ ಪುಸ್ತಕದಲ್ಲಿ ಈ ಕುರಿತು ಉಲ್ಲೇಖವಿದೆ (ಸ್ಟೀವ್ ಜಾಬ್ಸರೆ ಬೇರೆಯವರಿಂದ ಕೇಳಿ ಬರೆಸಿಕೊಂಡಿದ್ದು). ಅವರು ಈ ಟೈಪೋಗ್ರಫಿಯಿಂದ ಪ್ರಭಾವಿತರಾಗಿ ಕಲಿತ ಬಗೆ, ಮುಂದೆ ಅದನ್ನು ಆಪಲ್ನಲ್ಲಿ ಬಳಸಿದ ಬಗ್ಗೆ ಎಲ್ಲ ವಿವರಗಳಿವೆ. ಭಾರತೀಯ ಮುದ್ರಿತ ಆವೃತ್ತಿಯೂ ಲಭ್ಯವಿದೆ - ನಾನೊಮ್ಮೆ ಸ್ವಪ್ನದಲ್ಲಿ ನೋಡಿದಾಗ ಅಲ್ಲೆ ಕೊಂಡುಕೊಂಡೆ (Steve Jobs by Walter Issacson ). ಅಲ್ಲದೆ ಭಾರತಕ್ಕೆ ಭೇಟಿಕೊಟ್ಟು ಪಡೆದುಕೊಂಡ ಸ್ಪೂರ್ತಿಗಳ ತುಣುಕು ವರ್ಣಿಸಲ್ಪಟ್ಟಿದೆ.
ಅಂದ ಹಾಗೆ ನಾನು ಬರೆಯುವ ಬಹುತೇಕ ಬರಹ ಐ ಫೋನ್ , ಐ ಪ್ಯಾಡಿನ ಮುಖೇನ . ಬರಹದ ರೀತಿಯ ಕೆಲವು ಎಡಿಟರುಗಳ ಆಪ್ಸ್ ಸಿಕ್ಕುತ್ತದೆ - ನಾನು ಕನ್ನಡ ಫಾರ್ ಐಪೋನ್, ಐ ಪ್ಯಾಡ್ ಅನ್ನುವ ತಂತ್ರಾಂಶ ಬಳಸುತ್ತೇನೆ (ಉಚಿತ ಲಭ್ಯವಿದೆ). ಇಲ್ಲಿ ಫಾಂಟುಗಳ ಬದಲಾಯಿಸುವ ಸೌಲಭ್ಯವಿಲ್ಲವಾದರೂ ಸಾಧಾರಣ ಬಳಕೆಗೆ ಚೆನ್ನಾಗಿ ಉಪಯೋಗಕ್ಕೆ ಬರುತ್ತದೆ. ಆದರೆ ಉದ್ದದ ಬರಹಗಳಾದಾಗ ತುಸು ತೊಡಕು ಕಾಣಿಸಿಕೊಳ್ಳುತ್ತದೆ (ಆಪ್ಲೈನ್ ಆವೃತ್ತಿಯಲ್ಲಿ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗೇಶ್, ಐಪಾಡ್ ಯಾವುದು ಬಳಸುತ್ತಿದ್ದೀರಿ?
ಸಂಪದದ ಅಪ್ಲಿಕೇಶನ್ ಹೊಸ ಆವೃತ್ತಿ ಟೆಸ್ಟ್ ಮಾಡಲು ಸಹಾಯ ಬೇಕಿದೆ. ನಿಮಗೆ ಸಾಧ್ಯವಾದರೆ ಟೆಸ್ಟ್ ಮಾಡಲು ಸಹಾಯ ಮಾಡುತ್ತೀರಾ?
ಅಪ್ಲಿಕೇಶನ್ ಟೆಸ್ಟ್ ಮಾಡುವುದರಲ್ಲಿ ಪಾಲ್ಗೊಳ್ಳಲು hpn AT saaranga Dot com - ಈ ವಿಳಾಸಕ್ಕೆ ನನಗೊಂದು ಇ-ಮೇಯ್ಲ್ ಕಳುಹಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದ್ಯಕ್ಕೆ ನಾನು ಬಳಸುತ್ತಿರುವ ಐಪ್ಯಾಡು ಹಳೆಯ ಮೊದಲ ಆವೃತ್ತಿಯದು. ಹೀಗಾಗಿ ತಂತ್ರಾಂಶ iOS 5.1.1 ಮಾತ್ರ ಸಾಧ್ಯವಾಗುತ್ತದೆ. ಐ ಫೋನ್ 4 ಮತ್ತು ಈ ಐ ಪ್ಯಾಡಿನಲ್ಲಿ ಸಾಧ್ಯವಾಗುವ ಯಾವುದೆ ಟೆಸ್ಟಿನಲ್ಲಿ ಖಂಡಿತಾ ಪಾಲ್ಗೊಳ್ಳುತ್ತೇನೆ. ನೀವು ಹೇಳಿದ ವಿಳಾಸಕ್ಕೆ ಇ ಮೆಯಿಲ್ ಕಳಿಸುತ್ತೇನೆ. 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.