3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
ಹುಟ್ಟಿದ ಮರು ನಿಮಿಷವೇ, ಅಪ್ಪ 'ತನ್ನ ಮಗ ಇಂಜಿನಿಯರ್ ಆಗ್ತಾನೆ' ಎಂಬ ನಿರೀಕ್ಷೆಯಿಂದ ಮಗುವಿನ ಇಷ್ಟ ಏನೇ ಇದ್ದರೂ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂಬ ಹುಚ್ಚು ರೇಸಿಗೆ ಹಚ್ಚುವ ತಂದೆ ತಾಯಂದಿರು ನಮ್ಮ ನಡುವೆ ಬೇಕಾದಷ್ಟಿದ್ದಾರೆ ಬಿಡಿ! ಇದೇ ಓಟದಿಂದ ಕೇವಲ ಪುಸ್ತಕದ ಬದನೆಕಾಯಿಯನ್ನು ಜ್ಞಾನಕ್ಕಾಗಿ ಅಲ್ಲದೆ ಕೇವಲ ಅಂಕಗಳಿಗೋಸ್ಕರ ಮಾತ್ರ ಓದಿ ಬಾಯಿ ಪಾಠ ಹೊಡೆಯುವ ಶಿಕ್ಷಣ ಪದ್ಧತಿಯನ್ನು ನಾವಿಂದು ಬಳಸುತ್ತಿದ್ದೇವೆ.
ನನಗಿನ್ನೂ ನೆನಪಿದೆ, P U ದಲ್ಲಿರುವಾಗ, ಸೈನ್ಸ್ ವಿದ್ಯಾರ್ಥಿಯಾಗಿದ್ದ ನಮಗೆ, ಗೇಮ್ಸ್ ಪೀರಿಯಡ್ ಇರಲಿಲ್ಲ. ಏನೋ, ನಮ್ಮ ಶಾಪ ತಗಲಿ, ಯಾರೋ ಲೆಕ್ಚರರ್ ರಜೆ ಹಾಕಿದರೆ, ಬೇರೆ ಯಾರು ಅ ಅವಕಾಶವನ್ನು ಉಪಯೋಗಿಸಿ ನಮಗೆ ಕ್ಲಾಸ್ ತೆಗೆದು'ಕೊಲ್ಲ'ದ್ದಿದ್ದರಷ್ಟೇ ಸಾವಕಾಶದ ತಾತ್ಕಾಲಿಕ ಉಸಿರು! ಅದಕ್ಕೆ ಮತ್ತೆ ಪೆನಾಲ್ಟಿ, ಸಾಯಂಕಾಲದ extra ಕ್ಲಾಸ್! ವಾರಾಂತ್ಯದಲ್ಲಿ ಕೋಚಿಂಗ್ ಕ್ಲಾಸ್! ಹೀಗೆ ಎರಡು ವರ್ಷ ಯಾವುದೋ ಮಂತ್ರಕ್ಕೊಳಗಾದವರಂತೆ ಉರು ಹೊಡೆದು, ಎಕ್ಸಾಮ್ ಕೊಟ್ಟು, 90 ಕ್ಕಿಂತ ಹೆಚ್ಚು ಪರ್ಸಂಟ್ ಬರುವ ನಿರೀಕ್ಷೆಯಿಟ್ಟುಕೊಂಡು ಕಾದಿದ್ದೆವು. ಎಕ್ಸಾಮ್ ಮುಗಿದರೆ ನೆಮ್ಮದಿ ಉಂಟೆ? ಸಿ ಇ ಟಿ, ಕಾಮೇಡ್ ಕೆ, AIEEE ಎಂಬ ಭೂತ ಬೇರೆ! ಅದು ಅದ ಮೇಲೆ ಸೀಟಿನ ತಲೆಬಿಸಿ! ಒಟ್ಟಾರೆ, ಎಲ್ಲ ಮುಗಿದು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೇರುವ ಹೊತ್ತಿಗೆ ಮಹಾನ್ ಸಾಧನೆ ಮಾಡಿದ ಭಾವನೆ! ಆದರೂ ಒಂದೆರಡು ವರ್ಷದ ನಂತರ ಸಿಕ್ಕಿದ ಒಬ್ಬ ಗೆಳೆಯನ ಹತ್ತಿರ surface tension ಮತ್ತು viscosity ನಾನು ತುಂಬಾ ಇಷ್ಟ ಪಟ್ಟ phenomenon ಎಂದಾಗ ಅದು ಅಂದರೆ ಏನು ಎಂದು ಕೇಳಿದಾಗ ನನಗೆ ಆಶ್ಚರ್ಯವಾಗಿತ್ತು! 'ಭ'ಯಾಲಜಿಯ ಯಾವುದಾದರೂ ವಿಷಯದ ಕುರಿತು ನನಗೆ ಕೇಳಿದರೆ ನಾನೂ ನಿರುತ್ತರನಾಗುತ್ತೇನೆ ಎಂದು ನನಗು ಗೊತ್ತು. ಆದರೆ physics ನನ್ನ ಪ್ರೀತಿಯ ವಿಷಯವಾದ್ದರಿಂದ ಸಿಟ್ಟು ಬಂತು.
ಇದೆಲ್ಲ flashback , ಮೊನ್ನೆ ಥಿಯೇಟರಿನಲ್ಲಿ 3 ಈಡಿಯಟ್ಸ್ ನೋಡಿದ್ದರಿಂದ! ಹುಟ್ಟಿದ ಪ್ರತಿಯೊಬ್ಬನಲ್ಲಿ ತನ್ನದೇ ಅದ ಪ್ರತಿಭೆಯಿರುತ್ತದೆ. ಪ್ರತಿಯೊಬ್ಬನು ಇಂಜಿನಿಯರಿಂಗ್ ಮಾಡಲು ಹುಟ್ಟುವುದಲ್ಲ ಎಂಬುವ ತತ್ವ ಸಾರುವ ಈ ಚಿತ್ರ ಮೋಹಕ ಚಿತ್ರಕಥೆ ಮತ್ತು ಹಾಸ್ಯದಿಂದ ಮರೆಯಲಾರದ ಅನುಭವ ನೀಡುತ್ತದೆ. ಒಟ್ಟಾರೆ ಶಿಕ್ಷಣ ಇಂಜಿನಿಯರ್ ಗಳನ್ನು manufacture ಮಾಡುವ ಮಷಿನ್ ಆಗಿ ಹೋಗಿದೆ ಎಂದು ಸ್ವತಃ ಇಂಜಿನಿಯರ್ ಆಗಿರುವ ನನ್ನ ಮನಸ್ಸಿನಲ್ಲಿ ಮೂಡುವ ಭಾವನೆ! ಆದರೆ ಇದೆಲ್ಲ ನಾವು ಯೋಚನೆ ಮಾಡದೇ ಎಲ್ಲರು ಮಾಡುತ್ತಾರೆ ಎಂದು ನಾವೂ, ನಮ್ಮ ಇಷ್ಟ ಏನೇ ಇರಲಿ, ಎಲ್ಲರೊಂದಿಗೆ ಜೈ ಹೇಳುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯ ತಲೆಯಲ್ಲಿ ಹೊಡೆಯುವ ಮುದ್ರೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎಂಬುದು ಇಂದಿನ ಟ್ರೆಂಡ್ ಆಗಿ ಹೋಗಿದೆ!
ಸಮಸ್ಯೆಯ ಅಳ ಇಷ್ಟೇ ಅಲ್ಲ, ಕೆಲಸ ಸಿಕ್ಕಿದ ಮೇಲೆ, ಹೊರ ರಾಷ್ಟ್ರಗಳಿಗೆ ಹೋಗಬೇಕು ಎನ್ನುವ ನಿರೀಕ್ಷೆ! US ನಲ್ಲಿರುವ ಹೆಚ್ಚಿನ ಸಂಸ್ಥೆಗಳಲ್ಲಿ ಭಾರತೀಯರಿರುವುದು ಇದಕ್ಕೆ ನಿದರ್ಶನ. ಅದರ ಮೇಲೆ ಜಾಗತೀಕರಣದಿಂದ ಉಂಟಾದ ಹೊರಗುತ್ತಿಗೆ ಪದ್ಧತಿ! ಒಟ್ಟಾರೆ ಗುಲಾಮ ಸಂಸ್ಕೃತಿಯ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು. ಆದರೂ ಇವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಒದಗಿಸಿವೆ ಮತ್ತು ಸ್ವಾವಲಂಬತೆಯನ್ನು ಯುವ ಜನತೆಗೆ ಕಲಿಸಿವೆ ಎಂಬುದು ಇದನ್ನೇ ಆಶಾವಾದದ ದೃಷ್ಟಿಯಿಂದ ನೋಡಿದಾಗ ನೀಡುವ ಸಾಂತ್ವನ! ದೇಶದ revenue ಕೂಡ ಹೆಚ್ಚಾಗಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ!
ಆದರೆ ಮನಸ್ಸಿನ ನೋವು, ಮತ್ತೆ ಶಿಕ್ಷಣ job oriented ಆಗಿರುವುದರ ಕುರಿತು. ಹಣದ ಹಿಂದೆ ಒಡುವುದನ್ನು ಕಲಿಯುವುದನ್ನು ಬಿಟ್ಟು, ಸಮರ್ಥ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವತ್ತ ಶಿಕ್ಷಣ ಪಡೆಯುವ ಗುರಿಯಾಗಿರಬೇಕು. 'ಸಫಲತೆಯ ಹಿಂದೆ ಓಡಬೇಡ, ಮೊದಲು ನಿನ್ನನ್ನು ನೀನು ನಿರೂಪಿಸು; ಸಫಲತೆ ನಿನ್ನ ಹಿಂದೆ ತಾನಾಗಿ ಬರುತ್ತದೆ' ಎಂಬುದು ನಿಜಕ್ಕೂ ಅರ್ಥಪೂರ್ಣ!!!
Comments
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by Divya Bhat Balekana
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by makrumanju
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by roopablrao
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by Shreekar
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by baluhegde
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by ಫಕೀರ
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by venkatesh
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ
In reply to ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ by n.nagaraja she…
ಉ: 3 ಈಡಿಯಟ್ಸ್ - ಒಂದು ವಾಸ್ತವ ವ್ಯಥೆ