300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು

300 ಮೈಲಿ ಪ್ರತಿ ಗ್ಯಾಲನ್ ಅಥವಾ 120 ಮೈಲಿ ಪ್ರತಿ ರೀಚಾರ್ಜ್ ಗೆ ಪಯಣಿಸಲಿರುವ ಕಾರು

ಕ್ಯಾಲಿಫೋರ್ನಿಯಾದ ಕಾರ್ಲ್ಸ್ ಬಾಡ್ ನಗರದಲಿರುವ ಆಪ್ಟೆರಾ ಸಂಸ್ಥೆಯ ಹೊಸ ಮಾರದಿಯ ಈ ಕಾರು ಪ್ರತಿ ಗ್ಯಾಲನ್ ಗೆ 300ಮೈಲಿ ಓಡಿ ಅಚ್ಚರಿ ಮೂಡಿಸಿದೆ.

 

ಮೂರು ಗಾಲಿಗಳನ್ನು ಹೊಂದಿರುವ ಈ ವಾಹನ ಸುಮಾರು 30 ಸಾವಿರ ಡಾಲರ್ ಬೆಲೆಯುಳ್ಳದ್ದಾಗಿದೆ. 2009 ರಲ್ಲಿ ಬಿಡುಗಡೆಯಾಗಲಿರುವ ಟೈಪ್ ೧-ಹೆಚ್ ಎಂದು ತಾತ್ಕಾಲಿಕ ನಾಮಕರಣವಾಗಿರುವ ಈ ಮಾದರಿಯು ಇಬ್ಬರು ಪ್ರಯಾಣಿಸಲು ಅನುಕೂಲಕರವಾಗಿದೆ.

ನಾಲ್ಕು ಗಾಲಿಯ ಐವರು ಪ್ರಯಾಣಿಸಬಹುದಾದ ಕಾರಿಗೆ ಪ್ರಾಜೆಕ್ಟ್ ಎಕ್ಸ್ ಎಂದು ಹೆಸರಿಟ್ಟಿದ್ದು ಸಂಸ್ಥೆ ಇನ್ನೂ ಸಂಶೋಧನೆಗಳನ್ನು ನಡೆಸುತ್ತಿದೆ. ಇಂಧನ ಕ್ಷಮತೆಯನ್ನೇ ಮುಖ್ಯ ಗುರಿಯನ್ನಾಗಿಸಿ ಈ ಕಾರನ್ನು ನಿರ್ಮಿಸಲಾಗಿದೆ. ಇದರ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಕೊಂಡಿ ಉಪಯೋಗಿಸಿ ವೀಡಿಯೋ ಚಿತ್ರ ವೀಕ್ಷಿಸಬಹುದಾಗಿದೆ.

http://www.popularmechanics.com/automotive/new_cars/4237853.html

Rating
No votes yet