'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದೆ. ಕನ್ನಡಕ್ಕೆ literally ಅನುವಾದಿಸುವುದಾದರೆ 'ಸ್ವೇಚ್ಛಾಹಾರಿಯಾಗಿರು' ಎನ್ನಬಹುದು. ಆದರೆ ಈ ಪದವನ್ನು ನಾವು derogatory ಆಗಿ ಬಳಸುತ್ತೇವೆ. ಭಾವಾಂತರಕ್ಕೆ ಪ್ರಯತ್ನಿಸಿದರೆ, ನಿನ್ನತನ ಬೆಳೆಸಿಕೊ ಅಥವ ಸ್ವಂತಿಕೆ ಕಾಪಾಡಿಕೋ ಅಥವ ಸ್ವಂತಿಕೆ ಉಳಿಸಿಕೊ ಎನ್ನಬಹುದು. ಆದರೆ ಈ phraseಗಳ ಅರ್ಥಗಳೂ ಕೂಡ be yourself ಗೆ ಸರಿಯಾಗಿರುವಂತಹ ಅರ್ಥವನ್ನು ಕೊಡುವುದಿಲ್ಲ. be yourself ಗೆ ಹಾಗಾದರೆ ಅರ್ಥ ಏನು? ೧. ನೀನು ಏನಾಗಬೇಕೆಂದು ಕೊಂಡಿರುವೆಯೋ ಅದನ್ನು ಸಾಧಿಸು ಅಂತಲೇ ಇದರರ್ಥ?
ಹಾಗಾದರೆ, ನನಗೆ ಒಂದು metal band ನ ನಾಯಕ ಆಗಬೇಕು ಅನ್ನಿಸತ್ತೆ. ಎಲ್ಲವನ್ನೂ ತೊರೆವ ಸನ್ಯಾಸಿಯಾಗಬೇಕು, ಗಾಂಧಿ, ಅಂಬೇಡ್ಕರ್, ಬಸವಣ್ಣ, ರಾಮಮನೋಹರ ಲೋಹಿಯ, ವಾಜಪೇಯಿ, ಅಣ್ಣ ಹಝಾರೆ, ಗೂಗಲ್ ಕಂಪನಿಯ ಮಾಲೀಕ ಹೀಗೆ ಬಹಳಷ್ಟು ಜನರಂತಾಗಬೇಕು ಎಂದೂ ಅನಿಸುತ್ತತೆ. ಅಷ್ಟೇ ಅಲ್ಲ, ಈ ಅನಿಸಿಕೆಗಳು ಬಹಳ ಪ್ರಬಲವಾದವೂ ಬಹಳ ವರ್ಷಗಳಿಂದ ಮನದಲ್ಲಿರುವಂತಹವೂ ಆಗಿವೆ. ಕೆಲವೊಮ್ಮೆ ಈ ನಿಟ್ಟಿನಲ್ಲಿ ನನ್ನ ವೃತ್ತಿಯನ್ನು ಬದಲಾಯಿಸಿಕೊಂಡದ್ದೂ ಉಂಟು, ಇರುವುದನ್ನು ಬಿಟ್ಟು ಮತ್ತಂದೆಡೆಗೆ ಹೋದದ್ದೂ ಉಂಟು. ಇವುಗಳಲ್ಲಿ ಇಂದಿನ ನಮ್ಮ ಸಾಮಾಜಿಕ ಸ್ಥಿತಿಗೆ, ನನ್ನ ವ್ಯಕ್ತಿಗತ ಸಾಮರ್ಥ್ಯ, ಇತಿಮಿತಿಗಳಿಗೆ ಹೊಂದಿಕೆಯೇ ಆಗದಿರುವಂತಹ ಹತ್ತು ಹಲವು ಆಸೆಗಳಿವೆ, ಆಕಾಂಕ್ಷೆಗಳಿವೆ. ಹೀಗೆ ಸ್ವೇಚ್ಛಾಹಾರಿಯಾಗಿ ಮನಸ್ಸಿಗೆ ಬಂದಂತಿರು ಇಂಬುದು be yourself ಎಂಬುದರ ಅರ್ಥವೇ ಹಾಗಾದರೆ ಅಥವ..

೨. ವರ್ತಮಾನದಲ್ಲಿ ನಿನ್ನ ಅವಸ್ಥೆಯೇ ನಿನ್ನ ನಿಜವಾದ ಪರಿಸ್ಥಿತಿ. ಈಗ ಹೇಗಿರುವೆಯೋ ಹಾಗೆಯೇ ಇರು ಎಂತಲೋ ಅಂತರೆ ನೀನು ಏನೇ ಮಾಡಾಲು ಬಯಸಿದರೂ ಅದು ತೋರುಬಯಕೆಯಷ್ಟೆ, ನಿನ್ನ ಕೈಲಾಗುವುದಿದ್ದರೆ ಹೀಗ್ಯಾಕೆ ಕೆಲಸವಿಲ್ಲದೇ ಕಾರ್ಯವಿಲ್ಲದೇ ಗುತ್ತುಗುರಿಯಿಲ್ಲದೇ ಕೊಳಕನಾಗಿ ಕೂತಿದ್ದೀಯೇ.. ನೀನೆಂದಿದ್ದರೂ ಇಷ್ಟೆ. ಗಾಳಿಗೋಪುರ ಕಟ್ಟಿ ಮತಿಭ್ರಂಶನಾಗುವುದಕ್ಕಿಂತ ಇವೆಲ್ಲವನ್ನೂ ಬಿಟ್ಟು..ನಿನ್ನ ಪಾಡಿಗೆ ಇರುವುದನ್ನು ನಡೆಸಿಕೊಂಡು ಹೋಗು ಅಂತಲೋ?

೩. ಅಥವ ಇವೆರಡರ ಮಧ್ಯದಲ್ಲಿ... ನಿನ್ನ ಕೈಯಲ್ಲಿ ಸಾಧಿಸುವುದಾಗಿರಬೇಕು, ಕಷ್ಟಸಾಧ್ಯವಾಗಿರಬೇಕು, practical ಆಗಿರಬೇಕು, ಇದ್ದುದರಲ್ಲಿ ಸೃಜನಶೀಲತೆಯಿರಬೇಕು, ನಿನ್ನ ಇಷ್ಟಗಳಿಗನುಗುಣವಾಗಿರಬೇಕು ಇತ್ಯಾದಿಗಳೋ?

ಈ ಚರ್ಚೆಯಲ್ಲಿ ಹುಡುಕಿದರೆ ಬಹಳ ನಾಜೂಕಾದ, subtle ಆದ implicit ಆದ ವಿಷಯವೊಂದಿದೆ. ಅದು, ನಮ್ಮ ಸ್ವತಂತ್ರ ಯೋಚನಾ ಲಹರಿಗಳನ್ನು ನಮ್ಮ ಸಮಾಜದ ಚೌಕಟ್ಟಿನಲ್ಲಿ, ಹಾಗೂ ನಮ್ಮ ಸ್ವಂತ ಪರಿಮಿತಿಯಲ್ಲಿ ನಮಗೆ ಸಮಾಧಾನ ತರುವ ಹಾಗೆ ಕಾರ್ಯಗತಗೊಳಿಸುವುದು ಹೇಗೆ ಎಂಬುದು. offcourse, ಈ ವಿಷಯದ ಮೇಲೆಯೇ be yourself ಎಬ phraseನ ಅರ್ಥ ಅಡಗಿರುವುದು?

ಈಗ ಇದರ ಕನ್ನಡ ತಾತ್ಪರ್ಯ ನೋಡಿ. 'ಸ್ವಂತಿಕೆ ಉಳಿಸಿಕೋ'; ಇದರಲ್ಲಿಯ ಎರಡೂ‌ ಪದಗಳು ಬಹಳ ಮುಖ್ಯ. ಸ್ವಂತಿಗೆ ಯೆಂದರೆ ಸ್ಥೂಲವಗಿ identity ಅಥವ personality ಅಂತ ಭಾಷಾಂತರಗೊಳಿಸಬಹುದು. ಅವರಿವರ  ಆದರ್ಶ, ಆಸೆಗಳಿಗೆ ಮಾರುಹೋಗಬೇಡಿ. ನಿಮ್ಮ ಪಥವನ್ನು ನೀವೇ ರೂಪಿಸಿಕೊಳ್ಳಿ (ಮತ್ತು ಯೋಚನೆಯ ಬಳಿಕ, ನಿಮ್ಮ identity ಪರರ identityಯೊಂದಿಗೆ ಸ್ವಾಮ್ಯವಾಗಿದ್ದರೆ, ಅದನ್ನೇ ಆರಿಸಿಕೊಳ್ಳಿ) ಅನ್ನುವುದನ್ನು ಇದೊಂದೇ ಪದ be yourself ನಷ್ಟೆ ಚೆನ್ನಾಗಿ ವ್ಯಕ್ತಪಡಿಸುತ್ತದೆ.

'ಉಳಿಸಿಕೋ':  ನಾವು ಸಾಮಾನ್ಯವಾಗಿ ಈ ಸ್ವಂತಿಕೆ ಉಳಿಸಿಕೋ ಇನ್ನುವದನ್ನು ಜೀವನದಲ್ಲಿ ಹೊಸ ಘಟ್ಟಕ್ಕೆ ತಲುಪಿದವನಿಗೋ ಅಥವ ಇನ್ನು ಬೆಳೆಯುತ್ತಿರುವವನಿಗೋ ಹೇಳುತ್ತೇವೆ. ದೊಡ್ಡವರು ಹೇಳುವ ಮಾತು, ಅಂದರೆ, ಜೀವನದಲ್ಲಿ ಅವರಿವರು ಮಾಡುವುದನ್ನು ನೋಡಿ ಮಾರುಹೋಗಬೇಡ, ನಿನ್ನತನ ಅಥವ ಮೇಲಿನ ಸ್ವಂತಿಕೆ ಈ ಅಮಿಷಗಳಿಂದ ಮತ್ತು  ಸೋಮಾರಿತನದಿಂದ ಅಥವ ಇನ್ಯಾವುದೇ ಸಾಮಾಜಿಕ ಶಕ್ತಿಯಿಂದ ಹೊರಟೇಹೋಗತ್ತೆ, ಕಾಪಾಡಿಕೊ, ಬಿಟ್ಟುಕೊಡಬೇಡ! ಹಾಗಾಗಿ be yourself ಗಿಂತಾ ಆ phraseನ ತಿರುಳನ್ನು ನಮ್ಮ ಕನ್ನಡದ ಈ ಪದಗುಛ್ಹ ಅದಕ್ಕಿಂತಾ ಚೆನಾಗಿ ಬಿಂಬಿಸಬಹುದು ಅಲ್ಲವೇ

  ಕನ್ನಡದಲ್ಲಿ ಹಾಗಾದರೆ be yourself ಬದಲು ಯಾಕೆ ಇಂತಹ, ಅದಕ್ಕಿಂತಾ ಗಹನವಾದ ಪದಬಳಕೆ ಬಂತು, ಜಾಣರಾದ ಪಾಶ್ಚಿಮಾತ್ಯರಿಗೆ ಏಕೆ ಬರಲಿಲ್ಲ ಅಂತ ನೀವು ಕೇಳಬಹುದು. ಆಗ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಅಂತರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಪಾಶ್ಚಿಮಾತ್ಯರಲ್ಲಿ individualityಗೆ ಹೆಚ್ಚು ಬೆಲೆ. ಅಂದರೆ, individualityಗೆ ಸಾಮಾಜಿಕ ಜವಾಬ್ದಾರಿಗಳು ನಮ್ಮಲಿರುವುದಕ್ಕಿಂತಲೂ ಕಡಿಮೆ. ಅವರು ಅದನ್ನೇ ನೆಚ್ಚಿಕೊಂಡು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದಲೇ, be yourself ಅಂತ ಹೇಳಿ ಸುಮ್ಮನಾಗ್ತಾರ್ಯೇ ವಿನಃ ಮುಂದೆ ಅದರಿಂದ ಬರಬಹುದಾದ potential ತೊಂದರೆಗಳ ಬಗ್ಗೆ ತಲೆ ಹಾಕುವುದಿಲ್ಲ. ಅದು ಅವರವರ ವೈಯುಕ್ತಿಕ ಸಮಸ್ಯೆ.
ಆದರೆ ನಮ್ಮಲ್ಲಿ, ಈ individualityಯನ್ನು ಕೊಕ್ಕೆ ಕಣ್ಣಿನಿಂದ ನೋಡುತ್ತೇವೆ. ಅನುಭವವಿದ್ದವರು ಅದಕ್ಕೇ ಹೇಳುವುದು, "ಕಷ್ಟ ಕಣಪ್ಪಾ, ನೋಡಿಕೊಂಡು ಸ್ವಂತಿಕೆ ಊಳಿಸಿಕೋ, ಇಲ್ಲ ಮೂರರಲ್ಲಿ ಮತ್ತೊಂದು ಆಗಿಹೋಗ್ತೀಯಾ" ಅಂತ.
 ಒಟ್ಟಿನಲ್ಲಿ, ಅವರಿಗೆ individualityಯ ದುಷ್ಪರಿಣಾಮಗಳು ಕಾಣಿಸುವುದಿಲ್ಲ, ನಮಗೆ ಅದರ ಒಳ್ಳೆಯ ಗುಣಗಳನ್ನು ಕಾಣುವುದಕ್ಕೆ ಬರುವುದಿಲ್ಲ. ಅವರವರ ಅನುಭವ ಮಾತ್ರ ಅವರವರ ಭಾಷೆಗಳಲ್ಲಿ, ಮಾತುಗಳಲ್ಲಿ ಹೆಪ್ಪುಗಟ್ಟಿದೆ.
Rating
No votes yet

Comments