Bengaluru Decoded

Bengaluru Decoded

ಬೆಂಗಳೂರಿನಲ್ಲಿ ಹಲವಾರು Areaಗಳಿವೆ.. ಅವುಗಳಿಗೆ ಯಾಕೆ ಆ ಹೆಸರು ಬಂತು, ಆ Area ವಿಶೇಷತೆ ಏನು? ಗೊತ್ತಾ ನಿಮಗೆ? ನನಗೂ ಗೊತ್ತಿಲ್ಲಾ.. ಕಳೆದವಾರ ಒಂದು mail ಬಂತು ಅದರಲ್ಲಿ ಅಲ್ಪ ಮಾಗಿತಿ ಇತ್ತು.. ಹಾಗೆಯೇ ಅದನ್ನು ಭಾಷಾಂತರ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ... ಯಾವುದಾದರೂ ಮಾಹಿತಿ ತಪ್ಪಿದ್ದರೆ ತಿಳಿಸಿ.

ಮಾರತಹಳ್ಳಿ:
ಇಲ್ಲಿ ಒಮ್ಮೆ "ಮರುತ್" ಎಂಬ ವಿಮಾನ ಅಪಘಾತಕ್ಕೆ ಒಳಗಾಗಿತ್ತಂತೆ.. ಅದಕ್ಕೇ ಮರುತ್+ಹಳ್ಳಿ = ಮಾರತಹಳ್ಳಿ

BTM Layout
BTM Layout (ಬೊಮ್ಮನಹಳ್ಳಿ, ತಾವರೇಕೆರೆ ಹಾಗು ಮಡಿವಾಳ Layout)

ಮಲ್ಲೇಶ್ವರಂ
ಮಲ್ಲೇಶ್ವರಂ, ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿ ಇರುವ ಪ್ರದೇಶ (North-West), ಇಲ್ಲಿ ಮಲ್ಲೇಶ್ವರ ಎಂಬ ದೇವಾಲಯವಿದೆ (?) ಆ ಕಾರಣದಿಂದ ಈ ಹೆಸರು ಬಂದಿದೆ....

HSR Layout
ಹೊಸುರು ಸರ್ಜಾಪುರ ರೋಡ್ Layout
ಈಜಾಗದಲ್ಲಿ ಮೊದಲು ಅಗರಕೆರೆ ಇತ್ತು [ಇವತ್ತು ಅದರ ಸ್ವಲ್ಪ ಭಾಗ ಮಾತ್ರ ಇದೆ]. ಇದು ಹೊಸುರು ಸರ್ಜಾಪುರ ರಸ್ತೆಗಳ ಮಧ್ಯೆ ಇದೆ.

ಅರಕೆರೆ
ಕನ್ನಡದಲ್ಲಿ ಅಱ ಅಂದರೆ ಧರ್ಮ. ಧರ್ಮಕ್ಕಾಗಿ ಕಟ್ಟಿಸಿದ ಕೆಱೆ ಅದು. ನಿಜವಾಗಿ ಅಱಕೆಱೆ. ಕಾಲಕ್ರಮೇಣ ಕನ್ನಡಿಗರ ಱ ಮತ್ತು ರ ಅಜ್ಞಾನದಿಂದಾದ ಅರಕೆರೆ. ಆದರೆ ನಿಜವಾಗಿ ಅರೆಕೆರೆ ಅಲ್ಲ. ನಿಮಗೆ ಗೊತ್ತಿರಬಹುದು ಅಱವಟ್ಟಿಗೆ=ಅಱ+ಪಟ್ಟಿಗೆ ಅಂದರೆ ದಾರಿಹೋಕರಿಗೆ ಹಿಂದೆ ನೀರು ಆಹಾರ ಒದಗಿಸುತ್ತಿದ್ದ ಧರ್ಮಛತ್ರ. [ಮಾಹಿತಿ: ಅನಂತಕೃಷ್ಣ ಕೆ ಎಸ್]

ಬನಶಂಕರಿ:
ಬನಶಂಕರಿ ಬೆಂಗಳೂರಿನ ದಕ್ಷಿಣಭಾಗದಲ್ಲಿದೆ. ಇಲ್ಲಿನ ಕನಕಪುರ ರಸ್ತೆಯಲ್ಲಿರುವ ’ಬನಶಂಕರಿ’ ದೇವಲಯವು ಬೆಂಗಳೂರಿನ ಹಳೆಯ ದೇವಾಲಯಗಳಲ್ಲಿ ಒಂದು, ಈ ದೇವಸ್ಥಾನವನ್ನು 1915 ರಲ್ಲಿ ಸುಬ್ರಮಣ್ಯ ಶೆಟ್ಟಿ ಎಂಬುವರು ಕಟ್ಟಿಸಿದರು.

ಬಸವನಗುಡಿ:ನಂದಿ
ಈ ಪ್ರದೇಶದಲ್ಲಿ ಒಂದು ನಂದಿವಿಗ್ರಹವಿದೆ. ಕನ್ನಡದಲ್ಲಿ ನಂದಿಗೆ "ಬಸವ" ಎಂಬಹೆಸರಿದೆ, ಅದಕ್ಕೇ ಇದು ಬಸವನಗುಡಿ ಎಂದು ಪ್ರಸಿಧ್ಧವಾಗಿದೆ.

ಮುಂದುವರಿಯುತ್ತದೆ...

Rating
No votes yet

Comments