Bugs ಮಳೆ
Bugs ಮಳೆ
ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು...
Developers ಕೈಯಿಂದ ಇಂದು ಮತ್ತಷ್ಟು ಬಂದಿವೆಯೆಂದು
ಅಹಾ ಎಂಥ Bugಗಳ ಸುರಿಮಳೆ
ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||
ಊಟದ ತಟ್ಟೆಯ ಮುಂದೆಯೂ ಕೇಳಿದೆ ಕಲರವ,
ರಾತ್ರಿಯ ಕನಸಲೂ ನಾನು ಹೋದರೆ ತಳಮಳ
ನೆಮ್ಮದಿ ನಿದ್ದೆ ರಜ ಹಾಕಿದೆ ಕೆಲಸಕೆ ನಾನು ಬಂದ ಕ್ಷಣ
ನಾ ಖೈದಿ ಕಂಪೆನಿ ಸೆರೆಮನೆ,
ನಿದ್ದೆ ಬರುವುದು ಎಂದು ನನಗೆ, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||
Applicationನ ಸೆಲೆಯಲಿ ಕಾಣದ Bugಗಳೇ ತುಂಬಿವೆ
Notepadiನ ಪುಟದಲಿ ಕೇವಲ report ಮಾಡದ Bugs ಇವೆ
ಯಾರಿಗೂ ಕಾಣದ major Bugನು,ಇಂದು ನಾನು ನೋಡಿರುವೆ
ಮ್ಯಾನೇಜರ್ಗೆ ಉಂಟೆ ಇದರ ಕಲ್ಪನೆ
ಬಂದು ಹೊಗಳರೋ ಒಮ್ಮೆ, ಹಾಗೇ ಸುಮ್ಮನೆ..... ||ಅನಿಸುತಿದೆ ಯಾಕೋ ಇಂದು...||
ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು...
Developers ಕೈಯಿಂದ ಮತ್ತಷ್ಟು ಬಂದಿವೆಯೆಂದು
ಅಹಾ ಎಂಥ Bugಗಳ ಸುರಿಮಳೆ
ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||
---------ಅಮರ್