Butterfly - ಚಿಟ್ಟೆ - ಲಕ್ಷ್ಮೀಕಾಂತ ಇಟ್ನಾಳ

Butterfly - ಚಿಟ್ಟೆ - ಲಕ್ಷ್ಮೀಕಾಂತ ಇಟ್ನಾಳ

 ಚಿಟ್ಟೆ
             -ಲಕ್ಷ್ಮೀಕಾಂತ ಇಟ್ನಾಳ
ಹೂವಂತೆ ಅರಳುತ ಬಂತೊಂದು ಕನಸು,
ನೂರಾಶಯದ ಪರಿಮಳ ಹರಡುತಲೇ ಬಂತು,
ವಿಚಿತ್ರ ಸುಗಂಧವಾದರೂ, ಹೃದಯಕೆ ಸಮೀಪ,
ಅಂಗಳ ತುಂಬ, ಹೃದಯ, ಮನಮನಗಳಲ್ಲಿ ದುಂಬಿ,
ಖುಷಿಯ ರೆಕ್ಕೆಗಳಿಂದ, ಆಸೆಗಳ ಭರಪೂರ ತುಂಬಿ,
ಕಣ್ಣುಗಳು ಕೀಳಲೊಲ್ಲವು, ಆ ಚಿಟ್ಟೆಯಿಂದ,
ಸುಂದರಿ, ಸುರ ಸುಂದರಿ,

ಹಾರುತ್ತ ಸನಿಹ, ಕೊರಳು ಕೊಂಕಿಸಿ, ತನ್ನದೇ ಧಾಟಿ, ಲಯ ಮಾತಿನಲ್ಲಿ,
‘ಏನಾದರೂ ಮಾಡಿ, ಮಾಡಿ ಏನಾದರೂ’
ಪಿಸುಗುಟ್ಟಿತು ಕಿವಿಯಲ್ಲಿ,
ಪ್ರೀತಿತುಂಬಿ, ಅರ್ಪಿಸುವ ಮನದಲ್ಲಿ,  ತನ್ನದೇ ಸಂಸ್ಕøತಿಯಲ್ಲಿ,
ನಿಮ್ಮ ಮನೆಯ ಚಿಟ್ಟೆಯದು ನನ್ನದು, ‘ಅವನು ನನ್ನವನು’
ಕೇಳಿ ಬಂದಿತೊಂದು ಚಿಟ್ಟೆ,  ಗೂಡಿಗಾಗಿ ಹಂಬಲಿಸಿ, ಬಹು ಆಸೆಯಿಂದ!

ಹೃದಯ ನಿರೀಕ್ಷೆಗಳೆಲ್ಲ, ಚಿಟ್ಟೆಗೆ  ಸ್ಪಂದಿಸಿ,  ಕಣ್ಣು ಕಿವಿಯಾಗಿಸಿ,
ಸ್ವಾಗತಿಸಲು ತೋಳುಗಳ ಅಗಲಿಸಿ, ಕಾದು ನಿಂತವು ತುದಿಗಾಲಲ್ಲಿ,
ತನ್ನ ಮನೆಯಂಗಳದಲಿ ಹಾರಲು,  ಮನೆಮಗಳಾಗಿ  ಬಿಗಿದಪ್ಪಿ ತರಲು,
ತುಂಬು ಮನದಿಂದ, ತುಡಿತಗಳ ಬದಿಗಿರಿಸಿ,  ಕಾಯುತ್ತ ಕನಸಲ್ಲೂ ಕಣ್ಣುದೆರೆದು,

ಹೂವಿನ ಮೃದು ಕಾಲ ಸ್ಪರ್ಶ, ಹೃದಯಕ್ಕೆ ತಟ್ಟುತ್ತ,
ಬಣ್ಣದ ಸುಂದರ ಚಿಟ್ಟೆ, ಹೃದಯಗಳಲ್ಲಿ ನಗು ನಾಟಿಸುತ್ತ,
ಬಂತೊಂದು ಭಾವನೆ,
‘ಚಿಟ್ಟೆ ನಮ್ಮದೇ, ಮನೆಯಂಗಳದ್ದೇ’,
ಹಾರುತ್ತ, ನೆಗೆಯುತ್ತ, ಹೃದಯಗಳ ಮೈಮನಗಳಲ್ಲಿ,
ಆಶೆಯ ಬೀಜಾಂಕುರ,
ಕುಣಿದವೆಲ್ಲ, ನಲಿದವೆಲ್ಲ, ಮನೆಯಲ್ಲ
ನಗುತುಂಬಿ, ಮನದುಂಬಿ, ಅಪರಿಚಿತ ಧಾಟಿಗೆ,
,,,,,,,,,,,,,,,,,,,,
,,,,,,,,,,,,,,,,,,,,,,,,
,,,,,,,,,,,,,,,,,,,,,,,,,,,,,

ಚಿಟ್ಟೆಯ ರೆಕ್ಕೆಗಳ ತಂಗಾಳಿ, ಆತ್ಮಕ್ಕೆ ತಟ್ಟಿ
ನವಿರು ಕಾಲು ಹೆಜ್ಜೆ, ಹೃದಯಕ್ಕೆ ನಟ್ಟು
ಹೃದಯಕ್ಕೆ ಆದ ಗಾಯಗಳ ನೋಡುತಿಹವು,
ಕ್ಷಣಗಳು ಸರಿಯುತಿಹವು, ಕ್ಷಣ ಕ್ಷಣ ಸರಿಯುತಿಹವು,

ಒಂಟಿ ಬಾನಾಡಿಯೀಗ………… ಸ್ವಗತದಲ್ಲಿ, ಪಿಸುಗುಡುತಲಿಹುದೇ! ,
ಮೌನದಲ್ಲಿ, ದೂರ ಕಾನನದಲ್ಲಿ, ಪ್ರೀತಿಯ ಹಂಬಲದಲ್ಲಿ!

ಕೇಳು, ಇಲ್ಲಿ ಕೇಳು, ಇರು ನನ್ನ ಹತ್ತಿರವಿಲ್ಲಿ,
ಸುಡದಿರಲಿ, ರೆಕ್ಕೆಗಳು ಬದುಕಿನ ಜ್ವಾಲೆಯಲ್ಲಿ!
ಪ್ರಾರ್ಥನೆಯ ಕೂಗು, ಕೇಳಿಸಲು ಮೊರೆಯಿಡುತ,
ಮರೆಯಾದ ಅಂಗಳದ ನಗುವ ಮರಳಿಸಲು ಕೋರಿ,
ಮನದ ನಿರೀಕ್ಷೆಗಳು ಕೂಗಿ ಕೂಗಿ ಕರೆಯುತಿವೆ, ತೆರೆದ ಹೃದಯದಿಂದ,
ಶಾಂತವಾಗಿ, ಮೃದುವಾಗಿ, ಮೌನವಾಗಿ, ಆದರೂ ಗಟ್ಟಿಯಾಗಿ,
ಚಿಟ್ಟೆಯ ಮಾತನ್ನೇ ಈಗ ಅಂಗಳವು ಹೇಳುತಿದೆ,
‘ಏನಾದರೂ ಮಾಡು, ಮಾಡು ಏನಾದರೂ’
‘ಕ್ಷಣಗಳು ಸರಿಯುತಿವೆ, ಕ್ಷಣ ಕ್ಷಣ ಸರಿಯುತಿವೆ’

 

BUTTERFLY

 

There came a dream, blooming like a flower

Immensely spreading,  fragrance of hopes,

Full of aroma, a strange, but close to hearts,

Around the courtyard, in every heart and mind,

Filling with JOY of hopes, eyes  not ready to get apart, from the butterfly,

 So nice ,So nice.

Speaking  a tone, in her  tune, whispering  in ears,

‘DO SOMETHING, DO SOMETHING’

Whispering silently , lovingly, adoring in her own way,

 Your butterfly is mine , HE IS MINE,

butterfly  searching for a lovable  NEST, full of hopes,

 

HOPES AND HEARTS, turning to  ears and eyes,

standing on the tip of toe,  arms spread,

Awaiting to embrace, my little butterfly, to adore in my courtyard,,

Hands begging, hiding the sea of turmoil, eyes open , even in the Dreams.

 

Touch of the tender feet of  flower , right on the hearts,

So nice a butterfly, colorful and filling smiles, in all hearts

There came a feel,  the butterfly, is now belongs to our, ‘Angana’

Sitting and  flying in the hearts of hopes,

 dancing to a tune, willingly, but unknown,

…….

……

……

Nurturing   wounds on the hearts,

Where,  foot  of butterfly, fell on the hearts,

Where, soul felt the tenderness of, breeze of wings,

 Seconds passing by, Seconds passing by,

 waiting like a lonely bird, whispering in the woods,

Distance apart from the butterfly, calling silently, still caressing,

‘Butterfly, hear, hear, be near’

Be away from the fire,

Waiting for the almighty to hear, ‘thy Prayer,’

Praying to return, the vanished smiles of courtyard,

Minds and Hopes, calling with open Hearts,

So silently, so gently, so calmly, YET,  so Aloud,

‘Do something, Do something’

Seconds passsssssing by, seconds passssssssssing by ……………..


 

Rating
No votes yet

Comments

Submitted by H A Patil Tue, 04/23/2013 - 17:38

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ಚಿಟ್ಟೆ ' ಕವನ ಓದಿದೆ ತುಂಬಾ ಸಶಕ್ತವಾದ ರಚನೆ. ಮರು ಓದಿಗೆ ಪ್ರಚೋದಿಸುತ್ತದೆ, ಇದು ಕವನವನ್ನು ಮನದಾಳಕ್ಕಿಳಿಯುವಂತೆ ಮಾಡುತ್ತದೆ. ನೋಡಿದರೆ ಇಂಗ್ಲೀಷ್ ರಚನೆಯೂ ಇದೆ, ಅರ್ಥಪೂರ್ಣ ರಚನೆಗೆ ಧನ್ಯವಾದಗಳು

Submitted by lpitnal@gmail.com Tue, 04/23/2013 - 19:58

ಹಿರಿಯರಾದ ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರ. ಕನ್ನಡ ಹಾಗೂ ಇಂಗ್ಲೀಷ ಎರಡೂ ಭಾಷೆಗಳ ಕವನಗಳಿಗೆ ತಮ್ಮ ಪ್ರೋತ್ಸಾಹಪರ ಪ್ರತಿಕ್ರಿಯೆಗೆ ಧನ್ಯವಾದಗಳು.