DLI ಪುಸ್ತಕನಿಧಿ- ನಳಪಾಕ ಎಂಬ ನಾಟಕಗಳ ಸಂಗ್ರಹ

DLI ಪುಸ್ತಕನಿಧಿ- ನಳಪಾಕ ಎಂಬ ನಾಟಕಗಳ ಸಂಗ್ರಹ

ಇದನ್ನು "ಶ್ರೀವತ್ಸ " ಎಂಬವರು ಬರೆದಿದ್ದು archive.org ತಾಣದಲ್ಲಿದೆ. ಇದನ್ನು https://archive.org/details/in.ernet.dli.2015.364640/mode/1up  ಈ ಕೊಂಡಿಯಲ್ಲಿ ಓದಬಹುದು ಅಥವಾ ಇಳಿಸಿಕೊಳ್ಳಬಹುದು.

ದಕ್ಷಿಣದ ಯದುಗಿರಿಯ ದೇವರಾದ ಶ್ರೀಕೃಷ್ಣನು - ಅವನ ಹೆಸರು ಸಂಪತ್ಕುಮಾರ - ವಿಗ್ರಹ ರೂಪದಲ್ಲಿ ದೆಹಲಿಯ ಸುಲ್ತಾನನ ಮಗಳ - ಅವಳ ಹೆಸರೇ ಬೀಬಿ ನಾಚ್ಚಿಯಾರ್ - ಶಯ್ಯಾಗೃಹದಲ್ಲಿದ್ದನು. ಅವನನ್ನು ದೆಹಲಿಯ ಸುಲ್ತಾನನ ಆ ಮಗಳು ಪ್ರೀತಿಸಿದ್ದಳು . ಈ ಮೂರ್ತಿ ರೂಪದ ದೇವರನ್ನು ಶ್ರೀ ರಾಮಾನುಜಾಚಾರ್ಯರು ಯದುಗಿರಿಗೆ ಕರೆದು ತರುತ್ತಾರೆ .  

ಆ ಷಹಜಾದಿಯು ಆ ದೇವರ ಹಿಂದೆ ಮದುಗಿರಿಗೆ ಬಂದು ಅವನಲ್ಲಿ ಲೀನವಾಗುತ್ತಾಳೆ. ನಂತರ ಪ್ರೀತಿಗೆ ಜಾತಿ ಮುಖ್ಯವಲ್ಲ ಎಂದು ಬಾದಶಹನು ಮನಗಾಣುತ್ತಾನೆ. ಇದು "ಬೀಬಿ ನಾಚ್ಚಿಯಾರ್ " ಎಂಬ ಹೆಸರಿನ ಮೊದಲ ಕಿರುನಾಟಕ . 

ಇಲ್ಲಿ ಇನ್ನೊಂದು ನಾಟಕ ಇದೆ. ಅದರ ಹೆಸರು ಶಬ್ದವೇದಿ. ದಶರಥನು ಶ್ರವಣ ಕುಮಾರನನ್ನು ಪ್ರಾಣಿ ಎಂಬ ತಪ್ಪು ಗ್ರಹಿಕೆಯಿಂದ ಬಾಣ ಬಿಟ್ಟು ಕೊಂದದ್ದು ಅಲ್ಲವೇ? ಇದರಲ್ಲಿ ಅದೇ ಕಥೆ ಇದೆ. ಆದರೆ ಅವನ ಹೆಸರು ಕಾಂಡವ ಎಂದಿದೆ. ಇರಲಿ. ಇಲ್ಲಿ ಹೇಳಿದ ಕಥೆ ಹೀಗಿದೆ. ದಶರಥನಿಗೆ ಮಕ್ಕಳಾಗಿಲ್ಲ. ಅದಕ್ಕೆ ಆತ ಬೇಜಾರು ಪಟ್ಟು ಕೊಂಡಿದ್ದಾನೆ. ಅವನು ಬೇಟೆಗೆ ಹೋಗಿ ತಪ್ಪು ಕಲ್ಪನೆಯಿಂದ ಒಬ್ಬ ತಾಪಸನನ್ನು ಕೊಲ್ಲುತ್ತಾನೆ. ಅವನ ತಂದೆ ತಾಯಿಗಳು ಇವನಿಗೆ ನೀನೂ ಮರಣ ಕಾಲದಲ್ಲಿ ಪುತ್ರ ವಿಯೋಗವನ್ನು ಹೊಂದು ಎಂದು ಶಾಪ ಕೊಡುತ್ತಾರೆ. ಮತ್ತಷ್ಟು ಬೇಜಾರು ಮಾಡಿಕೊಂಡಿರುವ ದಶರಥನಿಗೆ ಆತನ ಮಂತ್ರಿ ಹೀಗೆ ಸಮಾಧಾನ ಮಾಡುತ್ತಾನೆ - ಇದು ಶಾಪವಲ್ಲ, ವರವೇ ಆಗಿದೆ. ಯಾಕಂದರೆ ಪುತ್ರ ವಿಯೋಗದಿಂದ ಮರಣ ಆಗಬೇಕಾದರೆ ಮೊದಲು ಪುತ್ರ ಜನಿಸಬೇಕಲ್ಲ?. ಹಾಗಾಗಿ ಈ ತಪಸ್ವಿಯ ತಂದೆಯು ವರವನ್ನೇ ಕೊಟ್ಟಿದ್ದಾನೆ!

Rating
Average: 4 (2 votes)