ELCIA ಉತ್ತಮ ಆರಂಭ .
ELectronic CIty Association (ELCIA) ರವರು Electronic City ಸುತುಮುತ್ತಲಿನ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದು ಕೇಳಿಪಟ್ಟೆ . ಇದು ಸ್ವಾಗತಾರ್ಹ ವಿಷಯವಾಗಿದೆ .
ನಗರಾಭಿವೃದ್ಧಿ ಒಂದರಿಂದಲೇ ಈ ದೇಶ ಮುಂದುವರೆಯಲು ಸಾಧ್ಯವಿಲ್ಲ ಎಂದು ಮಹಾತ್ಮರು ಬಹಳ ಹಿಂದೆಯೇ ಹೇಳಿದ್ದರು . ಭಾರತ ದೇಶದ ಬೆನ್ನೆಲುಬು ಈ ನಮ್ಮ ಗ್ರಾಮಗಳು - ಹಳ್ಳಿಗಳು . ದೇಶದ ಉದಯೋನ್ಮುಖ ಪ್ರಗತಿಗೆ ಇವುಗಳ ಅಭಿವೃದ್ಧಿ ಅನಿವಾರ್ಯ.
ಈ ನಿಟ್ಟಿನಲ್ಲಿ "IT" for Rural Developement ಎಂಬುದಾಗಿ ಬರಿಯ ಶಂಖನಾದಗಳನ್ನು ಕೇಳಿದ್ದೆ . ಬಹಳ ಸಮಯದ ನಂತರ ground work ನಡೆಯಲಿದೆ ಎಂದು ಕೇಳಿ ಸಂತೋಷವಾಯಿತು .
ELCIA ಅವರು ಎರಡು ಹಂತದಲ್ಲಿ ಸುಮಾರು ೨೩ ಸುತ್ತಮುತ್ತಲಿನ ಗ್ರಾಮಗಳನ್ನು ಗ್ರಾಮ ಪಂಚಾಯತಿ ಸಹಾಯದೊಂದಿಗೆ ಅಭಿವೃದ್ಧಿ ಕಾರ್ಯ ನಡೆಸಲಿವೆ . ಒಳ್ಳೆಯ ಆರಂಭ ಆಗಿದೆ . ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಹಾಗು ಈ ಕಾರ್ಯ ಬರಿಯ "Paper Propoganda" ಆಗದೆ ಸಫಲವಾಗಲಿ ಎಂದು ಹೃದಯಪೂರ್ವಕವಾಗಿ ಆಶಯಿಸುತ್ತೇನೆ.
ಈ ನಿಮ್ಮ ಕಾರ್ಯಗಳು ಬರಿ ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರವಲ್ಲದೇ ಇನ್ನೂ ಅನೇಕ ಗ್ರಾಮಗಳಿಗೆ ಹಬ್ಬಲಿ ಎಂದು ಆಶಯಿಸುತ್ತೇನೆ . ಸಹಾಯಕ್ಕಾಗಿ ಸದಾ ತತ್ಪರವಾಗಿದ್ದೇನೆ.