Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್

Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್

Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್


ಇತ್ತೀಚೆಗೆ ಮೈಕ್ರೋಸಾಫ್ಟ್ “VIRTUAL TECH DAYS” ಅನ್ನೊ ಕಾರ್ಯಕ್ರಮಾನ ಹಮ್ಕೊಂಡಿತ್ತು. ಇದ್ರ ಉದ್ದೇಶ ಇಷ್ಟೆ, ಅವ್ರ ಹೊಸ WIN 7, .net ಮತ್ತು ಹಲವಾರು ಸಾಪ್ಟ್ವೇರ್ ಗಳನ್ನ ಎಲ್ಲಾರೂ ಕಲೀಲಿ ಮತ್ತು ಅದನ್ನೆ ಉಪಯೋಗಿಸಲಿ ಅಂತ. ಕಾರ್ಯಕ್ರಮಾನ ಅವ್ರು ONLINE ಹಮ್ಕೊಂಡಿದ್ರು. ಯಾರ್ ಬೇಕಾದ್ರು ಇದಕ್ಕೆ ನೊಂದಾಯಿಸ್ಕೋಬೋದು ಮತ್ತು ಇದರ ಲಾಭ ಪಡ್ಕೊಬೋದು. ತೆಲುಗು, ತಮಿಳು, ಮಲಯಾಳಮ್ ಹಾಗು ಹಿಂದಿ ಭಾಷೆಗಳಲ್ಲಿ ಹಮ್ಕೊಂಡ ಇವ್ರು ಕನ್ನಡ ಭಾಷೆನ ಮರ್ತೇ ಬಿಟ್ರು. ಅದರ ಕೊಂಡಿ ಇಲ್ಲಿದೆ ನೋಡಿ.


http://www.virtualtechdays.com/regional/


 


ನಿಮ್ಗೆ ಗೊತ್ತಿರೊ ಹಾಗೆ ಬೆಂಗಳೂರು ಭಾರತದ ಟಿ ಹಬ್ ಎಂದೇ ಹೆಸರುವಾಸಿ. ಭಾರತದ ಯಾವುದೇ ಭಾಷೆಯ ಜನರಿಗಿಂತ ಕರ್ನಾಟಕದಲ್ಲಿ ಕನ್ನಡದವರೇ ಹೆಚ್ಚು ಐ ಟಿ ಕಂಪನಿಗಳಲ್ಲಿ ಕೆಲ್ಸ ಮಾಡ್ತಾ ಇರೋದು. ಹೀಗಿರ್ವಾಗ ಕಾರ್ಯಕ್ರಮಾನ ಕನ್ನಡದಲ್ಲಿ ಹಮ್ಕೊಳ್ದೆ ಇರೋದು ಎಷ್ಟು ದಡ್ಡತನ ಅಲ್ವ? ಇದನ್ನು ಕನ್ನಡದಲ್ಲಿ ನಡೆಸಿ ಕೊಡದೆ ದ್ದಿದ್ದರಿಂದ ಎಷ್ಟೋ ಕನ್ನಡಿಗರು ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿದಾರೆ ಅನ್ನೋದನ್ನೇ ನಿರ್ಲಕ್ಷಿಸಿದ ಹಾಗಾಗಿದೆ. ಮೈಕೋಸಾಫ್ಟ್ ಗೆ ಯಾರಿಂದಲೋ ತಪ್ಪು ಮಾಹಿತಿ ದೋರಕಿದೆ.  ನಾವು ಇವರಿಗೆ ಸರಿಯಾದ ಮಾಹಿತಿ ನೀಡಿ ಅವರ ಕಣ್ಣು ತೆರೆಸಬೇಕಾಗಿದೆ.


ಅಂದಹಾಗೆ ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, MICROSOFT ತನ್ನ VISUAL STUDIO 2010 ಅನ್ನೋ ತಂತ್ರಾಂಶ ಉಚಿತವಾಗಿ ಕೊಡ್ತಾ ಇದೆ. ಇದರ ಬಗ್ಗೆ ಜಾಹಿರಾತೂನೂ ಬಂತು. ಆದ್ರೆ ಅದು ಬರಿ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ. ಅಂದ್ರೆ ಬರಿ ಹಿಂದಿ ಅಥವಾ ಆಂಗ್ಲ ಭಾಷೆ ಬರೋರು ಮಾತ್ರ ಇದನ್ನ ಉಚಿತವಾಗಿ ಬಳುಸ್ಬೇಕು ಅನ್ತಾನ ಗುರು? ಜಾಹಿರಾತು ಕನ್ನಡದಲ್ಲಿ ಬಾರದ ಕಾರಣ ಎಷ್ಟೊಂದು ಕನ್ನಡಿಗರು ಸೌಲಭ್ಯದಿಂದ ವಂಚಿತರಾದ್ರು. ಅಲ್ಲ ಸ್ವಾಮಿ ರಾಜಧಾನಿ ಬೆಂಗಳೂರಲ್ಲೇ ಹಿಂಗಾದ್ರೆ ಹೆಂಗೆ?


ಒಬ್ಬ ಜಾಗ್ರುತ ಗ್ರಾಹಕನಾಗಿ ನಾವು MICROSOFT ನಿಲುವನ್ನು ಪ್ರಷ್ನಿಸಲೇ ಬೇಕಾಗಿದೆ. ಬನ್ನಿ ನಾವೆಲ್ಲರೂ ಸೇರಿ MICROSOFTಗೆ ಮಿಂಚಿಸೋಣ. ಚೈನಾ, ಜಪಾನ್ ನಂತಹ ರಾಷ್ಟ್ರಗಳು ತಮ್ಮ ಭಾಷೆಯಲ್ಲೇ ಬೇಕಾದ್ದ ಎಲ್ಲಾ ಐ ಟಿ ಸೌಲಭ್ಯಗಳನ್ನೂ ಪಡೆದುಕೊಂಡಿದ್ದಾರೆ ಮತ್ತು ತಮ್ಮ ಭಾಷೆಗೆ ಉನ್ನತವಾದ ಭದ್ರತೆಯನ್ನ ಒದಗಿಸಿದ್ದಾರೆ. ನಾವೂ ಕೂಡ ನಮ್ಮ ಭಾಷೆಗೆ ಇದೇ ತರಹದ ಭದ್ರತೆ ಕೊಡೋದು ಜಾಣತನ. ನಾವ್ ಮಾಡ್ಬೇಕಾಗಿರೋದು ಇಷ್ಟೆ, ಕನ್ನಡಾನ ವೆಬ್ ಜಗತ್ತಿನಲ್ಲಿ ಪರಿಪೂರ್ಣವಾಗಿ ಬಳಸೋದು ಮತ್ತು ಬೆಳೆಸೋದು. ಈವತ್ತು ನಾವು ಇದನ್ನು ಪ್ರಶ್ನಿಸದೆ ಇದ್ದಲ್ಲಿ ನಾಳೆ ಕನ್ನಡ ಮೂಲೆ ಗುಂಪಾಗುವ ಎಲ್ಲಾ ಸಾಧ್ಯತೆ ಉಂಟು. ಇದು ನಮ್ಗೆ ಬೇಕಾ?


ಅವರಿಗೆ ಮಿಂಚಿಸಬೇಕಾದ ವಿಳಾಸ: vtd@timeus.net. (VIRTUAL TECH DAYS ದೂರಿಗೆ ಮಾತ್ರ ಇದನ್ನ ಬಳಸಿ),


ಅಥವಾ ಅವರ ಅನಿಸಿಕೆ ಡಬ್ಬಿಯಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ


http://www.virtualtechdays.com/regional/ask_question.aspx


 


ಇಂತಿ,


ನಂದನ್

Rating
No votes yet

Comments