HTML ನಲ್ಲಿರೋದನ್ನು ವಿಕಿ ಪಾರ್ಮ್ಯಾಟಿಗೆ ಕನ್ವರ್ಟ್ ಮಾಡೋದ್ ಹ್ಯಾಗೆ?

HTML ನಲ್ಲಿರೋದನ್ನು ವಿಕಿ ಪಾರ್ಮ್ಯಾಟಿಗೆ ಕನ್ವರ್ಟ್ ಮಾಡೋದ್ ಹ್ಯಾಗೆ?

 ಲಿನಕ್ಸಾಯಣದ ಆರ್ಟಿಕಲ್ ಗಳನ್ನು ಉಬುಂಟು ಇಂಡಿಯಾದ ವಿಕಿಯಲ್ಲಿ ಅಪ್ಡೇಟ್ ಮಾಡೋದು ಆಗಾಗ ನಾನು ಮಾಡಿಕೊಂಡು ಬರ್ತಿರೋ ಕೆಲಸ. ಅದನ್ನು ನೀವು ಈ ಕೊಂಡಿಯಲ್ಲಿ ಕಾಣಬಹುದು. ವಿಕಿಯನ್ನು ಉಪಯೋಗಿಸೋದು ಗೊತ್ತಿಲ್ಲದಿದ್ದರೆ ಈ ಲಿಂಕ್ ಅಪ್ದೇಟ್ ಮಾಡೋದು ಸ್ವಲ್ಪ ಕಷ್ಟದ ಕೆಲಸ. ನಮಗೂ ಇಂತಹ ಒಂದು ಪರಿಸ್ಥಿತಿ ಬಂದೊದಗಿರಬಹುದಲ್ಲವೇ? ತುಂಬಾ ದಿನದಿಂದ ಅಪ್ಡೇಟ್ ಮಾಡದ ಈ ಕೊಂಡಿಯನ್ನು ಇವತ್ತು ಅಪ್ಡೇಟ್ ಮಾಡೋಣ ಅಂತ ಕೂತಾಗ ಗೊತ್ತಾಯ್ತು ಏನಿಲ್ಲ ಅಂದ್ರೂ ೩೦ ಕೊಂಡಿಗಳನ್ನ ಅಲ್ಲಿ ಸೇರಿಸಬೇಕು ಅಂತ. ಏನಪ್ಪಾ ಮಾಡೋದು ಅಂತ ಕೂತಿದ್ದೆ. ಆಗ ನೆನಪಿಗೆ ಬಂದದ್ದು  ಸಂಪದದ ಪುಸ್ತಕಗಳ ಕೊಂಡಿಯ ಕೆಳಗೆ ನಿಮಗೆಲ್ಲಾ ಈಗಾಗಲೇ ಲಿನಕ್ಸಾಯಣದ ಎಲ್ಲ ಲೇಖನಗಳು ಒಂದೆಡೆ ಸಿಗ್ತಿವೆಯಲ್ಲ ಆ ಪುಟ. 

 ತಟ್ಟನೆ ಆ ಪುಟವನ್ನು ಡೌನ್ಲೋಡ್ ಮಾಡಿಕೊಂಡೆ. ಅದರಲ್ಲಿ ಎಲ್ಲಾ ಲೇಖನಗಳೇನೋ ಒಂದೆಡೆ ಸಿಕ್ತು, ಆದ್ರೆ ಅದನ್ನು ವಿಕಿ ಯಲ್ಲಿ ಹಾಗೇ ಹಾಕುವ ಹಾಗಿಲ್ಲ. ಅದನ್ನು ಕನ್ವರ್ಟ್ ಮಾಡ್ಲಿಕ್ಕಾಗತ್ತಾ ಅಂತ ಅಂದುಕೊಳ್ಳಬೇಕಾದರೆ ಗ್ನು/ಲಿನಕ್ಸ್ ನ ಒಂದು ಕಮ್ಯಾಂಡ್ ನೆನಪಾಯಿತು html2wiki ಅಂತ. 

ಸರಿ ಅದನ್ನು ಒಮ್ಮೆ ಉಪಯೋಗಿಸಿ ನೋಡೇ ಬಿಡೋಣ ಅಂತ ಕೂತೆ. 

ನನ್ನ ಉಬುಂಟು ಹಾಕಿಕೊಂಡಿರೋ ಲ್ಯಾಪ್ಟಾಪ್ ನಲ್ಲಿ libhtml-wikiconverter-mediawiki-perl ಅನ್ನೋ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಿಕೊಂಡು html2wiki ಕಮ್ಯಾಂಡ್ ಇದೆ ಅಂತ ನೋಡಿ ಕೊಂಡದ್ದಾಯಿತು. 

ಸಂಪದದಲ್ಲಿದ್ದ ಲಿನಕ್ಸಾಯಣ ಪುಸ್ತಕದ ವೆಬ್ ಪೆಜನ್ನು ಹಾಗೆ ನನ್ನ ಡೆಸ್ಕ್ಟಾಪ್ಗೆ ಸೇವ್ ಮಾಡಿಕೊಂಡು ಕಮ್ಯಾಂಡ್  ಪ್ರಯೋಗ ಮಾಡೇಬಿಟ್ಟೆ. ಸ್ವಲ್ಪ ಆಂಜನೇಯನ ಬಾಲದ ತರ ಇದೆ ಇದು ಹೆದರ್ಕೋ ಬೇಡಿ. 

LinuxaayaNa.html -> ಇದರಲ್ಲಿ  ಸಂಪದದಿಂದ ಡೌನ್ಲೋಡ್ ಮಾಡಿಕೊಂಡ ಪುಸ್ತಕದ ಪೇಜ್ನ ಕಂಟೆಟ್ ಇತ್ತು.

#html2wiki --dialect MediaWiki --base-uri http://ubuntu-in.info/wiki/ --wiki-uri http://ubuntu-in.info/wiki/ LinuxaayaNa.html >LinuxaayaNa.wiki

ಇಲ್ಲಿ :

  --dialect ಇದರ MediaWiki ಅಂತ ಬರೆದದ್ದು ಉಬುಂಟು ಇಂಡಿಯಾದವರು ಯಾವ ವಿಕಿ ಉಪಯೋಗಿಸ್ತಾರೆ ಅಂತ html2wiki ಕಮ್ಯಾಂಡಿಗೆ ತಿಳಿಸಲಿಕ್ಕೆ. 

  -wiki-uri ಮತ್ತು -base-uri ನೀವು ಯಾವ ವಿಕಿಗೆ html  ಪುಟವನ್ನು ಕನ್ವರ್ಟ್ ಮಾಡ್ಬೇಕು ಅಂದುಕೊಂಡಿದ್ದೀರಾ ಅಂತ ಹೇಳುತ್ತೆ. 

http://ubuntu-in.info/wiki/  - ಇದು ಈಗಾಗಲೇ ಗೊತ್ತಿರಬೇಕಲ್ಲ. ನನ್ನ ಲಿನಕ್ಸಾಯಣದ ಪಟ್ಟಿಯನ್ನು ಇದೇ URL ನಲ್ಲಿ ಹಾಕಿರೋದು.

LinuxaayaNa.wiki  - ಇದರಲ್ಲಿ ನನಗೆ ಬೇಕಾದ ವಿಕಿ ಪಾರ್ಮ್ಯಾಟ್ ನ ಕಂಟೆಟ್ ಸಿಕ್ತು. ಇದನ್ನು ಕಾಪಿ ಮಾಡಿ ಪೇಸ್ಟ್ ಮಾಡಿದ್ದಷ್ಟೇ ನನ್ನ ಕೆಲಸ ಮುಗೀತು.

ಹೆಚ್ಚಿನ ವಿಷಯ:

html2wiki ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ  man ಕಮ್ಯಾಂಡ್ ಉಪಯೋಗಿಸಿ. ಈ ಕೆಳಗೆ ತೋರಿಸಿರೋ ತರ.

#man html2wiki

(ಸೂಚನೆ # ಅನ್ನೋದು ನಿಮ್ಮ ಗ್ನು/ಲಿನಕ್ಸ್ ನ ಕಮ್ಯಾಂಡ್ ಪ್ರಾಂಟ್ ವಿಂಡೋಸ್ ನಲ್ಲಿ c:\ ಅಂತ ನಿಮಗೆ ಕಾಣುತ್ತಲ್ಲಾ ಅದೇ ತರ)

ಅದ್ಸರಿ  ಇಷ್ಟೋಂದೆಲ್ಲಾ ಹೇಳಿ ಇದನ್ನೆಲ್ಲಾ ಎಲ್ಲಿ ಟೈಪ್ ಮಾಡೋದು ಅಂತ ಹೇಳಲೇ ಇಲ್ಲ ಅಲ್ವಾ?

Applications -> Accessories -> Terminal  ಈ ಆಯ್ಕೆ ಮಾಡಿಕೊಂಡು ಕಮ್ಯಾಂಡ್ ಟೈಪ್ ಮಾಡ್ಲಿಕ್ಕೆ ಶುರು ಮಾಡಬಹುದು. ಈ ಟರ್ಮಿನಲ್ ಅನ್ನು ಇನ್ನೊಂದು ರೀತಿ ಕೂಡ ನಿಮ್ಮ ತೆರೆಯ ಮೇಲೆ ಬರೋ ಹಾಗೆ ಮಾಡಬಹುದು. Alt + F2 ಪ್ರೆಸ್ ಮಾಡಿ ಬರುವ ವಿಂಡೋದಲ್ಲಿ gnome-terminal ಅಂತ ಟೈಪ್ ಮಾಡಿ. ಟರ್ಮಿನಲ್ ನಿಮ್ಮ ಮುಂದಿರುತ್ತದೆ. 

ಲಿನಕ್ಸ್ ನಲ್ಲಿ ಕಮ್ಯಾಂಡುಗಳನ್ನು ಉಪಯೋಗಿಸುವುದರ ಬಗ್ಗೆ ಸುಲಭವಾಗಿ ಇನ್ಮುಂದೆ ಲಿನಕ್ಸಾಯಣದಲ್ಲಿ ಬರೀತಾ ಬರ್ತೀನಿ. ಓದ್ತೀರಲ್ಲಾ?

Rating
No votes yet