KSRTC ಬಸ್ ನಲ್ಲಿ ಕಂಡಿದ್ದು....
ನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ.
ಇತ್ತೀಚಿಗೆ ಒಂದು ಬಸ್ ನಲ್ಲಿ ಕಂಡಿದ್ದು.
ಶಿವನೆಂದರೆ ನೆಲ ಜಲ
ಅರಿತು ನಡಿ ಬಲಾಬಲ
ಅಲ್ಲೆ ಇರುವುದು ಮನುಕುಲ.
ಇದು ಪರಿಸರ ಉಳಿಸಿಕೊಳ್ಳೊದರ ಬಗ್ಗೆ ಎನೋ ಸಂದೇಶ ಇರ ಬೇಕು ಅನ್ನಿಸುತ್ತೆ. ಆದರೆ ಎಷ್ಟು ತಲೆ ಕೆಡಿಸಿಕೊಂಡ್ರು ಸರಿಯಾಗಿ ಅರ್ಥವೇ ಆಗ್ತಾ ಇಲ್ಲ!
Rating
Comments
ಉ: KSRTC ಬಸ್ ನಲ್ಲಿ ಕಂಡಿದ್ದು....