LIFT ಬಗ್ಗೆ ಜಾಗ್ರತೆ..
ಊಂಛೀ ಹೆ ಬಿಲ್ಡಿಂಗ್..
ಲಿಫ್ಟ್ ತೊ ಬಂದ್ ಹೆ..
ಕೈಸೆ ಮೆ ಜಾವೂಂ
ಗುಟನೋಂ/ಪೀಠ್/ಪೈರೋಂ ಮೆ ದರ್ದ್ ಹೆ..
ಹೊಸ ಫ್ಲಾಟ್‌ಗೆ ಬಂದ ಹೊಸತರಲ್ಲೇ, ಲಿಫ್ಟ್ ಕೈಕೊಟ್ಟಾಗ, ಹಾಸ್ಯಕ್ಕೆ ಈ ಹಾಡು ಹೇಳುತ್ತಾ ಮೆಟ್ಟಲುಗಳನ್ನು ಹತ್ತುತ್ತಿದ್ದೆ. ಲಿಫ್ಟ್ ನಾಲ್ಕು ದಿನ ಓಡಿದರೆ, ಎರಡು ದಿನ ಕೈಕೊಡುತ್ತಿತ್ತು. ಕೆಲವೊಮ್ಮೆ ಲಿಫ್ಟ್ ಬಾಗಿಲು ಬಡಿದುಕೊಳ್ಳುತ್ತಿರುವ ಶಬ್ದಕ್ಕೆ ಬಿಲ್ಡಿಂಗೇ ನಡುಗುತ್ತಿತ್ತು !
ನಿನ್ನೆ ಬೆಳಗ್ಗೆ ಪೇಪರ್ ಓದುವಾಗ " http://timesofindia.indiatimes.com/City/Bangalore/Flat-caretaker-stuck-b... " ಕೇರ್ ಟೇಕರ್ ಲಿಫ್ಟ್ ರಿಪೇರಿಗೆ ಹೋಗಿ, ಲಿಫ್ಟ್ ಡೋರ್‌ಗೆ ಸಿಕ್ಕಿ ಮೃತಪಟ್ಟ ಸುದ್ದಿ ಓದುವಾಗ, ನಮ್ಮ ಲಿಫ್ಟ್ ಸಂಗತಿ ನಿಮಗೆ ತಿಳಿಸೋಣ ಅನಿಸಿತು.
ನಮ್ಮ ಫ್ಲಾಟ್‌ನ ಲಿಫ್ಟ್ ಮೈಂಟೆನೆನ್ಸ್ ಬಿಲ್ಡರ್‌ನದ್ದೇ ಇದ್ದುದರಿಂದ ನಾವು ಕಂಪ್ಲೈಂಟ್ ಕೊಡುವುದಷ್ಟೇ ಮಾಡುತ್ತಿದ್ದೆವು. ರಿಪೇರಿ ಆದ ಕೂಡಲೇ ಖುಷಿ ಪಡುತ್ತಿದ್ದೆವು. ಪುನಃ ಹಾಳು-ರಿಪೇರಿ-ಖುಷಿ...ಹೀಗೇ ಸಾಗಿತ್ತು.
ವರ್ಷದ ನಂತರ ಮೈಂಟೆನೆನ್ಸ್ ಫ್ಲಾಟ್ ಅಸೋಷಿಯೇಶನ್‌ನವರು ವಹಿಸಿಕೊಂಡಾಗ, ಲಿಫ್ಟ್‌ನ ವಾರಂಟಿ, ಅಗ್ರಿಮೆಂಟ್ ಕೇಳಿದಾಗ ಬಿಲ್ಡರ್ ಕೊಡಲಿಲ್ಲ. ಲಿಫ್ಟ್ ಹಾಕಿದವರೊಂದಿಗೆ ನಾವೇ ವಿಚಾರಿಸಿದಾಗ, "ನಾವು ಲಿಫ್ಟ್ ಹಾಕಿದಷ್ಟೇ, ಮೈಂಟೆನೆನ್ಸ್ ನಮ್ಮದಲ್ಲ" ಅಂದರು. ಸೂಚಿಸಿದ ಹಣ ತೆತ್ತು, ಅವರೊಂದಿಗೆ ನಾವು ವಾರ್ಷಿಕ ಮೈಂಟೆನೆನ್ಸ್ ಒಪ್ಪಂದ ಮಾಡಿಕೊಂಡೆವು.
ಮೊದಲಿಗೆ ಲಿಫ್ಟ್ ಹೇಗೆ ಕೆಲಸ ಮಾಡುವುದೆಂದು ಈ ಯೂಟ್ಯೂಬ್ ಚಿತ್ರ ನೋಡಿ(ಕೇವಲ ನಾಲ್ಕೇ ನಿಮಿಷ..)- http://www.youtube.com/watch?v=hMdJLXGxynA
ತೊಂದರೆ ಆಗಲು ಸಾಧ್ಯವೇ ಇಲ್ಲ-ಅಷ್ಟು ಚೆನ್ನಾಗಿದೆ ಮೆಕ್ಯಾನಿಸಂ. ತೊಂದರೆ ಎಲ್ಲಾದರೂ ಆದರೆ ಅದನ್ನು ಒಬ್ಬ ಕೇರ್ ಟೇಕರ್ ಅಥವಾ ಮೆಕ್ಯಾನಿಕ್ ಬಂದು ರಿಪೇರಿ ಮಾಡುವುದಲ್ಲ.
ಈವಾಗ ಪಕ್ಕದಲ್ಲಿರುವ ಚಿತ್ರಗಳನ್ನು ಗಮನಿಸಿ. ಲಿಫ್ಟ್‌ನ ಹೃದಯ (ಮೈನ್ ಮೆಷಿನ್‌ಗಳು ಇರುವ ರೂಮು) ನೋಡಲು ಹೋಗಿದ್ದೆ-ಬಿಲ್ಡರ್‌ನ ಬೇಜವಾಬ್ದಾರಿ ನೋಡಿ ಭಯವಾಯಿತು. ಮೋಟಾರ್‌ನಿಂದ ಆಯಿಲ್ ಲೀಕಾಗುತ್ತಿತ್ತು. ನೆಲದಲ್ಲಿ ಆಯಿಲ್ ಲೀಕಾಗುವ ಸ್ಥಳಕ್ಕೆ ಹೊಯಿಗೆ ಹಾಕಿರುವರು. ಆಯಿಲ್ ಲೀಕಾಗುತ್ತಿದ್ದುದರಿಂದ ಮೋಟಾರ್ ಸವೆದಿರುವುದನ್ನು ಇನ್ನೊಂದು ಚಿತ್ರದಲ್ಲಿ ಕಾಣಬಹುದು. ಇದರಿಂದ ಲಿಫ್ಟ್‌ಗೆ ಸಂಬಂಧಿಸಿದ ಇಲೆಕ್ಟ್ರಾನಿಕ್ ಉಪಕರಣಗಳೂ ಹಾಳಾಗುತ್ತಿದ್ದವು.
ನೀವಿರುವ ಫ್ಲಾಟ್ ಅಥವಾ ಆಫೀಸಲ್ಲಿ ಲಿಫ್ಟ್ ಇದ್ದರೆ, ಅವರಿವರ ಜವಾಬ್ದಾರಿ ಎಂದು ಸುಮ್ಮನಿರದೆ, ಒಮ್ಮೆಯಾದರೂ ಲಿಫ್ಟ್‌ನ ಮೆಷಿನ್‌ಗಳಿರುವ ರೂಮಿಗೆ ಹೋಗಿ, ಸರಿಯಾದ ಕಂಡೀಷನ್‌ನಲ್ಲಿದೆಯೋ ಎಂದು ಗಮನಿಸಿ, ಸಂಬಂಧಿಸಿದವರಿಗೆ ತಿಳಿಸುವುದು ಮಾಡಿ. ಹಾಗೇ ಕೆಲ ಜಾಗ್ರತೆಯನ್ನು ಮಕ್ಕಳಿಗೂ, ಮಕ್ಕಳ ಹಾಗೇ ವರ್ತಿಸುವ ಇತರರಿಗೂ ತಿಳಿಸಿ. http://www.kone.com/en/responsibility/safety-and-accessibility/end-user-...
Comments
ಉ: LIFT ಬಗ್ಗೆ ಜಾಗ್ರತೆ..
ಗಣೇಶ್ ಜಿ, ನಮ್ಮೀ ಊರಿನಲ್ಲಂತೂ ಬರಿ ಬಹುಮಹಡಿ ಕಟ್ಟಡಗಳೆ. ಹೀಗಾಗಿ ಲಿಪ್ಟ್ ಇಲ್ಲದೆ ಇರುವ ಎತ್ತರದ ಬಿಲ್ಡಿಂಗ್ ಊಹಿಸಲೂ ಸಾಧ್ಯವಿಲ್ಲ. ಆದರೆ ಇದುವರೆವಿಗೂ ಲಿಪ್ಟು ಕೆಟ್ಟು ಮೆಟ್ಟಿಲು ಹತ್ತಿಳಿಯುವ ತಾಪತ್ರಯದ ಅನುಭವವಾಗಿಲ್ಲ. ಮೈಂಟೇನೆನ್ಸ್ ಮಾಡುವವರೂ ಸಹ ಒಂದು ಮಾಡುವಾಗ ಮತ್ತೊಂದು ಚಾಲನೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಇನ್ನು 'ಸರ್ವಿಸ್ ಅಂಡ್ ಮೈಂಟೆನೆನ್ಸ್' ವಿಷಯಕ್ಕೆ ಬಂದರೆ ನಾವದರಲ್ಲಿ ಕೈ ಹಾಕುವಂತೆಯೆ ಇಲ್ಲ - 'ಬೈ ಲಾ'! ಅದಕ್ಕೆಂದೆ ನಿಯೋಜಿಸಿದ ಕಂಪನಿಗಳಿಂದ ತಂತಾನೆ ನಡೆಯುತ್ತದೆ ಕೆಲಸ. ನಮ್ಮದೇನಿದ್ದರೂ ತಿಂಗಳಿಗೊಮ್ಮೆ ಬರುವ ಬಿಲ್ ಕಟ್ಟುವುದಷ್ಟೆ!
In reply to ಉ: LIFT ಬಗ್ಗೆ ಜಾಗ್ರತೆ.. by nageshamysore
ಉ: LIFT ಬಗ್ಗೆ ಜಾಗ್ರತೆ..
>>ಮೈಂಟೇನೆನ್ಸ್ ಮಾಡುವವರೂ ಸಹ ಒಂದು ಮಾಡುವಾಗ ಮತ್ತೊಂದು ಚಾಲನೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ...
-ಇಲ್ಲೂ ಎರಡು ಲಿಫ್ಟ್ ಇದ್ದಲ್ಲಿ ಒಂದು ಯಾವಾಗಲೂ ಹಾಳಾಗಿರುವಂತೆ ಮೈಂಟೇನ್ ಮಾಡುತ್ತಾರೆ.
-ಇಲ್ಲೂ ಸರ್ವಿಸ್ ವಿಷಯದಲ್ಲಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
(ಹಿಂದೆ ಬೆಂಗಳೂರನ್ನು ನಮ್ಮ "ಕೃಷ್ಣ" ಅವರು ಸಿಂಗಾಪುರ ಮಾಡುತ್ತೇನೆ ಎಂದಿದ್ದರು. ಈಸಲ ಇಲೆಕ್ಷನ್‌ನಲ್ಲಿ ಸಿಂಗಾಪುರ ಮರೆತೇ ಬಿಟ್ಟಿದ್ದಾರೆ.)
ಉ: LIFT ಬಗ್ಗೆ ಜಾಗ್ರತೆ..
ಗಣೇಶರೇ, ಸಮಾಜಸೇವೆ ಮಾಡಲು ಹೊರಟರೆ ಗೀಳಾಗಿಬಿಡುತ್ತದೆ ಎನ್ನುತ್ತಿದ್ದಿರಿ. ಈಗ ನೀವು ಮಾಡುತ್ತಿರುವುದೂ ಸಮಾಜಸೇವೆಯಲ್ಲವೇ? :)
In reply to ಉ: LIFT ಬಗ್ಗೆ ಜಾಗ್ರತೆ.. by kavinagaraj
ಉ: LIFT ಬಗ್ಗೆ ಜಾಗ್ರತೆ..
:) :) ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ. :)
ಸಮಾಜಸೇವೆಗೆ ಸಮಯವನ್ನು ಮೀಸಲಾಗಿಡುವರು ದೊಡ್ಡವರು ಎನಿಸಿಕೊಳ್ಳುವರು ಅಂತ ನಿಮ್ಮ ಲೇಖನದಲ್ಲಿ ಅಂದಿರಿ ( http://sampada.net/%E0%B2%AA%E0%B3%81%E0%B2%B0%E0%B3%81%E0%B2%B8%E0%B3%8... )
ನಾವು ಸ್ವಲ್ಪ ಸಮಯ ಮೀಸಲಿಟ್ಟರೆ ಅದು ನಮ್ಮ ಪೂರ್ಣ ಸಮಯವನ್ನು ಕಬಳಿಸಿಬಿಡುವುದು..
ಮೊದಲಿಗೆ ನನ್ನ ಟಿ.ವಿ ಸಮಯ, ಸಂಗೀತ ಕೇಳುವ ಸಮಯ ನುಂಗಿತು. ನಂತರ ಬಾಕಿ ಓದು ಬಿಡಿ, ಪತ್ರಿಕೆ ಓದೋ ಸಮಯ ಸಹ ಗುಳುಂ.. ಈಗೀಗ ರಾತ್ರಿ ಸಂಪದಕ್ಕೆಂದು ಮೀಸಲಿಟ್ಟ ಸಮಯವನ್ನೂ ನುಂಗುತ್ತಿದೆ. ( ಎಲ್ಲರನ್ನು ದೇವನಹಳ್ಳಿ ಕೋಟೆ ಹತ್ತಿಸುವೆ ಎಂದು ಹೇಳಿ ಕರಕೊಂಡು ಹೋಗಿ, ಕೋಟೆ ಬಾಗಿಲಲ್ಲಿ ಬಿಟ್ಟು ಬಂದಿರುವೆ.:( ಕಲ್ಲಂಗಡಿ ಸಿಪ್ಪೆಯ ದೋಸೆ, ಪಲ್ಯ ರೆಡಿಯಾಗಿದೆ- ಸಂಪದಿಗರಿಗೆ ಬಡಿಸಲು ಟೈಮಿಲ್ಲ :( )
ಪುರುಸೋತ್ತಿಲ್ಲ ಅಂದರೆ ನೀವು "ಸೋಮಾರಿ" (>> ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ) ಅನ್ನುವಿರಿ! ಏನು ಮಾಡಲಿ?
ಉ: LIFT ಬಗ್ಗೆ ಜಾಗ್ರತೆ..
ನಿಜ ಗಣೇಶರೇ ! ಲಿಫ್ಟ್ ಬಗ್ಗೆ, ಲಿಫ್ಟ್ ನೀಡುವರ ಬಗ್ಗೆ, ಲಿಫ್ಟ್ ಕೊಟ್ಟು ಮೇಲೆ ಕೂರಿಸಿ ಏಣಿ ಎಳೆಯುವವರ ಬಗ್ಗೆ ... ತುಂಬಾ ಹುಷಾರಾಗಿ ಇರಬೇಕು !!
In reply to ಉ: LIFT ಬಗ್ಗೆ ಜಾಗ್ರತೆ.. by bhalle
ಉ: LIFT ಬಗ್ಗೆ ಜಾಗ್ರತೆ..
:) :) ನಿಜ ಭಲ್ಲೇಜಿ.
ಬಡವರನ್ನು ಲಿಫ್ಟ್ ಮಾಡುತ್ತೇವೆ, ದಲಿತರನ್ನು... ಎಂದೆಲ್ಲಾ ಭಾಷಣ ಬಿಗಿಯುವ ಲಿಫ್ಟ್ ಸ್ಪೆಷಲಿಸ್ಟ್‌ಗಳು ದಿನಾ ಬರುತ್ತಿದ್ದಾರೆ. ಅವರ ಹತ್ತಿರಾನೇ ಖರ್ಚಿಲ್ಲದೇ ರಿಪೇರಿ ಮಾಡಿಸಬಹುದಿತ್ತು. :)