MP3 ಕಡತಗಳನ್ನು ತುಂಡರಿಸುವುದು ಹೇಗೆ ?
ಆಡಿಯೋ ಕ್ಯಾಸೆಟ್ ಗಳಲ್ಲಿನ ಹಾಡುಗಳನ್ನು MP3 ಗೆ ಬದಲಿಸಲು ಒಂದು ಫಿಲಿಪ್ಸ್ ಸಿಸ್ಟಮ್ ತೆಗೆದುಕೊಂಡಿದ್ದನ್ನು ಹಿಂದೆ ಯಾವಾಗಲೋ ಹೇಳಿದ್ದೇನೆ . ( ಒಳ್ಳೆಯ ಟೇಪ್ ರಿಕಾರ್ಡರ್ ಇದ್ದರೆ ಸಾಕು , ಒಂದು chord ಮಾತ್ರ ಖರೀದಿಸಿ , ಅದಕ್ಕಾಗಿ ಇರುವ ಪುಕ್ಕಟೆ ಸಾಫ್ಟ್ ವೇರ್ ಹಾಕ್ಕೊಂಡು ನಿಮ್ಮ ಕಂಪ್ಯೂಟರ್ ಗೆ ಸಂಗೀತವನ್ನು ಸಾಗಿಸಿಕೊಳ್ಳಬಹುದು . ಅದರ ಬಗ್ಗೆಯೂ ಸಂಪದದಲ್ಲೇ ಎಲ್ಲೋ ಬರಹ ಇದೆ).
ನನ್ನ ಗೆಳೆಯರೊಬ್ಬರಿಗೆ ಈ ವಿಷಯ ಹೇಳಿದಾಗ ತಮ್ಮ ಹತ್ತಿರವಿದ್ದ ಹತ್ತು ಕ್ಯಾಸೆಟ್ ದಯಪಾಲಿಸಿದರು. MP3 ಗೆ ಬದಲಿಸಿ ಕೊಡಲು ಹೇಳಿದರು . ಫಿಲಿಪ್ಸ್ ಸಿಸ್ಟಮ್ ನಲ್ಲಿ USB ಡ್ರೈವ್ ಹಾಕಿ ರೆಕಾರ್ಡ್ ಮತ್ತು ಸ್ಟಾಪ್ ಬಟನ್ ಒತ್ತಬೇಕು. ಆದರೆ ಕ್ಯಾಸೆಟ್ ನಲ್ಲಿ ಆಯಾ ಹಾಡು ಮುಗಿದಾಗ ಸ್ಟಾಪ್ ಒತ್ತಿ ಮುಂದಿನ ಹಾಡು ಶುರುವಾಗುವ ಮುನ್ನ ಮತ್ತೆ ರೆಕಾರ್ಡ್ ಬಟನ್ ಒತ್ತಬೇಕು . ಅಂದರೆ ಅದು ಪ್ಲೇ ಆಗುತ್ತಿರುವಾಗ ಅದರ ಮುಂದೇ ಇರಬೇಕು . ಅತ್ತಿತ್ತ ಗಮನ ಹರಿಸುವಂತಿಲ್ಲ . ಒಂದೂವರೆ ಗಂಟೆಯ ಹತ್ತು ಕ್ಯಾಸೆಟ್ ಗಳು ! ಅಂದರೆ ಹದಿನೈದು ಗಂಟೆ ! ಇಷ್ಟಕ್ಕೂ ಅಲ್ಲಿರೋದೆಲ್ಲ ನನಗೆ ಆಸಕ್ತಿಯದಲ್ಲ. ಮತ್ತೆ ಮುಂದೇನು ಗತಿ ?
ಸರಿ ಒಂದು ಕ್ಯಾಸೆಟ್ ನ ಒಂದು ಬದಿಯನ್ನು ಪ್ಲೇ ಮಾಡಿ ರೆಕಾರ್ಡ್ ಒತ್ತಿ ಬೇರೆ ರೂಮಿಗೆ ಹೋದೆ. ಒಂದು ಗಂಟೆಯ ನಂತರ ಯಾವಾಗಲೋ ನೋಡಿದಾಗ ಕ್ಯಾಸೆಟ್ ಮುಗಿದಿತ್ತು . ೪೫ ನಿಮಿಷದ ಕ್ಯಾಸೆಟ್ ರೆಕಾರ್ಡ್ ಆಗಿತ್ತು . ಈ ತರಹ ಹತ್ತು ಕ್ಯಾಸೆಟ್ ಗಳಿಂದ ೪೫ ನಿಮಿಷಗಳ ೨೦ ಕಡತಗಳೇನೋ ಸಿಕ್ಕಬಹುದು. ಆದರೆ ಪ್ರತಿ ಕಡತದಲ್ಲಿನ ಹಾಡುಗಳು ( ಅಥವಾ ಇನ್ನೇನೋ ) ಬೇರೆ ಬೇರೆ ಕಡತಗಳಾಗಿದ್ದರೆ ಒಳ್ಳೇದಲ್ಲವೇ ? ಆ ರೀತಿ MP3 ಕಡತಗಳನ್ನು ತುಂಡರಿಸುವುದು ಹೇಗೆ ?
ಸಾಮಾನ್ಯವಾಗಿ ಎಲ್ಲರೂ ವಿಂಡೋಸ್ ಬಳಸಿದರೆ ಉಬುಂಟು-ಲಿನಕ್ಸ್ ಬಳಸುತ್ತೀನಿ. MP3 split linux ಅಂತ ಗೂಗಲಿಸಿ ನೋಡಿದೆ. ಉಬುಂಟು ಸಾಫ್ಟ್ ವೇರ್ ಸೆಂಟರ್ ನಲ್ಲೇ ಅದಕ್ಕೆ ತಕ್ಕ ತಂತ್ರಾಂಶ ಇರುವುದು ತಿಳಿಯಿತು . Mp3splt-gtk audio splitter ಅನ್ನು ಹಾಕಿಕೊಂಡೆ. ಈ ತರ ತಂತ್ರಾಂಶಗಳನ್ನು ಹಾಕಿಕೊಳ್ಳುವುದು ಉಬುಂಟುನಲ್ಲಿ ಬಲೇ ಸುಲಭ . ಕ್ಲಿಕ್ ಮಾಡಿದರಾಯಿತು , ಡೌನ್ಲೋಡ್ ಆಗಿ ಇನ್ ಸ್ಟಾಲ್ ಆಗಿಬಿಡುತ್ತವೆ.
ಆ ತಂತ್ರಾಂಶ ದ ಆಯ್ಕೆಗಳು ಬಳಸುವ ವಿಧಾನ - ಬಗೆ ಬಗೆಯಲ್ಲಿ ಪ್ರಯತ್ನಿಸಿ ತಿಳಿದುಕೊಂಡೆ .
ಬಳಕೆಯು ಬಲು ಸುಲಭ . ಕಡತವನ್ನು ಎಲ್ಲೆಲ್ಲಿ ತುಂಡರಿಸಬೇಕೆಂದು ಗುರುತಿಸಿದರೆ ಆಯಿತು .
ಹೀಗಾಗಿ ನಾನು ಹದಿನೈದು ಗಂಟೆ ಅದರ ಮುಂದೆ ಕೂತಕೊಳ್ಳ ಬೇಕಿಲ್ಲ! ಹೆಚ್ಚೆಂದರೆ ಒಂದು ಗಂಟೆಯ ಕೆಲಸ ಅನ್ನಿ !
ಜೈ ಲಿನಕ್ಸ್ ! ಜೈ ಉಬುಂಟು !!
Comments
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?
In reply to ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ? by vikashegde
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?
In reply to ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ? by vikashegde
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?
In reply to ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ? by vikashegde
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?
In reply to ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ? by vikashegde
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?
ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?